ಯಲ್ಲಾಪುರದ ಟಿಎಂಎಸ್ ಚುನಾವಣೆ: ಮತ ಎಣಿಕೆಗೆ ನ್ಯಾಯಾಲಯದ ತಡೆಯಾಜ್ಞೆ
ಚುನಾವಣೆ ನಡೆದರೂ ನಡೆಯಲಿಲ್ಲ ಮತ ಎಣಿಕೆ! ನ್ಯಾಯಾಲಯ ನೀಡಿದ ತಡೆಯಾಜ್ಞೆಯಿಂದ ಸಿಕ್ಕಿತು ಸಕತ್ ಟ್ವಿಸ್ಟ್! ಅಭ್ಯರ್ಥಿಗಳ ಕುತೂಹಲಕ್ಕಿಲ್ಲ ತಡೆ!

ಆಪ್ತ ನ್ಯೂಸ್ ಯಲ್ಲಾಪುರ:
ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿಎಂಎಸ್ ಆಡಳಿತ ಮಂಡಳಿ ಆಯ್ಕೆಗೆ ರವಿವಾ ಮತದಾನ ಪ್ರಕ್ರಿಯೆ ನಡೆಯಿತು. ತಾಲೂಕಿನ ವಿವಿಧೆಡೆಯಿಂದ ಸಂಘದ ಸಾವಿರಾರು ಸದಸ್ಯರು ಬಂದು ಉತ್ಸಾಹದಿಂದ ಮತ ಚಲಾಯಿಸಿದರು. ಒಟ್ಟು 14 ಸ್ಥಾನಗಳಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆಯಿತು. ಹಿಂದುಳಿದ ಬ ವರ್ಗ ಹಾಗೂ ಪರಿಶಿಷ್ಟ ಜಾತಿಯ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.
ಮತ ಎಣಿಕ ಇಂದೇ ನಡೆಯಬೇಕಿಂದಿದ್ದರೂ ನ್ಯಾಯಾಲಯದ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಮತ ಎಣಿಕೆ ನಡೆಯಲಿಲ್ಲ. ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು ಎಣಿಕೆ ನಡೆಯದ ಕಾರಣ ಎಲ್ಲರ ಉತ್ಸಹ ಕುಗ್ಗಿಸಿದೆ. ಎಣಿಕೆ ಯಾವಾಗ ಎಂಬುದು ನ್ಯಾಯಾಲಯದ ಆದೇಶ ಬಳಿಕ ನಡೆಯಬೇಕಿದೆ. ನ್ಯಾಯಾಲಯದ ಆದೇಶ ಬರುವ ವರೆಗೂ ಅಭ್ಯರ್ಥಿಗಳು ಹಾಗೂ ಮತ ಚಲಾವಣೆ ಮಾಡಿದವರು ಕುತೂಹಲದಿಂದ ಕಾದು ಕುಳಿತುಕೊಳ್ಳಬೇಕಾದ ಹಾಗೂ ಯಾರು ಗೆಲ್ಲಬಹುದು ಎಂಬ ಚರ್ಚೆ ನಡೆಸುವಂತಹ ಸನ್ನಿವೇಶ ಎದುರಾಗಿದೆ.
What's Your Reaction?






