ಕೆ.ಡಿ.ಸಿ.ಸಿ ಚುನಾವಣೆಯಲ್ಲಿ ಗೆಲುವು: ಕೃಷ್ಣಾ ದೇಸಾಯಿಗೆ ಅಭಿಮಾನಿ ಬಳಗದಿಂದ ಗೌರವ ಸನ್ಮಾನ

Nov 3, 2025 - 20:45
 0  97
ಕೆ.ಡಿ.ಸಿ.ಸಿ ಚುನಾವಣೆಯಲ್ಲಿ ಗೆಲುವು: ಕೃಷ್ಣಾ ದೇಸಾಯಿಗೆ ಅಭಿಮಾನಿ ಬಳಗದಿಂದ ಗೌರವ ಸನ್ಮಾನ

ಆಪ್ತ ನ್ಯೂಸ್ ಜೋಯಿಡಾ:

ಜೋಯಿಡಾ ತಾಲೂಕಿನ ಪ್ರಧಾನಿ ಸಹಕಾರಿ ಸಂಘದ ಅಧ್ಯಕ್ಷ, ಹಾಲಿ ಕೆಡಿಸಿಸಿ ಚುನಾವಣೆಯಲ್ಲಿ ಜೋಯಿಡಾ ತಾಲೂಕಿನಿಂದ ಗೆದ್ದ ಕೃಷ್ಣ ದೇಸಾಯಿ ಫಣಸೋಲಿ ಅವರಿಗೆ ಅವರ ಅಭಿಮಾನಿ ಬಳಗದಿಂದ ಪ್ರಧಾನಿ ಸಹಕಾರಿ ಸಂಘದ ಸಭಾ ಭವನದಲ್ಲಿ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಾ ದೇಸಾಯಿ ಇದು ನನ್ನ ಗೆಲುವಲ್ಲ ಎಲ್ಲಾ ಸಹಕಾರಿ ಸಂಘಗಳ ಹಾಗೂ ಎಲ್ಲಾ ಸಹಕಾರಿಗಳ ಗೆಲುವು , ನನ್ನನ್ನು 4 ಬಾರಿ ಆಯ್ಕೆ ಮಾಡಿದ ನಿಮಗೆಲ್ಲ ನನ್ನ ವಂದನೆಗಳು, ಸಹಕಾರಿ ಕ್ಷೇತ್ರದಲ್ಲಿ ತಾಲೂಕಿನಲ್ಲಿ ಯಾವ ಕೆಲಸ ಆಗಬೇಕು ಎಂಬುದನ್ನು ಗಮನಿಸಿ ಕೆಲಸ ಮಾಡುತ್ತೇನೆ ಎಂದು ಎಲ್ಲಾ ಅಭಿಮಾನಿ ಬಳಗಕ್ಕೆ ಅಭಿನಂದಿಸಿದರು.
ನಂದಿಗದ್ದಾ ಸಹಕಾರಿ ಸಂಘದ ಉಪಾಧ್ಯಕ್ಷ ಸುದರ್ಶನ ‌ಭಾಗ್ವತ್ ಮಾತನಾಡಿ ಹಿರಿಯ ಸಹಕಾರಿ ಕ್ಷೇತ್ರದ ಧುರೀಣ ಕೃಷ್ಣಾ ದೇಸಾಯಿ ಗೆಲುವು ನಮಗೆ ಸಂತಸ ತಂದಿದೆ, ನಮ್ಮ ಬೇಡಿಕೆ ಏನೆಂದರೆ ಜೋಯಿಡಾ ಕೆ‌ಡಿಸಿಸಿ ಬ್ಯಾಂಕ್ ನಲ್ಲಿ ಬ್ಯಾಂಕ್ ನ ಸೂಪರವೈಜರ್ ನೇಮಕ ಮಾಡಬೇಕು ಇದರಿಂದ ಗುಂದ, ಉಳವಿ, ಕುಂಬಾರವಾಡಾ, ಜೋಯಿಡಾ, ಪ್ರಧಾನಿ ಭಾಗದ ಸೊಸೈಟಿ ಗಳಿಗೆ ದೂರದ ಜಗಲಬೇಟ ಶಾಖೆಗೆ ಹೋಗುವುದು ತಪ್ಪುತ್ತದೆ, ಸಿಬ್ಬಂದಿಗಳಿಗೆ ಕೆಲಸವು ಕಡಿಮೆ ಆಗುತ್ತದೆ ಕೂಡಲೇ ಈ ವ್ಯವಸ್ಥೆ ಮಾಡಿಕೊಡಿ ಎಂದರು. 


ಕೃಷ್ಣ ದೇಸಾಯಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಂದಿಗದ್ದಾ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸುದರ್ಶನ ಭಾಗ್ವತ್, ಸದಸ್ಯರಾದ ಶ್ರೀನಾಥ ದೇಸಾಯಿ, ಶಶಿಕಾಂತ ಹೆಗಡೆ,ಸಂದೇಶ ದೇಸಾಯಿ, ಭಾರತೀಯ ಕಿಸಾನ ಸಂಘದ ಜಿಲ್ಲಾ ಸದಸ್ಯ ಶ್ರೀಧರ ಭಾಗ್ವತ್, ಬಿಜೆಪಿ ಪಕ್ಷದ ಚಂದ್ರಶೇಖರ ಸಾವರಕರ, ಶ್ರೀಪಾದ ದೇಸಾಯಿ, ಎ ಜಿ ಹೆಗಡೆ, ದಯಾಘನ ಹೆಗಡೆ ಇದ್ದರು. ತನಗೆ ಸನ್ಮಾನ ಮಾಡಿದ ಎಲ್ಲರಿಗೂ ಕೃಷ್ಣಾ ದೇಸಾಯಿ ಸನ್ಮಾನಿಸಿ ಗೌರವಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0