ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಯ ಸ್ಥಿತಿಗತಿ ಯಾವ ಹಂತದಲ್ಲಿದೆ ಗೊತ್ತಾ? ಇಲ್ಲಿ ನೋಡಿ
ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡಲಿದೆ ಈ ವರದಿ.. ಪೂರ್ತಿ ಓದಿ
ಆಪ್ತ ವಿಶೇಷ:
ಉತ್ತರ ಕನ್ನಡ ಜಿಲ್ಲೆಗೆ ಮಾರಕವಾಗಿರುವ ಇನ್ನೊಂದು ಯೋಜನೆ ಅಘನಾಶಿನಿ-ವೇದಾವತಿ ನದಿ ಜೋಡಣಾ ಯೋಜನೆ. ಈ ಯೋಜನೆ ಯಾವ ಹಂತದಲ್ಲಿದೆ ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.
ಶಿರಸಿಯ ವೈದ್ಯರಾದ ಡಾ. ರವಿಕಿರಣ ಪಟವರ್ಧನ ಅವರು ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿಗೆ ಪತ್ರ ಬರೆದಿದ್ದು, ಅವರಿಂದ ಉತ್ತರ ಬಂದಿದೆ. ಈ ಉತ್ತರದ ವಿವರಗಳು ಈ ಕೆಳಗಿನಂತಿದೆ.
ಅಘನಾಶಿನಿ–ವೇದಾವತಿ ಲಿಂಕ್ ಯೋಜನೆ ಕರ್ನಾಟಕ ರಾಜ್ಯದ ಅಂತರರಾಜ್ಯ (Intra State) ನದಿ ಜೋಡಣೆ ಯೋಜನೆಯಾಗಿದೆ. ಈ ಯೋಜನೆಯು ಮಳೆಗಾಲದಲ್ಲಿ ಪಶ್ಚಿಮಕ್ಕೆ ಹರಿಯುವ ಅಘನಾಶಿನಿ ನದಿಯ ಹೆಚ್ಚುವರಿ ನೀರಿನಲ್ಲಿ ಸುಮಾರು 994 MCM ಪ್ರಮಾಣದ ನೀರನ್ನು, ಪ್ರಸ್ತಾವಿತ ಹೇಮಗಣಿ ಬ್ಯಾರೇಜ್‌ನಿಂದ ತಿರುಗಿಸಿ, ವೇದಾವತಿ ಉಪ ಕಣಿವೆಯಲ್ಲಿನ ಈಗಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಸಾಗಿಸುವುದನ್ನು ಉದ್ದೇಶಿಸಿದೆ. ಈ ನೀರನ್ನು ಕರ್ನಾಟಕದಲ್ಲಿ ಗೃಹಬಳಕೆ ಹಾಗೂ ನೀರಾವರಿ ಅಗತ್ಯಗಳಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಈ ಲಿಂಕ್ ಯೋಜನೆಯ ಪೂರ್ವಸಾಧ್ಯತಾ ವರದಿ (Pre Feasibility Report – PFR) ಯನ್ನು NWDA ಸಂಸ್ಥೆಯು ಸಿದ್ಧಪಡಿಸುತ್ತಿದ್ದು, ವರದಿ ಪೂರ್ಣಗೊಂಡ ನಂತರ ಅದನ್ನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಶಾಜತ್‌ನಾನ್ ಕೆ.ಎಚ್ ಅವರು ಮಾಹಿತಿ ನೀಡಿದ್ದಾರೆ.\
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: http://www.nwda.gov.in ಇಲ್ಲಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0



