ಮಾತನಾಡುವಾಗ ಅನಂತಮೂರ್ತಿ ಹೆಗಡೆಗೆ ಪ್ರಜ್ಞೆ ಇರಲಿ: ಪ್ರದೀಪ ಶೆಟ್ಟಿ ಎಚ್ಚರಿಕೆ

Dec 28, 2025 - 13:18
 0  35
ಮಾತನಾಡುವಾಗ ಅನಂತಮೂರ್ತಿ ಹೆಗಡೆಗೆ ಪ್ರಜ್ಞೆ ಇರಲಿ:  ಪ್ರದೀಪ ಶೆಟ್ಟಿ ಎಚ್ಚರಿಕೆ

ಆಪ್ತ ನ್ಯೂಸ್ ಶಿರಸಿ:

ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವರು ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಹಗುರವಾಗಿ ಹಾಗೂ ಸಂಸ್ಕೃತಿಯಿಲ್ಲದ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ. ಸಾರ್ವಜನಿಕ ಜೀವನದಲ್ಲಿರುವವರು ಕನಿಷ್ಠ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು ಎಂದು ಶಿರಸಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ತೀವ್ರವಾಗಿ ಹೇಳಿದರು.

ಶಿರಸಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಅನಂತಮೂರ್ತಿ ಹೆಗಡೆ ಅವರು ಇದೇ ರೀತಿಯಲ್ಲಿ ಅಸಭ್ಯವಾಗಿ ಮಾತನಾಡುವುದನ್ನು ಮುಂದುವರಿಸಿದರೆ, ನಮಗೂ ಸೂಕ್ತ ಭಾಷೆಯಲ್ಲಿ ಪ್ರತಿಕ್ರಿಯಿಸಲು ಬರುತ್ತದೆ” ಎಂದು ಎಚ್ಚರಿಸಿದರು.

ಅನಂತಮೂರ್ತಿ ಹೆಗಡೆ ಅವರಿಗೆ ಆಡಳಿತಾತ್ಮಕ ಜ್ಞಾನ ಕೊರತೆಯಿದೆ ಎಂದು ಟೀಕಿಸಿದ ಪ್ರದೀಪ ಶೆಟ್ಟಿ,
“ಸರ್ಕಾರ ಜಾತ್ರೆ ಮಾಡಲು ನೇರವಾಗಿ ಅನುದಾನ ನೀಡುವುದಿಲ್ಲ. ಆದರೆ ಶಾಸಕರ ಪ್ರಯತ್ನದಿಂದ ವಿಶೇಷ ಅನುದಾನವನ್ನು ತರಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

📌 ಅನುದಾನದ ವಿವರಗಳು:

  • 2023ರಲ್ಲಿ ಎಸ್‌ಎಫ್‌ಸಿ ಅನುದಾನವಾಗಿ ಶಿರಸಿ ನಗರಸಭೆಗೆ ₹3.5 ಕೋಟಿ ಮಂಜೂರು

  • ಅದರಲ್ಲಿ ₹3 ಕೋಟಿ ಸಿದ್ದಾಪುರಕ್ಕೆ, ₹50 ಲಕ್ಷ ಶಿರಸಿಗೆ ನೀಡಲಾಗಿದೆ

  • ನಂತರ ಶಿರಸಿಗೆ ₹6.5 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ

ಅಲ್ಲದೆ, ಜಾತ್ರೆಯ ತೇರು ಸಂಚರಿಸುವ ಮಾರ್ಗದಲ್ಲಿ ವಿದ್ಯುತ್ ಅವಘಡಗಳ ಸಂಭವ ಇದ್ದ ಕಾರಣ, ಅದನ್ನು ತಪ್ಪಿಸಲು ಅಂಡರ್‌ಗ್ರೌಂಡ್ ಕೇಬಲ್ ಹಾಕುವ ಕಾರ್ಯಕ್ಕೂ ಸರ್ಕಾರದಿಂದ ವಿಶೇಷ ಅನುದಾನ ತರಲಾಗಿದೆ ಎಂದು ಹೇಳಿದರು.

🏛️ ಶಾಸಕರ ಸಾಧನೆ:

ಶಾಸಕ ಭೀಮಣ್ಣ ನಾಯ್ಕ ಅವರ ಅವಧಿಯಲ್ಲಿ ಶಿರಸಿ ನಗರ ವ್ಯಾಪ್ತಿಗೆ ಸರ್ಕಾರದಿಂದ ಒಟ್ಟು ₹75 ಕೋಟಿ ರೂ ಅಧಿಕ ಅನುದಾನ ಬಂದಿದೆ. ಈ ಹಣವನ್ನು ಅಗತ್ಯವಿರುವ ಕ್ಷೇತ್ರಗಳಿಗೆ ಸಮರ್ಪಕವಾಗಿ ಬಳಸಲಾಗಿದೆ ಎಂದು ಪ್ರದೀಪ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ
ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರ, ಗೀತಾ ಶೆಟ್ಟಿ, ಜ್ಯೋತಿ ಪಾಟೀಲ, ಶೀಲೂ ವಾಜ್, ದಯಾನಂದ ನಾಯಕ, ವನಿತಾ ಶೆಟ್ಟಿ ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0