ಯುವ ಸಂಸತ್ತಿನಲ್ಲಿ ಘರ್ಜಿಸಿದ ಬಿ ತನ್ಮಯಿ: ರಾಜ್ಯ ಮಟ್ಟಕ್ಕೆ ಆಯ್ಕೆ

Nov 13, 2025 - 16:00
 0  212
ಯುವ ಸಂಸತ್ತಿನಲ್ಲಿ ಘರ್ಜಿಸಿದ ಬಿ ತನ್ಮಯಿ: ರಾಜ್ಯ ಮಟ್ಟಕ್ಕೆ ಆಯ್ಕೆ

ಆಪ್ತ ನ್ಯೂಸ್‌ ರಾಮನಗುಳಿ:
..
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ‌ ಇಲಾಖೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆಯ ಸಹಯೊಗದಲ್ಲಿ ,ಶಿರಸಿಯ ಆವೆಮರಿಯಾ ಪ್ರೌಢ ಶಾಲೆಯಲ್ಲಿ ದಿನಾಂಕ 12/11/2025 ರಂದು ಪ್ರೌಢ ಶಾಲಾ ಮಕ್ಕಳಿಗಾಗಿ ನಡೆದ  ಯುವ ಸಂಸತ್ ಸ್ಪರ್ಧೆಯಲ್ಲಿ ವಿಶ್ವದರ್ಶನ ಕನ್ನಡ‌ಮಾಧ್ಯಮ ಶಾಲೆಯ ವಿಧ್ಯಾರ್ಥಿನಿ ಕುಮಾರಿ ಬಿ ತನ್ಮಯಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇವಳು ಅಂಕೋಲಾ ತಾಲೂಕ ಹೆಗ್ಗಾರಿನ ಹೆಗ್ಗಾರ ಪ್ರಶಾಂತ ಹಾಗು ಯಮುನಾ ಭಟ್ಟ ದಂಪತಿಗಳ ಮಗಳಾಗಿದ್ದಾಳೆ. ಉತ್ತರ ಕನ್ನಡದಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಕಾರಣವನ್ನು ಸಂಸತ್ತಿನಲ್ಲಿ ಪ್ರಶ್ನೆ ಎತ್ತಿ, ವಿರೋಧ ಪಕ್ಷದ ಸದಸ್ಯರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ವಾದ ಮಂಡನೆಯಿಂದ ಬಿ ತನ್ಮಯಿ ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಿರಸಿ ಶೈಕ್ಷಣಿಕ‌ ಜಿಲ್ಲೆಯಿಂದ ಒಟ್ಟೂ ಮೂರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅವಳ ಸಾಧನೆಗೆ ಪಾಲಕರು, ವಿಶ್ವದರ್ಶನ‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆ‌ಮನೆ ಹಾಗೂ ಪ್ರೌಢ ಶಾಲಾ‌ ಮುಖ್ಯಾಧ್ಯಾಪಿಕೆ ಶ್ರೀಮತಿ ಮುಕ್ತಾ ಶಂಕರ್ ಹಾಗೂ ಎಲ್ಲ ಶಿಕ್ಷಕವೃಂದ, ಹೆಗ್ಗಾರ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 5
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 2