ವಾಹನ ಕಾಯ್ದೆ ಅಡಿ 110 ಪ್ರಕರಣ ದಾಖಲು 55,000 ದಂಡ ವಸೂಲಿ
ಆಪ್ತ ನ್ಯೂಸ್ ಶಿರಸಿ:
ಶಿರಸಿ ಸಂಚಾರ ಪೊಲೀಸ್ ಠಾಣೆ ಇಲಾಖೆಯಿಂದ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಪ್ರಾರಂಭವಾಗಿದ್ದು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಅ. 30ರಂದು ವಿಶೇಷ ಕಾರ್ಯಚರಣೆ ಹಮ್ಮಿಕೊಂಡು ಮೊಬೈಲ ಬಳಸುತ್ತಾ ಚಾಲನೆ, ಕರ್ಕಶ ಸೈಲೆನ್ಸರ್ ಅಳವಡಿಕೆ, ಹೆಲ್ಮೆಟ್ ರಹಿತ ಚಾಲನೆ, ಅಪಾಯಕಾರಿ ರೀತಿ ಚಾಲನೆ, ಮದ್ಯ ಸೇವಿಸಿ ವಾಹನ ಚಲಾಯಿಸುವ ಸವಾರರ ಮೇಲೆ ಭಾರತೀಯ ಮೋಟಾರು ವಾಹನ ಕಾಯ್ದೆ ಅಡಿ ಓಟ್ಟು 110 ಪ್ರಕರಣಗಳನ್ನು ದಾಖಲಿಸಿ
55000/- ರೂ ದಂಡ ವಿಧಿಸಿದ್ದಾರೆ.
ಶಿರಸಿ ಉಪವಿಭಾಗದ ಡಿಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮತ್ತು ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾರವರ ಮಾರ್ಗದರ್ಶನದಲ್ಲಿ ಶಿರಸಿ ಸಂಚಾರ ಠಾಣೆಯ PSI ದೇವೇಂದ್ರ ನಾಯ್ಕರವರ ನೇತೃತ್ವದಲ್ಲಿ ಎಎಸ್ಐ ಸಂತೋಷ್ ಶಿರಸಿಕರ್ , ಡಿ ಹೊಸಕಟ್ಟ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



