ಯಲ್ಲಾಪುರ ಗ್ರಾಮೀಣ ರಸ್ತೆಗಳಿಗೆ ಅನುದಾನ ಮಂಜೂರು: ಹೆಬ್ಬಾರ
ಆಪ್ತ ನ್ಯೂಸ್ ಯಲ್ಲಾಪುರ:
ಯಲ್ಲಾಪುರ ತಾಲೂಕಿನ ಹಿತ್ಲಕಾರಗದ್ದೆ–ಮಾಗೋಡ ಹಾಗೂ ನಂದೊಳ್ಳಿ–ಅಣಲಗಾರ ಗೋಪಾಲಕೃಷ್ಣ ದೇವಸ್ಥಾನ (ಗ್ರಾಮೀಣ ರಸ್ತೆ) ನಿರ್ಮಾಣಕ್ಕಾಗಿ ಒಟ್ಟು 9 ಕೋಟಿ 90 ಲಕ್ಷ ರೂ. ಅನುದಾನ ರಾಜ್ಯ ಸರಕಾರದಿಂದ ಮಂಜೂರಾಗಿರುವುದಾಗಿ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಈ ಎರಡು ಪ್ರಮುಖ ರಸ್ತೆ ಯೋಜನೆಗಳು ಗ್ರಾಮೀಣ ಭಾಗದ ಸಂಚಾರಕ್ಕೆ ಅನೂಕುಲವಾಗಲಿದೆ ಜನಜೀವನ ಸುಗಮಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ವಿಶೇಷವಾಗಿ ಗೋಪಾಲಕೃಷ್ಣ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯ ನವೀಕರಣವು ಭಕ್ತರ ಸಂಚಾರ, ಸ್ಥಳೀಯ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲಿದೆ. ಹಿತ್ಲಕಾರಗದ್ದೆ–ಮಾಗೋಡ ಪ್ರಮುಖ ಮಾರ್ಗದ ಸುಧಾರಣೆ ಮೂಲಕ ತಾಲೂಕಿನ ಒಳನಾಡು ಸಂಪರ್ಕತೆ ಮತ್ತಷ್ಟು ಬಲಪಡಲಿದೆ ಎಂದಿದ್ದಾರೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0



