ಬೇಡ್ತಿ-ವರದಾ ನದಿ ಜೋಡಣೆ: ವಿವರವಾದ ಯೋಜನಾ ವರದಿ ತಯಾರಿಕೆಗೆ ಸದ್ದಿಲ್ಲದೇ ಸಹಿ
ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಜನಸಾಮಾನ್ಯರು ಸ್ವರ್ಣವಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ-ಯಲ್ಲಾಪುರ ತಾಲೂಕಿನ ವಿವಿಧ ಕಡೆಗಳಲ್ಲಿ ಜನಾಭಿಪ್ರಾಯ ರೂಪಿಸಿ ಹೋರಾಟಕ್ಕೆ ತಯಾರಾಗುತ್ತಿದ್ದಾರೆ. ಆದರೆ ಇದರ ನಡುವೆ ಸದ್ದಿಲ್ಲದೇ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಹೆಜ್ಜೆ ಹಾಕುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ ತಯಾರಿಕೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಆಪ್ತ ನ್ಯೂಸ್ ಬೆಂಗಳೂರು

ಬೇಡ್ತಿ–ವರದಾ (ಹಿರೇವಡ್ಡಟ್ಟಿ) ನದಿ ಜೋಡಣೆ ಯೋಜನೆಯ ವಿವರವಾದ ಯೋಜನಾ ವರದಿ (DPR) ತಯಾರಿಕೆಗೆ ಸಂಬಂಧಿಸಿದಂತೆ 23.12.2025ರಂದು ಅರ್ಥಮಾತುಕತೆ ಒಪ್ಪಂದ (MoU) ಸಹಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತಂತೆ ಬೇಡ್ತಿ-ವರದಾ ನದಿ ತಿರುವಿನ ಕುರಿತು ಹೋರಾಟಕ್ಕೆ ಮುಂದಾಗಿರುವವರಿಗೂ ಮಾಹಿತಿ ಸಿಕ್ಕಂತಿಲ್ಲ.
National Water Development Agencyಯ ಫೇಸ್‌ಬುಕ್ ಪುಟದಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಮೂಲಕ ಜನಾಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾದ ನಡೆಯನ್ನು ಸರ್ಕಾರ ಮತ್ತೊಮ್ಮೆ ಕೈಗೊಂಡಿರುವುದು ಬೆಳಕಿಗೆ ಬಂದಿದೆ.
📌 ಯೋಜನೆಯ ವಿವರಗಳು:
-
ಯೋಜನೆಯ ಹೆಸರು: ಬೇಡ್ತಿ–ವರದಾ (ಹಿರೇವಡ್ಡಟ್ಟಿ) ನದಿ ಜೋಡಣೆ ಯೋಜನೆ
-
ಉದ್ದೇಶ:
-
ನೀರಿನ ಕೊರತೆ ಇರುವ ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಒದಗಿಸುವುದು
-
ಬೇಡ್ತಿ ನದಿಯ ಹೆಚ್ಚುವರಿ ನೀರನ್ನು ವರದಾ ನದಿಗೆ ಸಂಪರ್ಕಿಸುವ ಮೂಲಕ ನೀರಿನ ಸಮತೋಲನ ಸಾಧಿಸುವುದು
-
-
DPR (ವಿವರವಾದ ಯೋಜನಾ ವರದಿ):
-
ಯೋಜನೆಯ ತಾಂತ್ರಿಕ ಸಾಧ್ಯತೆ
-
ಪರಿಸರ ಪರಿಣಾಮಗಳ ಅಧ್ಯಯನ
-
ವೆಚ್ಚ ಅಂದಾಜು
-
ಭೂಸ್ವಾಧೀನ, ಜಲಸಂಪನ್ಮೂಲ ನಿರ್ವಹಣೆ ಮತ್ತು ಸಾಮಾಜಿಕ ಪರಿಣಾಮಗಳ ವಿಶ್ಲೇಷಣೆ
-
-
MoU ಸಹಿ ಮಹತ್ವ:
-
ಯೋಜನೆಯ ಅಧಿಕೃತ ಪ್ರಕ್ರಿಯೆಗೆ ಚಾಲನೆ
-
ಮುಂದಿನ ಹಂತಗಳಲ್ಲಿ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆಯಲು ದಾರಿ ಸುಗಮ
-
-
ಲಾಭ ಪಡೆಯುವ ಪ್ರದೇಶಗಳು:
-
ಉತ್ತರ ಒಳನಾಡು ಕರ್ನಾಟಕದ ನೀರಾವರಿ ಕೊರತೆಯ ಜಿಲ್ಲೆಗಳು
-
ರೈತರು, ಗ್ರಾಮೀಣ ಜನತೆ ಮತ್ತು ಕೈಗಾರಿಕಾ ವಲಯ
-
ಈ ಯೋಜನೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಹಿ ಹಾಕಿರುವ ಮಾಹಿತಿ ಒಳಗೊಂಡ ಫೇಸ್‌ಬುಕ್ ಪೋಸ್ಟ್ ಈ ಕೆಳಗೆ ನೀಡಲಾಗಿದ್ದು, ಅದಕ್ಕೆ ಯೋಜನೆ ವಿರೋಧಿಸಿ ಕಾಮೆಂಟ್ ಹಾಕುವ ಮೂಲಕ ಯೋಜನೆಯ ವಿರೋಧದ ಧ್ವನಿಯನ್ನು ಕೇಂದ್ರ ಸರ್ಕಾರದ ಮಟ್ಟಕ್ಕೆ ತಲುಪಿಸಬಹುದಾಗಿದೆ.
ಲಿಂಕ್ ಇಲ್ಲಿದೆ ನೋಡಿ
https://www.facebook.com/photo.php?fbid=1172473425057205&set=pb.100068836766157.-2207520000&type=3
-
What's Your Reaction?
Like
0
Dislike
1
Love
0
Funny
0
Angry
0
Sad
0
Wow
0