ಕಿರವತ್ತಿಯಲ್ಲಿ ಕನ್ನಡ ಬಾವುಟ ಅಳವಡಿಕೆಗೆ ತಡೆ: ವೈರಲ್ ಆಯಿತು ಯುವತಿ ವಿಡಿಯೋ
ಆಪ್ತ ನ್ಯೂಸ್ ಯಲ್ಲಾಪುರ:
ಕನ್ನಡ ರಾಜ್ಯೋತ್ಸವದ ಸಂಭ್ರಮ ನಡೆಯುತ್ತಿದೆ. ಆದರೆ ಇದೆ ಸಂದರ್ಭದಲ್ಲಿ, ಯಲ್ಲಾಪುರ ತಾಲ್ಲೂಕಿನ ಕಿರವತ್ತಿಯಲ್ಲಿ ಕನ್ನಡ ಭಾವುಟ ಅಳವಡಿಕೆಗೆ ಯುವತಿಯೊಬ್ಬರು ತಡೆ ನೀಡಿದ ಘಟನೆ ಇದೀಗ ವೈರಲ್ ಆಗಿದೆ.
ರಾಜ್ಯೋತ್ಸವದ ಅಂಗವಾಗಿ ಜಯ ಭಾರತ ಸಂಘಟನೆಯ ಕಾರ್ಯಕರ್ತರು ಕಿರವತ್ತಿಯಲ್ಲಿ ಬೀದಿ ದೀಪಕ್ಕೆ ಕನ್ನಡದ ಧ್ವಜ ಹಾಕಲು ಮುಂದಾಗಿದ್ದರು. ಆದರೆ, ಶ್ರೀಮಾ ಫರ್ನಾಂಡಿಸ್ ಎಂಬ ಯುವತಿ “ನನ್ನ ಅಂಗಡಿಯ ಮುಂದೆ ಬಾವುಟ ಹಾಕಬೇಡಿ, ನನಗೆ ಬೋರ್ಡ್ ಹಾಕಬೇಕಿದೆ” ಎಂದು ಹೇಳಿ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ, ಕಲ್ಲಪ್ಪ ಹೋಳಿ, ವಿಹೇಶ ದಿಂಡ್ವಾರ್, ಅಹ್ಮದ್ ಕೋಳಿಕೇರಿ ಹಾಗೂ ಮೆಹಬೂಬ್ ಅಲಿ ಬೊಮ್ಮಿಘಟ್ಟಿ ಮೊದಲಾದ ಕನ್ನಡ ಕಾರ್ಯಕರ್ತರು “ನಾವು ಬೀದಿ ದೀಪಕ್ಕೆ ಮಾತ್ರ ಬಾವುಟ ಅಂಟಿಸುತ್ತೇವೆ” ಎಂದು ವಿನಂತಿಸಿದರೂ, ಯುವತಿ ಒಪ್ಪಲಿಲ್ಲ.
ಅವರು “ಇಲ್ಲಿ ಹಾಕಿದರೆ ಬಾವುಟ ಕಿತ್ತು ಬಿಸಾಕುತ್ತೇನೆ” ಎಂದು ಎಚ್ಚರಿಸಿದರು. ಬಳಿಕ ಮತ್ತೆ ಕಾರ್ಯಕರ್ತರು ಮನವಿ ಮಾಡಿದಾಗಲೂ, “ಈ ಏರಿಯಾ ನಮ್ಮದು, ಇಲ್ಲಿ ಹ್ಯಾಂಗ್ಯೋ ಕಂಪನಿಯವರ ಬೋರ್ಡ್ ಬರುತ್ತದೆ, ಕನ್ನಡ ಬಾವುಟ ಹಾಕಬೇಡಿ” ಎಂದು ಪಟ್ಟು ಹಿಡಿದರು.
ಘಟನೆಯ ವೇಳೆ ಯುವತಿ ಕನ್ನಡ ಕಾರ್ಯಕರ್ತರ ವಿರುದ್ಧ ಅಸಭ್ಯ ಶಬ್ದ ಬಳಸಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕನ್ನಡ ಹಬ್ಬದ ದಿನ ಕನ್ನಡದ ಭಾವುಟಕ್ಕೆ ತಡೆ ನೀಡಿರುವುದನ್ನು ನಾಗರಿಕರು ತೀವ್ರವಾಗಿ ಖಂಡಿಸಿದ್ದಾರೆ.
ಕನ್ನಡ ಸಂಘಟನೆಗಳು ಈ ಘಟನೆಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದು, “ಕನ್ನಡ ಗೌರವಕ್ಕೆ ಅವಮಾನ ಸಹಿಸಲಾಗದು” ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



