ಈ ಸಾರಿಯ ಸಂಕಲ್ಪ ಉತ್ಸವ ಆಧ್ಯಾತ್ಮಿಕ ಉತ್ಸವ: ಬೀರಣ್ಣ ನಾಯ್ಕ್ ಮೊಗಟಾ
ಆಪ್ತ ನ್ಯೂಸ್ ಯಲ್ಲಾಪುರ:
ಕಲೆ ಸಂಸ್ಕೃತಿಯ ಆರಾಧನೆ ಮಾಡುತ್ತ ಸಂಕಲ್ಪ ಸಂಸ್ಥೆ ಬೆಳೆದು ಬಂದಿದೆ ಎಂದು ಶಿರಳಗಿ ಶ್ರೀಬ್ರಹ್ಮಾನಂದ ಭಾರತೀ ಸ್ವಾಮೀಜೀ ನುಡಿದರು.
ಅವರು ರವಿವಾರ ರಾತ್ರಿ ಪಟ್ಟಣದ ಗಾಂಧಿ ಕುಟೀರದಲ್ಲಿ 39 ನೇಯ ಸಂಕಲ್ಪ ಉತ್ಸವದಲ್ಲಿ ಪಾಲ್ಗೊಂಡು, ಸಾಧಕರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ಸತ್ಕಾರ್ಯ ಸೃಷ್ಠಿಯ ಮೊದಲ ಕರ್ಮ ಯಜ್ಞ. ಭಾರತೀಯ ಜೀವನ ಶೈಲಿ ಸಂಪೂರ್ಣ ವಾಗಿ ಯಜ್ಞಮಯ ಬದುಕು. ಭಗವದರ್ಪಿತವಾಗಿ ಯಜ್ಞ ದೋಪಾದಿಯ ಕರ್ಮಗಳ ಮೂಲಕ ಬದುಕನ್ನು ಸಾಂಗತ್ಯ ಗೊಳಿಸಿಕೊಳ್ಳಬೇಕು. ರಾಮನಾಮ ನಾಮ ಸ್ಮರಣೆಯಿಂದ ಪಾಪ ಕಳೆದುಕೊಂಡು ಜನ್ಮ ಪಾವನವಾಗಿಸಿ ಕೊಳ್ಳಬೇಕು. ಸಂಕಲ್ಪ ಜ್ಞಾನ ಯಜ್ಞದ ಮೂಲಕ ಭಗವಂತನ ಆರಾಧಿಸುವ ಕಲೆಯ ಆರಾಧನೆಯ ಮೂಲಕ ಸಮಾಜಿಕ ಪರಿವರ್ತನೆ ಯಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದು ಹೆಮ್ನೆಪಡುವಂಥದ್ದು,ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವ ಮಹತಗಕಾರ್ಯ ಅಷ್ಟೇ ಮುಖ್ಯವಾದುದು ಎಂದರು.
ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನ್ನಾಡಿ, ಈ ಭಾರಿ ಸಂಕಲ್ಪ ಉತ್ಸವ ಆದ್ಯಾತ್ಮಿಕ ಉತ್ಸವವಾಗಿದೆ.ಸಮಾಜಕ್ಕೆ ಯತಿಗಳಿಂದ ಸರಿಯಾದ ಮಾರ್ಗದರ್ಶನ ಮಾಡಿಸುವ ಕೆಲಸಮಾಡುತ್ತಿದೆ.ವೃತ್ತಿಯ ಪಾವಿತ್ರ್ಯತೆ ಮತ್ತು ಪತ್ರಿಕೋಧ್ಯಮದಲ್ಲಿ ನಿರಂತರತೆ ಹಾಗೂ ಹೆಸರು ಉಳಿಸಿಕೊಂಡು ಬಂದವರಿಗೆ ಸಂಕಲ್ಪ ಪ್ರಶಸ್ತಿ ಸಂದಿದೆ ಎಂದು ಗಟ್ಟಿಯಾಗಿ ಹೇಳಬಲ್ಲೆ.ನನ್ನದೇ ಶಿಷ್ಯರಾದವರು ಎಂಬ ಹೆಮ್ಮೆಯೂ ನನಗಿದೆ ಎಂದರು.
ಶ್ರೀಗಳಿಂದ ಸಂಕಲ್ಪ ಪ್ರಶಸ್ತಿ ಪ್ರಧಾನ:
ಪತ್ರಿಕಾರಂಗ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ನರಸಿಂಹ ಸಾತೋಡ್ಡಿ, ಹಾಗೂ ಕವಿ ಬರಹಗಾರ ಪತ್ರಕರ್ತ ಸುಬ್ರಾಯ ಬಿದ್ರೆಮನೆ ಅವರಿಗೆ ಶ್ರೀಗಳು ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಿದರು.
ರೈತ ಮುಖಂಡ ಪಿ ಜಿ ಭಟ್ಟ ಬರಗದ್ದೆ,ಸಹಕಾರಿ ಪಿ ಜಿ ಹೆಗಡೆ ಕಳಚೆ,ಸಂಕಲ್ಪ ಉಪಾಧ್ಯಕ್ಷ ಪ್ರಶಾಂತ ಹೆಗಡೆ ಉಪಸ್ಥಿತರಿದ್ದರು.
ಪ್ರಸಾದಿನಿ ಭಟ್ಟ ಚಿಕ್ಯಾನಮನೆ ಪ್ರಾರ್ಥಿಸಿದರು.ರವಿ ಭಟ್ಟ ಬರಗದ್ದೆ ಸ್ವಾಗತಿಸಿದರು. ಪ್ರಸಾದ ಹೆಗಡೆ ಪ್ರಸ್ತಾಪಿಸಿದರು. ಶಿಕ್ಷಕ ಜೈರಾಮ ಭಟ್ಟ ನಿರೂಪಿಸಿದರು. ರಾಮಚಂದ್ರ ಚಿಕ್ಯಾನಮನೆ ವಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



