ಕ್ಷಣಾರ್ಧದಲ್ಲಿ ಕಾಣೆಯಾಯ್ತು ಬೈಕ್!
ಆಪ್ತ ನ್ಯೂಸ್ ಶಿರಸಿ:
ನಗರದ ಬಿಡ್ಕಿ ಅಟೊ ಸ್ಟ್ಯಾಂಡ್ ಹತ್ತಿರ ಫ್ಯಾಶನ್ ಪ್ರೊ ಬೈಕ್ ನಿಲ್ಲಿಸಿ ಅಲ್ಲೆ ಹತ್ತಿರದಲ್ಲಿರುವ ಬಸ್ ನಿಲ್ದಾಣಕ್ಕೆ ಹೋಗಿ ಬರುವಷ್ಠರಲ್ಲಿ ಬೈಕ್ ನಾಪತ್ತೆಯಾಗಿರುವ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿದ್ದಾಪುರ ತಾಲೂಕಿನ ಹರಿಗಾರ ಗ್ರಾಮದ ಗಣಪತಿ ರಾಮಾ ಗೌಡಾ ಇವರಿಗೆ ಸೇರಿದ ಬೈಕ್ ಆಗಿದೆ. ಅಕ್ಟೊಬರ್ 2 ರಂದು ಈ ಘಟನೆ ನಡೆದಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



