ಕನ್ನಡ ಪದಗಳನ್ನಷ್ಟೇ ಬಳಸಿ ಆಡುವ ಕಲೆ ತಾಳಮದ್ದಳೆ: ಲೋಕೇಶ್ ಹೆಗಡೆ

Oct 29, 2025 - 15:43
 0  59
ಕನ್ನಡ ಪದಗಳನ್ನಷ್ಟೇ ಬಳಸಿ ಆಡುವ ಕಲೆ ತಾಳಮದ್ದಳೆ: ಲೋಕೇಶ್ ಹೆಗಡೆ

ಆಪ್ತ ನ್ಯೂಸ್ ಶಿರಸಿ:

ಯಕ್ಷಗಾನ ಮತ್ತು ತಾಳಮದ್ದಲೆಯಲ್ಲಿ ಮಾತ್ರ ಶುದ್ಧ ಕನ್ನಡವನ್ನು ಬಳಸಲಾಗುತ್ತಿದೆ. ನಾವು ಪ್ರತಿನಿತ್ಯ ಕನ್ನಡ ಭಾಷೆಯಲ್ಲಿಯೇ ಮಾತನಾಡುವಾಗ ಎಷ್ಟೋ ಆಂಗ್ಲ ಪದಗಳನ್ನು ಬಳಸುತ್ತೇವೆ. ಆದರೆ ಯಕ್ಷಗಾನ ಕಲೆಯಲ್ಲಾಗಲಿ ಅಥವಾ ತಾಳಮದ್ದಲೆಯಲ್ಲಿ ಆಗಲಿ ಅರ್ಥದಾರಿಗಳು ಆಂಗ್ಲ ಪದವನ್ನು ಬಳಸದೆ ಶುದ್ಧವಾದ ಕನ್ನಡ ಪದಗಳನ್ನೇ ಉಪಯೋಗಿಸಿ ಮಾತನಾಡುತ್ತಾರೆ ಎಂದು ಶಿರಸಿ ಲಯನ್ಸ್ ಕ್ಲಬ್  ಮಾಜಿ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಲೋಕೇಶ್ ಹೆಗಡೆ ಹೇಳಿದರು.
ಆದರ್ಶ ವನಿತಾ ಸಮಾಜ ಶಿರಸಿಯಲ್ಲಿ, ಕಮಲಬಿಂದು ಬಳಗ- ನಾಗರಕುರ ಇದರ ವತಿಯಿಂದ  ನಡೆದ  ತಾಳಮದ್ದಳೆ - "ಮೋಕ್ಷತ್ರಯ" ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಳಮದ್ದಳೆ ಹಾಗೂ ಯಕ್ಷಗಾನಕ್ಕೆ ತುಂಬಾ ಅಧ್ಯಯನ ಬೇಕು ಮತ್ತು ಜ್ಞಾನ ಬೇಕು. ಇಂತಹ ಕಲೆಯನ್ನು ನಾವು ಉಳಿಸಿಕೊಳ್ಳುವ ಮತ್ತು ಮುಂದಿನ ಪೀಳಿಗೆಯವರಿಗೆ ಕಲಿಸುವ ಅಗತ್ಯ ತುಂಬಾ ಇದೆ ಎಂದು  ಹೇಳಿದರು. ಮತ್ತು ಕಮಲಬಿಂದು ಬಳಗದ ಕಾರ್ಯವೈಕರಿಯನ್ನು ಶ್ಲಾಘಿಸಿದರು. 
ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳಾದ ಮಂಗಳ ಹಬ್ಬು ಅಧ್ಯಕ್ಷರು, ಆದರ್ಶ ವನಿತಾ  ಸಮಾಜ ಶಿರಸಿ, ಇವರು ಮಾತನಾಡಿ, ತಮ್ಮ ಸಂಘಟನೆಯು ಮಹಿಳೆಯರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಮಲಬಿಂದು ಬಳಗದ ತಾಳಮದ್ದಳೆ ಕಾರ್ಯಕ್ರಮವು ಇಲ್ಲಿ ನಡೆಯುತ್ತಿರುವುದು ನಮಗೆ ಸಂತೋಷವನ್ನುಂಟು ಮಾಡಿದೆ. ಅಲ್ಲದೆ ಅವರ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ. ಎಂದು ತಿಳಿಸಿದರು.
ಕಮಲಬಿಂದು ಬಳಗದ ಸಂಚಾಲಕರಾದ ಕೇಶವ ಹೆಗಡೆ ನಾಗರಕುರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ಅರ್ಥದಾರಿಗಳಾದ ಸುಬ್ರಾಯ ಹೆಗಡೆ ಕೆರೆ ಕೊಪ್ಪ ಇವರು ವಂದನಾರ್ಪಣೆಗೈದರು. ಅನಂತರ "ಕಮಲಬಿಂದು ಬಳಗ- ನಾಗರಕುರ ಇದರ ಸದಸ್ಯರಿಂದ "ಜಟಾಯು ಮೋಕ್ಷ " ಎಂಬ ತಾಳಮದ್ದಳೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0