ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ ಕ್ಷಮೆ ಯಾಚಿಸಲೇಬೇಕು

Nov 19, 2025 - 11:37
 0  51
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ ಕ್ಷಮೆ ಯಾಚಿಸಲೇಬೇಕು
-ಅಕ್ಷಯ ಹೆಗಡೆ

##################################################


ಈ ಮಾತನ್ನು ಇವರು ಆಡಿದ್ದೇ ಹೌದಾದರೆ, ಇದಕ್ಕೆ ಕ್ಷಮೆ ಕೇಳಲೇಬೇಕು..!..

'ಸಲಿಂಗಿಗಳು' ಎಂದರೆ ಏನೋ ಅಪರಾಧ ಅಂತಲ್ಲ, 'ಕೀಳು ಪದ' ಅಂತಲ್ಲ. ಆದರೆ, ಅದು ತೀರಾ ಖಾಸಗೀ ವಿಷಯ, ಅದು ಈ ಹೇಳಿಕೆ ಕೊಟ್ಟವರಿಗೆ ಅನವಶ್ಯಕವಾದದ್ದು. ಬೇರೆಯವರ ಖಾಸಗೀತನದ ಸ್ಪಷ್ಟ ಉಲ್ಲಂಘನೆಯಿದು..!..

ಹೀಗೆ ಜನರಲೈಸ್ ಆಗಿ 'ಅಲ್ಲಿ ಹೆಚ್ಚಿನವರು ಸಲಿಂಗಿಗಳು' ಎನ್ನುವುದು ಮೂರ್ಖತನ, ಬಾಲಿಶತನ, ದಾರಿತಪ್ಪಿಸುವಂತಹ ಹೇಳಿಕೆ ಹೌದು. ಇವರಿಗೆ ಗೊತ್ತಿರುವ ಯಾವುದೋ ಯಕ್ಷಗಾನ ಕಲಾವಿದ, ಅಥವಾ ಇವರೂ ಸ್ವತಃ ಯಕ್ಷಗಾನ ಕಲಾವಿದರಾಗಿದ್ದೂ ಸಲಿಂಗಿಗಳಾಗಿದ್ದರೆ, ಸಂದರ್ಭಕ್ಕೆ ತಕ್ಕಹಾಗೆ ಅವಶ್ಯಕತೆ ಬಿದ್ದಾಗ ಅದನ್ನು ಹೇಳಬಹುದೇ ಹೊರತೂ ಹೀಗೆ ಹೋಲ್‌ಸೇಲಾಗಿ 'ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗಿಗಳು' ಎನ್ನುವುದು ಅವಹೇಳನವೂ ಹೌದು, ದಾರಿ ತಪ್ಪಿಸುವ ಹೇಳಿಕೆಯೂ ಹೌದು.
ನಾನಾಗಲೀ ಅಥವಾ ಬೇರೇ ಯಾರೇ ಆಗಲಿ, 'ಇದು ನಿಜ ಅಥವಾ ಸುಳ್ಳು' ಎನ್ನಲಾಗುವುದಿಲ್ಲ, ನಿರೂಪಿಸಲೂ ಸಾಧ್ಯವಿಲ್ಲದ್ದು. ಆದರೆ, ಮೇಲುನೋಟಕ್ಕೇ ಹೇಳುವುದಾದರೆ 'ಇದು ಸುಳ್ಳು' ಎಂದೇ ಭಾಸವಾಗುತ್ತದೆ. ಇದು ಸುಳ್ಳಾಗಿರಲಿ, ಸತ್ಯವಾಗಿರಲಿ ಅದು ವಿಷಯವೇ ಅಲ್ಲ. 'ಇದು ತೀರಾ ಅನವಶ್ಯಕವಾದದ್ದು' ಎಂಬುದು ಮಾತ್ರ ನಿಜ..!..

ಈ ಹೇಳಿಕೆ ಕೊಟ್ಟವರು, ಇದನ್ನು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯಕ್ಷಗಾನ ಕಲಾವಿದರು ಸಾವಿರಾರು ಸಂಖ್ಯೆಗಳಲ್ಲಿದ್ದಾರೆ. ಅವರಲ್ಲಿ ಒಬ್ಬನೇ ಒಬ್ಬನೂ ಬಹಿರಂಗವಾಗಿ 'ನಾನು ಸಲಿಂಗಿ' ಎಂದು ಹೇಳಿದ್ದನ್ನು ನಾನಂತೂ ಕೇಳಿಲ್ಲ..!..

ಆದರೆ, ಕನ್ನಡ ಸಾಹಿತಿಗಳಲ್ಲಿ ಹಾಗೆ ಬಹಿರಂಗವಾಗಿ ಒಬ್ಬಿಬ್ಬರಾದರೂ ಹೇಳಿದ್ದನ್ನು ನಾನೂ ಕೇಳಿದ್ದೇನೆ, ನೀವೂ ಕೇಳಿದ್ದೀರಿ. ಅದೇ ಆಧಾರದ ಮೇಲೆ 'ಕನ್ನಡ ಸಾಹಿತಿಗಳಲ್ಲಿ ಬಹುತೇಕರು ಸಲಿಂಗಿಗಳು' ಎಂದರೆ ಹೇಗಿರುತ್ತದೆ..?.. (ಈ ಹೇಳಿಕೆ ಕೊಟ್ಟವರೂ ಸಾಹಿತಿಯೇ ಇರಬಹುದು ಎಂದು ಊಹಿಸಿ ಈ ಉದಾಹರಣೆ ಕೊಟ್ಟಿದ್ದು, ಅವರು ಸಾಹಿತಿಯೋ ಅಥವಾ ಬೇರೇನೋ ನನಗೆ ಗೊತ್ತಿಲ್ಲ!)..

ಇಂತಹ ಬೇಜವಾಬ್ದಾರಿ, ಬಾಲಿಶ & ದಾರಿತಪ್ಪಿಸುವಂತಹ ಅವಹೇಳನಕಾರೀ ಸುಳ್ಳು ಹೇಳಿಕೆಗಳನ್ನು ರಾಜ್ಯದ ಜನ, ಯಕ್ಷಗಾನ ಕಲಾವಿದರು ಹಾಗೂ ಅಭಿಮಾನಿಗಳು ದೊಟ್ಟ ಮಟ್ಟದಲ್ಲಿ ವಿರೋಧಿಸಬೇಕು, ಖಂಡಿಸಬೇಕು..!..

ಅಥವಾ, ಹಾಗೆ ಕ್ಷಮೆ ಕೇಳುವುದಿಲ್ಲ ಎಂದಾದರೆ, ಆ ಬಗ್ಗೆ ಸ್ಪಷ್ಟವಾದ ಅಂಕಿ ಅಂಶಗಳನ್ನು ಕೊಡಲಿ. ವೃತ್ತಿಪರ & ಹವ್ಯಾಸಿ ಎಷ್ಟು ಜನ ಯಕ್ಷಗಾನ ಕಲಾವಿದರಿದ್ದರು, ಇದ್ದಾರೆ; ಅವರಲ್ಲಿ ಎಷ್ಟು ಜನ ಸಲಿಂಗಿಗಳು ಎಂಬ ಬಗ್ಗೆ. 'ಅನೇಕರು' ಎನ್ನುವಾಗ ಎಟ್ ಲೀಷ್ಟ್ ಆ ಒಟ್ಟೂ ಕಲಾವಿದರ ಸಂಖ್ಯೆಯಲ್ಲಿ 10-20% ಆದರೂ ಸಲಿಂಗಿಗಳು ಇದ್ದರೆ, ಇವರ ಮಾತನ್ನು 'ಹೋಗಲಿ ಬಿಡು, ಬಾಯಿ ಚಪಲಕ್ಕೆ ಏನೋ ಹೇಳಿದ್ದಾನೆ' ಎಂದು ಸುಮ್ಮನೇ ಬಿಟ್ಟು ಬಿಡಬಹುದು..!..

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0