ಸಾಂಸ್ಕೃತಿಕ ಕೇಂದ್ರ ಶಿರಸಿಯಲ್ಲಿ ವಿಶಿಷ್ಟ ಕಾರ್ಯಕ್ರಮಗಳು ಮೂಡಿಬರಲಿ: ಆಲ್ಮನೆ

Oct 12, 2025 - 20:53
 0  71
ಸಾಂಸ್ಕೃತಿಕ ಕೇಂದ್ರ ಶಿರಸಿಯಲ್ಲಿ ವಿಶಿಷ್ಟ ಕಾರ್ಯಕ್ರಮಗಳು ಮೂಡಿಬರಲಿ: ಆಲ್ಮನೆ

ಆಪ್ತ ನ್ಯೂಸ್ ಶಿರಸಿ:

ಶಿರಸಿ ಎಂದರೆ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಕೇಂದ್ರವಾಗಿದೆ. ಶಿರಸಿ ಯಾವಾಗಲೂ ಅಸಾಮಾನ್ಯ ಕಾರ್ಯಕ್ರಮಗಳನ್ನು ಮಾಡುತ್ತಿದೆ.  ವಿಭಿನ್ನ ವಿಶಿಷ್ಟತೆಯನ್ನೊಳಗೊಂಡು ದಾಖಲೆಯಾಗುವಂತಹ ಕಾರ್ಯಕ್ರಮಗಳನ್ನು ಸಾಹಿತ್ಯ ಸಂಘಟನೆಗಳು ಮಾಡಬೇಕು ಎಂದು ಹಿರಿಯ ಸಾಹಿತಿ ಆರ್ ಡಿ ಹೆಗಡೆ ಆಲ್ಮನೆ ಹೇಳಿದರು.
ಭಾನುವಾರ ನಗರದ ನೆಮ್ಮದಿ ಕುಟೀರದಲ್ಲಿ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಸಿಂಚನ ಬಳಗದ ವತಿಯಿಂದ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಯನ್ನು ಮಂಜುನಾಥ ಹೂಡ್ಲಮನೆ ಅವರಿಗೆ ನೀಡಿರುವುದು ಸ್ವಾಗತಾರ್ಹ ವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಿಂಚನ ಬಳಗ ಕೊಡಮಾಡುವ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಹಾಗೂ ಆಯುರ್ವೇದ ವೈದ್ಯ ಮಂಜುನಾಥ ಹೂಡ್ಲಮನೆ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು,  ನಾನು ಸಾಹಿತ್ಯ ಕ್ಷೇತ್ರಕ್ಕೆ ಬರಲು ಮೂಲ ಕಾರಣ ದತ್ತಗುರು ಕಂಠಿ ಹಾಗೂ ಜಿ.ಎ ಹೆಗಡೆ ಸೊಂದಾ ಅವರು.‌ ಹಲವು ಪುಸ್ತಕಗಳನ್ನು ಬರೆದಿದ್ದೇನೆ.
ಸಾಹಿತ್ಯ ಸಿಂಚನ ಬಳಗದವರು ನನಗೆ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಯನ್ನು ನೀಡಿರುವುದು ಸಂತಸ ತಂದಿದೆ ಎಂದರು.
ರಾಘವೇಂದ್ರ ಬೆಟ್ಟಕೊಪ್ಪ ಸಾಹಿತ್ಯ ಸಿಂಚನ ಬಳಗದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0