ಬೇಡ್ತಿ ನೀರು ಬೇರೆಡೆಗೆ ಒಯ್ಯುವ ಯೋಜನೆ ಅವೈಜ್ಞಾನಿಕ: ಸ್ವರ್ಣವಲ್ಲಿ ಸ್ವಾಮೀಜಿ
ಗುರುಗಳೊಡನೆ ಬೇಡ್ತಿ ನದಿ ಉಳಿವಿಗಾಗಿ ಮತ್ತೊಮ್ಮೆ ಒಗ್ಗೂಡಿದ ಜನಸಾಮಾನ್ಯರು

ಆಪ್ತ ನ್ಯೂಸ್ ಯಲ್ಲಾಪುರ:
ಬೇಡ್ತಿಗೆ ಯೋಜನೆ ತಂದು ಇಲ್ಲಿಯ ನೀರನ್ನು ಬೇರೆಡೆ ಒಯ್ಯುವ ರೀತಿ ಅವೈಜ್ಞಾನಿಕ ಮತ್ತು ಅಪ್ರಸ್ತುತ. ಬದಲಾಗಿ ಈ ಜನಕ್ಕೆ ನೀರಾವರಿ ಕಲ್ಪಿಸುವ ಬಗ್ಗೆ ಗಮನಹರಿಸಬಹುದು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೆಂದ್ರ ಸರಸ್ವತಿ ಮಹಾಸ್ವಾಮಿಗಳವರು ನುಡಿದರು.
ಅವರು ತಾಲೂಕಿನ ಮಂಚಿಕೇರಿ ಸಮೀಒದ ತುಂಬೆಬೀಡಿನಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ-ವರದಾ ನದಿ ಜೋಡಣೆ ವಿರುದ್ಧ ಹಮ್ಮಿಕೊಂಡಿದ್ದ ಬ್ರಹತ್ ಪ್ರತಿಭಟನಾ ಬೈಕ್ ರ಼್ಯಾಲಿ ನಂತರ ನಡೆದ ಸಮಾವೇಶದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ನದಿಯನ್ನು ಅದರ ಪಾಡಿಗೆ ಹರಿಯಬಿಡಬೇಕು.ವ್ಯರ್ಥವಸಗಿ ಹರಿಯದು.ಅದು ಹರಿಯುವಾಗ ತನ್ನ ಶಕ್ತಿಯನ್ನು ನೀಡುತ್ತ ಹೋಗುತ್ತದೆ.ನೀರು ನಿಲ್ಲಿಸಿದರೆ ಮತ್ತು ತಿರುಗಿಸಿದರೆ ದುಷ್ಪರಿಣಾಮವಾಗುತ್ತದೆ.ಇದನ್ನು ಎತ್ತಿನಹೊಳೆ ಯೋಜನೆಯಲ್ಲಿ ನೋಡಿದ್ದೇವೆ ಎಂದು ಮಾರ್ಮಿಕವಾಗಿ ವಿವರಸಿದ ಶ್ರೀಗಳು
ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ನಡೆಯುವ ಹೋರಾಟದಲ್ಲಿ ಜಿಲ್ಲೆಯ ನಮ್ಮ ಜನಪ್ರತಿನಿಧಿಗಳು ಪಕ್ಷಾತೀತವಾಗಿ ತೊಡಗಿಸಿಕೊಳ್ಳಬೇಕು. ಜನತೆಗೆ ಬೇಡವಾದ ಯೋಜನೆಯನ್ನು ಅವರುಗಳು ವಿರೋಧಿಸಬೇಕು.ಆಗ ಮಾತ್ರ ಜನರ ಧ್ವನಿಗೆ ಇನ್ನಷ್ಟು ಶಕ್ತಿ ಬರುತ್ತದೆ.ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ನಿಯೋಗದ ಮೂಲಕ ಮುಖ್ಯಮಂತ್ರಿ, ಕೇಂದ್ರ ಂಮತ್ರಿ,ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಬೇಕು.
ಜನಪ್ರತಿನಿಧಿಗಳನ್ನು ಭೇಟಿಯಾಗಿ ಒತ್ತಡ ಹೇರುವುದು, ಯೋಜನೆಯಿಂದಾಗುವ ಹಾನಿಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವುದು, ಜನಾಂದೋಲನ, ಕಾನೂನು ಹೋರಾಟದ ಮೂಲಕ ಈ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಯೋಜನೆಯನ್ನು ವಿರೋಧಿಸುವವರ ಸಂಖ್ಯೆಯೂ ಸಾಕಷ್ಟಿದೆ ಎಂಬುದು ಸತ್ಯ.ಆದರೆ ಇದಕ್ಕೆ ಕೆಲವು ಜನಪ್ರತಿನಿಧಿಗಳ ಬೆಂಬಲವೂ ಇದೆ ಎಂಬುದು ನಮಗೆ ತಿಳಿದಿದೆ.ಹಾಗಾಗಿ ಜನರು ಇನ್ನಷ್ಟು ಸಂಘಟಿತರಾದರೆ ಮಾತ್ರ ಹೋರಾಟದಲ್ಲಿ ಯಶಸ್ಸು ಗಳಿಸಲು ಸಾಧ್ಯ.ನಮ್ಮ ಹೋರಾಟ ನಿರಂತರ ಮತ್ತು ವ್ಯವಸ್ಥಿತವಾಗಿರಲಿ ಎಂದರು.ಇದಕ್ಕೂ ಪೂರ್ವದಲ್ಲಿ ಶ್ರೀಗಳು ವೃಕ್ಷಾರೋಪಣ ನೆರವೇರಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಹಲವು ಯೋಜನೆ ಕೊಡುವ ಮೂಲಕ ಜಿಲ್ಲೆಯ ತ್ಯಾಗ ದೊಡ್ಡದು. ಈ ತ್ಯಾಗಕ್ಕೆ ಯಾವುದೇ ಸರ್ಕಾರದಿಂದ ಈ ಜಿಲ್ಲೆಗೆ ನ್ಯಾಯ ದೊರಕಿಲ್ಲ. ಇಂತಹ ಯೋಜನೆಗಳಿಂದ ತತ್ತರಿಸಿ ಹೋಗಿದೆ. ಜಿಲ್ಲೆಯ ಧಾರಣ ಸಾಮರ್ಥ್ಯದ ಬಗ್ಗೆ ಅಧ್ಯಯನ ಮೊದಲು ಆಗಬೇಕು. ಅಭಿವೃಧ್ದಿಯ ಬಗ್ಗೆ ದ್ವಂದ್ವ ಇಲ್ಲ.ಪರಿಸರಕ್ಕೆ ಪೂರಕವಾದ ಯೋಜನೆ ಅಭಿವೃದ್ಧಿಯ ಮಾಡೋದಕ್ಕೆ ಅವಕಾಶವಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಯೋಜನೆಯ ಬಗ್ಗೆ ಜನಾಭಿಪ್ರಾಯವನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಮತ್ತು ರಾಜ್ಯಸರಕಾರಕ್ಕು ಮನವರಿಕೆ ಮಾಡುವ ಯತ್ನಬಾಗಲಿ.ಯಾವುದಕ್ಕೂಮೊದಲು ನಮ್ಮಲ್ಲಿ ಸ್ಪಷ್ಟತೆ ಇರಬೇಕು.ಸ್ಪಷ್ಟ ನಿಲುವಿನೊಂದಿಗೆ ಹೋರಾಟ ನಡೆಯಬೇಕು ಎಂದರು
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ ಇದು ಯಾವುದೇ ಸಮುದಾಯಕ್ಕೆ ಸೀಮಿತವಾದ ಹೋರಾಟ ಅಲ್ಲ, ಪರಿಸರದ ಉಳಿವಿಗಾಗಿ ನಡೆಯುವ ಹೋರಾಟ ಎಂದರು.
ಪರಿಸರ ತಜ್ಞ ಬಾಲಚಂದ್ರ ಸಾಯೀಮನೆ ಮಾತನಾಡಿ, ಅಧ್ಯಯನ, ಕಾನೂನು ಹಾಗೂ ಹೋರಾಟ ಮಾರ್ಗದ ಮೂಲಕ ಯೋಜನೆಯನ್ನು ತಡೆಯುವ ಪ್ರಯತ್ನ ಮಾಡೋಣ.ಸಂರಕ್ಷಿತ ಪ್ರದೇಶದಲ್ಲಿ ಯೋಜನೆ ಮಾಡುತ್ತೇನೆನ್ನುವುದು ವಿಪರ್ಯಾಸ ಎಂದರು.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಣಿ ಬಂದರು, ಶರಾವತಿ ಪಂಪ್ಡ್ ಸ್ಟೋರೇಜ್, ಬೇಡ್ತಿ-ವರದಾ ನದಿ ಜೋಡಣೆ, ಅಘನಾಶಿನಿ ತಿರುವು ಹೀಗೆ ವಿವಿಧ ರೀತಿಯಲ್ಲಿ ಪಶ್ಚಿಮ ಘಟ್ಟದ ಪರಿಸರವನ್ನು ನಲುಗಿಸುವ ಕಾರ್ಯವನ್ನು ಸರ್ಕಾರ ವಿವಿಧ ರೀತಿಯಲ್ಲಿ ಮಾಡುತ್ತಿದೆ. ಸಂಘಟಿತ ಹೋರಾಟದ ಮೂಲಕ ನಮ್ಮ ಪರಿಸರವನ್ನು, ಜೀವನವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಜಿಲ್ಲೆಯ ಜನಪ್ರತಿನಿಧಿಗಳ ಒಗ್ಗೂಡುವಿಕೆಯಿಂದ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ, ಈ ಯೋಜನೆಗಳನ್ನು ತಡೆಯುವ ಪ್ರಯತ್ನ ನಡೆಸೋಣ ಎಂದರು.
ರಂಗಕರ್ಮಿ ರಾಮಕೃಷ್ಣ ಭಟ್ಟ ದುಂಡಿ ಮಾತನಾಡಿ, ಯೋಜನೆಯಿಂದಾಗುವ ವ್ಯತಿರಿಕ್ತ ಪರಿಣಾಮವನ್ನು ವೈಜ್ಞಾನಿಕ ವರದಿಯನ್ನು ಸಿದ್ಧಪಡಿಸಿ ಸರ್ಕಾರದ ಗಮನಕ್ಕೆ ತರಬೇಕು.ಆ ಮೂಲಕ ಮನವರಿಕೆ ಮಾಡಬೇಕು ಎಂದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಯೋಜನೆ ವಿರೋಧಿಸಿ ಮಾತನಾಡಿ, ಗ್ರಾಮಸಭೆಯ ಠರಾವಿನ ಮೂಲಕ ಈ ಯೋಜನೆಯನ್ನು ವಿರೋಧಿಸಿದರೆ ಕಾಯ್ದೆಯ ಪ್ರಕಾರ ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ,ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಒಟ್ಟಾಗಿ ಆಳುವವರ ತೆರೆಸುವ ಕೆಲಸ ಮಾಡಬೇಕು ಎಂದರು.
ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿಘ್ನೇಶ್ವರ.ಎನ್.ಹೆಗಡೆ ಮಾತನಾಡಿದರು. ಭರತನಹಳ್ಳಿ ವೈದಿಕ ಪರಿಷತ್
ಸುಬ್ರಮಣ್ಯ ಭಟ್ ಇಳೆಹಳ್ಳಿ ಸಂಗಡಿಗರು
ವೇದಘೋಷಗೈದರು. ಸೀಮಾ ಪರಿಷತ್ ಅಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ ಸ್ವಾಗತಿಸಿದರು. ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಮನವಿ ವಾಚಿಸಿದರು. ಎಂ.ಕೆ.ಭಟ್ಟ ಯಡಳ್ಳಿ, ಪ್ರಕಾಶ ಭಟ್ಟ ತುಂಬೆಬೀಡು ನಿರ್ವಹಿಸಿದರು. ವಿಶ್ವನಾಥ ಬಾವಣಕೊಪ್ಪ ವಂದಿಸಿದರು.
-----------------
ನಂದೊಳ್ಳಿ, ಚಂದಗುಳಿ, ಮಾಗೋಡ,ಯಲ್ಲಾಪುರ ಸೂರೆಮನೆ, ಮಳಲಗಾಂವ,ಉಪಳೇಶ್ವರ, ಕುಂದರಗಿ, ಹಿತ್ಲಳ್ಳಿ, ಉಮ್ಮಚಗಿ, ಮಂಚಿಕೇರಿ,ಚವತ್ತಿ,ಕೆರೆಸೊಳ್ಳಿ,ಚಿಪಗೇರಿ, ಇಳೆಹಳ್ಳಿ,ಸೋಮನಳ್ಳಿ ಭಾಗದಿಂದ ಸಾವಿರಾರು ಬೈಕ್ ಗಳಲ್ಲಿ ಸವಾರರು ರ಼್ಯಾಲಿ ಮೂಲಕ ಸಮಾವೇಶ ನಡೆಯುವ ಸ್ಥಳ ಸೇರಿದರು. ಒಂದೂವರೆ ಸಾವಿರದಷ್ಟು ಜನ ಸ್ಥಳದಲ್ಲಿ ಜಮಾಯಿಸಿದ್ದರು.
ಬಿಡುವು ನೀಡಿದ ಮಳೆ:
ಮಳೆಯದೇ ಚಿಂತೆಯಾಗಿತ್ತು.ಮಳೆ ಬಿಸಿಲು ಹಗಲುವರಾತ್ರಿ ಎನ್ನದೇ ಮೂರೇ ದಿನದಲ್ಲಿ ಮಂಚಿಕೇರಿ ಸುತ್ತ ಮುತ್ತಲಿನ ಕಾರ್ಯಕರ್ತರು ವ್ಯವಸ್ಥಿತವಾದ ಜಾಗೃತಿ ಸಭೆಯನ್ನು ಸಜ್ಜುಗೊಳಿಸಿದ್ದರು.ಸಭೆಗೆ ಒಂದುವರೇ ಸಾವಿರ ಜನರೂ ಬಂದಿದ್ದರು. ಆದರೆ ಸಭೆ ನಡೆಯುವ ತುಂಬಿಬೇಡಿನಲ್ಲಿ ಶನಿವಾರ ಸಂಜೆಯೂ ಮಳೆ ಬಂದಿರಲಿಲ್ಲ.ಸಭೆಯ ವೇಳೆಯೂ ಬಂದಿರಲಿಲ್ಲ.ಕಾರ್ಯಕ್ರಮ ಮುಗಿದು ಎಲ್ಲರೂ ಮನೆಗೆ ತೆರಳುತ್ತಿದ್ದಂತೆ ಈ ಪ್ರದೇಶದಲ್ಲಿ ಭಾರೀ ಮಳೆ ಸದ್ದು ಮಾಡಿತು.
What's Your Reaction?






