ದೀಪಾವಳಿ ಕವಿಗೋಷ್ಠಿಯಲ್ಲಿ ಬೆಳಕಿನ ಕವಿತೆಗಳ ಕಲರವ

ಆಪ್ತ ನ್ಯೂಸ್ ಶಿರಸಿ:
ಅಕ್ಷರ ಚಿಂತನ ಹಾಗೂ ಆಪ್ತ ನ್ಯೂಸ್ ಸಹಯೋಗದಲ್ಲಿ ನಡೆದ ದೀಪಾವಳಿ ಕವಿಗೋಷ್ಠಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಕವಿಗೋಷ್ಠಿಯಲ್ಲಿ 25 ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿ, ಹಬ್ಬದ ಸಂತಸದ ಜೊತೆಗೆ ಸಮಾಜಮುಖಿ ಸಂದೇಶವನ್ನೂ ಸಾರಿದರು.
ಸಲ್ಮಾ ಭಾನು, ಗಣೇಶ್, ಸಹನಾ, ದೀಪಾ, ಮಲ್ಲಿಕಾರ್ಜುನ್, ಚಂದ್ರಕಲಾ, ಮೇಘಾ, ಮಂಗಲಾ, ವೀಣಾ, ಜಡೆಪ್ಪ, ಮಂಜುನಾಥ್ ಹೆಗಡೆ ಹೀಗೆ ಹಲವಾರು ಸಾಹಿತಿಗಳು ತಮ್ಮ ಕವನಗಳನ್ನು ವಾಚನ ಮಾಡಿದರು.
ಅಕ್ಷರನಾದ ಪಬ್ಲಿಕೇಶನ್‌ನ ಶ್ರುತಿ ಹಾಗೂ ತಾರಾ ಅವರು ತಮ್ಮ ಮನದಾಳದ ಮಾತುಗಳ ಜೊತೆಗೆ ಮನಮುಟ್ಟುವ ಕವಿತೆಗಳನ್ನು ವಾಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಚುಟುಕು ಸಾಹಿತಿ ದತ್ತಗುರು ಕಂಠಿ ಹಾಗೂ ಬರಹಗಾರ್ತಿ ಎನ್ ಆರ್ ರೂಪಶ್ರೀ ಅವರು ಕವನ ವಾಚನ ಮಾಡುವುದರ ಜೊತೆಗೆ ಕಿವಿಮಾತುಗಳನ್ನು ಹೇಳಿದರು.
ಚಿಂತಕ ಪ್ರಶಾಂತ್ ಹೆಗ್ಗಾರ್ ಅವರು ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದು, ಕವಿತೆಗಳನ್ನು ವಿಮರ್ಶಿಸಿದರು. ಇವರ ಮಾತುಗಳು ಬಹಳ ಅರ್ಥಪೂರ್ಣವಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ವಿನಯ್ ಹೆಗಡೆ ಹಾಗೂ ವಿನಯ್ ನಾಯ್ಕ್ ಅವರು ಸರಳ ಹಾಗೂ ಮನರಂಜಕವಾಗಿ ನಡೆಸಿದರು.
What's Your Reaction?






