ಬೇಡ್ತಿ ವರದಾ ನದಿ ಜೋಡಣೆ ಮಾಡಿದರೆ ಹುಷಾರ್

ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಂರಕ್ಷಣಾ ಸಮಿತಿ ಪೂರ್ವಭಾವಿ ಸಮಾಲೋಚನಾ ಸಭೆ

Oct 4, 2025 - 16:51
 0  80
ಬೇಡ್ತಿ ವರದಾ ನದಿ ಜೋಡಣೆ ಮಾಡಿದರೆ ಹುಷಾರ್

ಆಪ್ತ ನ್ಯೂಸ್ ಯಲ್ಲಾಪುರ:
ಸೋಂದಾ ಸ್ವರ್ಣವಲ್ಲೀ ಸ್ವಾಮಿಗಳ ನೇತೃತ್ವದಲ್ಲಿ ಇತ್ತೀಚೆಗೆ ಕೈಗೊಂಡ ನಿರ್ಧಾರದಂತೆ ಅ.೩ ರಂದು ಶುಕ್ರವಾರ ಉಮ್ಮಚಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಬೇಡ್ತಿ ವರದಾ ನದಿ ಜೋಡಣೆ ಯೋಜನೆ ವಿರುಧ್ದ  ತೀವೃ ವಿರೋಧ ವ್ಯಕ್ತಗೊಂಡು ಎಂಥಹ ಹೋರಾಟಕ್ಕೂ ಸಿಧ್ದ ಎಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಗೊಂಡಿತು.ವಿವಿಧ ಗ್ರಾ.ಪಂ ಗಳು, ಸಹಕಾರಿಸಂಘಗಳು,ಯುವಕ ಸಂಘಗಳು ಮಹಿಳಾ ಸಂಘಗಳು, ಮಾತೃಮಂಡಳಿ, ಕಿಸಾನ್ ಸಂಘ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು,ರೈತ ಸಂಘಟನೆಗಳ ಪ್ರಮುಖರು ಮಂಚಿಕೇರಿ,ಹಾಸಣಗಿ ಕುಂದರ್ಗಿ ಹಿತ್ಲಳ್ಳಿ ಉಮ್ಮಚಗಿ ಪಂಚಾಯತದ  ಭಾಗಗಳಿಂದ ಆಗಮಿಸಿದ್ದ ಜನರು ಈ ಸಭೆಯಲ್ಲಿ ಈ ಯೋಜನೆಗೆ ಅವಕಾಶ ಕೊಡುವುದಿಲ್ಲ.ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಈ ಯೋಜನೆಯ ಕುರಿತ ಮಾಹಿತಿ ನೀಡಿದರಲ್ಲದೇ ಶರಾವತಿ,ಕೇಣಿ ಸೇರಿದಂತೆ ಉ.ಕ ದಲ್ಲಿ ಬೃಹತ್ ಯೋಜನೆಗಳ ಜಾರಿಗೆ ತಯಾರಿ ನಡೆದಿದೆ.ಹಿಂದೊಮ್ಮೆ ಹೋರಾಟ‌ಮಾಡಿ ಈ ಯೋಜನೆ ನಿಲ್ಲಿಸಲಾಗಿತ್ತು.ಆದರೆ ಮತ್ತೆ ಈಗ ತಲೆ ಎತ್ತಿದೆ.ಯೋಜನೆಯಿಂದ ಆಗುವ ದುಷ್ಪರಿಣಾಮ ಯೋಜನೆಯ ಸ್ಥಿತಿ ಬಗ್ಗೆ ಎತ್ತಿನಹೊಳೆ ಯೋಜನೆಯಲ್ಲಿ ಕಂಡುಕೊಂಡು ಪಾಠ ಕಲಿತಿದ್ದೇವೆ.ನಮಗೆ ಇಲ್ಲೆ ಪಾಠ ಕಲಿಯಬೇಕಿಲ್ಲ.ನಮ್ಮ ಜನಪ್ರತಿನಿಧಿಗಳು ಯೋಜನೆಯ ತಡೆಗೆ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದ ಅವರು ಈ ತಿಂಗಳ ಕೊನೆಯಲ್ಲಿ ಬೇಡ್ತಿ ನದಿತಿರುವು ಸೂರೆಮನೆ ಬಳಿಯ ಅಣೆಕಟ್ಟೆ ವಿರುದ್ದ ಬೇಡ್ತಿ ತಟದಲ್ಲಿ ಬ್ರಹತ್ ಪ್ರತಿಭಟನೆ ಮಾಡಿ ನದಿ ಕಣಿವೆ ಉಳಿಸಿಕೊಳ್ಳುವ ಸಂಕಲ್ಪ ಮಾಡಲಿದ್ದೇವೆ ಎಂದರು. ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿಘ್ನೇಶ್ವರ ಎನ್. ಹೆಗಡೆ ಬೊಮ್ನಳ್ಳಿ  ಮಾತನಾಡಿ ಆದ್ಯಾತ್ಮ ನಾಯಕತ್ವ ನಮಗೆ ಸಿಕ್ಕಿದೆ ಎಂಬುದು ಸೌಭಾಗ್ಯ.ಇದರಿಂದ ಅನೇಕ ನಮ್ಮ ಜನಾಂದೋಲನಕ್ಕೆ ಯಶಸ್ಸು ಸಿಕ್ಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಉಮ್ಮಚಗಿ ವ್ಯ.ಸೇ.ಸ.ಸಂಘದ ಅಧ್ಯಕ್ಷ ಎಂ.ಜಿ.ಭಟ ಸಂಕದಗುಂಡಿ ಮಾತನಾಡಿ ಅ.೨೭ ರಂದು ಅಣೆಕಟ್ಟು ಯೋಜನಾ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸೋಣ ಬೈಕ್ ರ್ಯಾಲಿ ಮೂಲಕ ಜಾಗೃತಿ ಮಾಡೋಣ.ಎಲ್ಲರೂ ಸೇರಿ ಹೋರಾಟ ಯಶಶ್ವೀಗೊಳಿಸಿ ಯೋಜನೆ ನಿಲ್ಲಿಸೋಣ ಎಂದರು.ಈ ಸಂದರ್ಭದಲ್ಲಿ ಹಾಸಣಗಿ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ಕುಂದರಗಿ ಸಹಕಾರಿ ಸಂಘದ ಅಧ್ಯಕ್ಷ ಹೇರಂಭ ಹೆಗಡೆ, ಹಿತ್ಲಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಜಿ.ವಿ.ಹೆಗಡೆ,ಉಮ್ಮಚಗಿ ಗ್ರಾ.ಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ,ಹಿತ್ಲಳ್ಳಿ ಗ್ರಾ.ಪಂ ಅಧ್ಯಕ್ಷ ಸತ್ಯನಾರಾಯಣ ಹೆಗಡೆ,ವೇದಿಕೆಯಲ್ಲಿ ಉಪಸ್ಥಿತರಿದ್ದರು.
,ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ರಂಗಸಮೂಹ ಸಂಸ್ಥೆಯ ರಾಮಕೃಷ್ಣ ದುಂಡಿ,ಪ್ರಮುಖರಾದ ಎನ.ಜಿ.ಹೆಗಡೆ ಭಟ್ರಕೇರಿ, ರಘುಪತಿ ಕಂಪ್ಲಿ, ಗುರುಪ್ರಸಾದ ಭಟ್ಟ ಹೊನ್ನಳ್ಳಿ, ಎಂ.ಆರ್.ಹೆಗಡೆ ತಾರೆಹಳ್ಳಿ,ಗಣಪತಿ ಶಂಕರಗದ್ದೆ, ಸತೀಶ ಕುಣಬಿ ಸೂರೆಮನೆ, ಕೈತಾನ್ ಡಿಸೋಜಾ, ಮಂಜುನಾಥ ಜಡ್ಡಿಗದ್ದೆ, ಸೂರ್ಯನಾರಾಯಣ ಹಿತ್ಲಳ್ಳಿ, ಆರ್.ಜಿ.ಹೆಗಡೆ ಬೆದೆಹಕ್ಲು, ಪವನಕುಮಾರ ಕೇಸರಕರ್, ಎಂ.ಕೆ.ಹೆಗಡೆ ಚಿಪಗೇರಿ, ಸುಭಾಸ ಸೂರೆಮನೆ, ಗಣಪತಿ ಹಿರೇಸರ, ವೃಕ್ಷ ಲಕ್ಷ  ಆಂದೋಲನದ ಕೆ.ಎಸ್.ಭಟ್ಟ ಆನಗೋಡ ಗ್ರಾ.ಪಂ.ಗಳ ಒಕ್ಕೂಡದ ಅಧ್ಯಕ್ಷ ಎಂ.ಕೆ.ಹೆಗಡೆ ಯಡಳ್ಳಿ,ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ, ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆ ಸೂಚನೆ ನೀಡಿದರು.ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕಗೈದು ಈಗಾಗಲೇ ಸುತ್ತಮುತ್ತಲಿನ‌ ಪಂಚಾಯತ,ಸಹಕಾರಿ ಸಂಘಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದೆ.ನಮ್ಮ ಪಶ್ಚಿಮ ಘಟ್ಟದಲ್ಲಿ ಯಾವುದೇ ಮಾರಕ ಯೋಜನೆ ಅನುಮತಿ ನೀಡಬಾರದೆಂಬ ಸಾಮೂಹಿಕ ನಿರ್ಣಯವನ್ನು ನಾವು ಕೈಗೊಳ್ಳಬೇಕಿದೆ ಎಂದು ತಿಳಿಸಿದರು. ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0