ಅಘನಾಶಿನಿ ಅಂಡರ್‌ಆರ್ಮ್ ಟ್ರೋಫಿ: ಡ್ರೀಂ ೮ ಚಾಂಪಿಯನ್
ಆಪ್ತ ನ್ಯೂಸ್ ಮುತ್ಮುರ್ಡ್:
ಮುತ್ಮುರ್ಡ್-ದಂಟಕಲ್ ಶಾಲಾ ಮೈದಾನದಲ್ಲಿ ನಡೆದ ನಾಲ್ಕನೆ ವರ್ಷದ ಅಂಡರ್‌ಆರ್ಮ್ ಪಂದ್ಯಾವಳಿಯಲ್ಲಿ ಡ್ರೀಂ ೮ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ೧೮ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ಡ್ರೀಂ ೮ ತಂಡವು ಕತ್ರಿ ಕ್ರಿಕೇಟರ್ಸ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮುತ್ಮುರ್ಡ್-ದಂಟಕಲ್ ಗ್ರಾಮದ ಅಘನಾಶಿನಿ ಗೆಳೆಯರ ಬಳಗವು ಪಂದ್ಯಾವಳಿಯನ್ನು ಆಯೋಜಿಸಿತ್ತು.
ಅಘನಾಶಿನಿ-ಬೇಡ್ತಿ ನದಿ ತಿರುವು ಹೋರಾಟಕ್ಕೆ ಬೆಂಬಲ
ಉತ್ತರ ಕನ್ನಡ ಜಿಲ್ಲೆಗೆ ಮಾರಕವಾಗಿರುವ ಅಘನಾಶಿನಿ ಹಾಗೂ ಬೇಡ್ತಿ ನದಿ ತಿರುವು ಯೋಜನೆ ವಿರೋಧಿ ಹೋರಾಟಕ್ಕೆ ಪಂದ್ಯಾವಳಿಯಲ್ಲಿ ಭಾರಿ ಜನಬೆಂಬಲ ವ್ಯಕ್ತವಾಯಿತು. ನದಿ ತಿರುವು ಯೋಜನೆ ವಿರೋಧಿಸಿ ಪೋಸ್ಟರ್ ಹಾಕಲಾಗಿತ್ತು. ಅಲ್ಲದೇ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಆಟಗಾರರು ಹಾಗೂ ವೀಕ್ಷಕರು ನದಿ ತಿರುವು ಯೋಜನೆ ವಿರೋಧಿ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0









