ಹದಗೆಟ್ಟ ರಸ್ತೆಯಿಂದ ಗ್ರಾಮಸ್ಥರಿಗೆ ಸಂಕಟ; ದುರಸ್ತಿಗೆ ಮನವಿ
ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಹುಡಸಾ ಗ್ರಾಮದಿಂದ ವಿಡೇಗಾಳಿ, ಕೈಟಾ ಸೇರಿ ಇನ್ನುಳಿದ ಊರುಗಳಿಗೆ, ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ ರಸ್ತೆಯು ಸಂಪೂರ್ಣ ಹದಗೆಟ್ಟಿದೆ.
ಸ್ಥಳೀಯರು ದಿನನಿತ್ಯದ ಕೆಲಸ ಕಾರ್ಯಗಳಿಗೆ,ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಂಚರಿಸುವ ಸಮಯದಲ್ಲಿ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಂತು ರಸ್ತೆಯು ಅಕ್ಷರಶಃ ಕೆಸರು ಗದ್ದೆಯಂತಾಗಿ ನಡೆದುಕೊಂಡು ಹೋಗಲು ಕಷ್ಟವಾಗುತ್ತದೆ.
ಈ ರಸ್ತೆಯ ಗ್ರಾಮಗಳಲ್ಲಿ ವಾಸಿಸುವ ಕುಟುಂಬದ ಮಹಿಳೆಯರಿಗೆ ದುಡಿಮೆಯ ಆಧಾರವಾಗಿದ್ದು, ದಿನನಿತ್ಯದ ಕೆಲಸಕ್ಕೆ, ಮಕ್ಕಳನ್ನು ಶಾಲೆಗೆ ಕಳುಹಿಸಲು, ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತರಲು, ಕುಟುಂಬದ ಪುರುಷರು ದುಡಿಯಲಿಕ್ಕೆ ಹೊರಗಡೆ ಹೋದಾಗ ಮಹಿಳೆಯರು ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ ಎಂದು ಇಲ್ಲಿನ ಮಹಿಳೆಯರು ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.
ನಾವು ದಿನನಿತ್ಯ ದುಡಿದು ತಿನ್ನುವ ಸಾಮಾನ್ಯ ಜನ,ದಿನನಿತ್ಯದ ಬದುಕಿನ ಕೆಲಸಕ್ಕೆ,ಶಾಲೆಗೆ ಮಕ್ಕಳನ್ನು ಮುಟ್ಟಿಸಲು ತೀವ್ರ ತೊಂದರೆಯಾಗುತ್ತಿದ್ದು, ರಸ್ತೆಯನ್ನು ದುರಸ್ತಿ ಮಾಡಬೇಕೆಂಬ ಕೋರಿಕೆ ಇಲ್ಲಿಯ ಮಹಿಳಾ ಪಾಲಕರದ್ದಾಗಿದೆ.
ಸುಮಾರು 3 ಕಿ.ಮೀ ಉದ್ದದ ಈ ರಸ್ತೆಯನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ವಋತು ರಸ್ತೆಯನ್ನಾಗಿ ಶೀಘ್ರ ಮಾಡಿಕೊಡಬೇಕೆಂಬ ಮಾಧ್ಯಮದ ಮೂಲಕ ಮನವಿ ಇಲ್ಲಿನ ಎಲ್ಲಾ ಗ್ರಾಮಸ್ಥರದ್ದಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



