ಕುಮಟಾದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ನೈಸರ್ಗಿಕ ಕೃಷಿ ಕಾರ್ಯಾಗಾರ

ಜೂನ್ 20ರಂದು ಅಂತ್ರವಳ್ಳಿಯಲ್ಲಿ ಕಾರ್ಯಕ್ರಮ; ಸಾವಯವ ಕೃಷಿ, ಜೀವಾಮೃತ, ಕೇಂದ್ರ ಯೋಜನೆಗಳ ಕುರಿತು ಮಾಹಿತಿ

Jun 18, 2026 - 19:56
 0  55
ಕುಮಟಾದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ನೈಸರ್ಗಿಕ ಕೃಷಿ ಕಾರ್ಯಾಗಾರ

ಆಪ್ತ ನ್ಯೂಸ್ ಕುಮಟಾ:

ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಯಶಸ್ವಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ "ವಿಶ್ವಾಸ ಕೇ, ವಿಕಾಸ ಕೇ, ಜನ ಕಲ್ಯಾಣ ಕೇ" ಎಂಬ ಘೋಷವಾಕ್ಯದಡಿ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಜೂನ್ 20, ಶನಿವಾರ ಬೆಳಿಗ್ಗೆ 10.30ಕ್ಕೆ ಕುಮಟಾ ತಾಲೂಕಿನ ಅಂತ್ರವಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಎನ್.ಡಿ. ಹೆಗಡೆ ಅವರ ಕಡಸಾಲಗದ್ದೆ ತೋಟದಲ್ಲಿ ಕಾರ್ಯಾಗಾರ ನಡೆಯಲಿದೆ.

ಕಾರ್ಯಾಗಾರದ ಪ್ರಮುಖ ಉದ್ದೇಶ ರೈತರಿಗೆ ಸಾವಯವ ಗೊಬ್ಬರಗಳ ಬಳಕೆ, ನೈಸರ್ಗಿಕ ಕೃಷಿಯ ಮಹತ್ವ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ವಿಧಾನಗಳ ಬಗ್ಗೆ ಪ್ರಾಯೋಗಿಕ ಮತ್ತು ವೈಜ್ಞಾನಿಕ ಮಾಹಿತಿಯನ್ನು ನೀಡುವುದಾಗಿದೆ.

ಕಾರ್ಯಾಗಾರದಲ್ಲಿ ಏನೆಲ್ಲ ಮಾಹಿತಿ?

  • ನೈಸರ್ಗಿಕ ಕೃಷಿಯ ಮಹತ್ವ ಮತ್ತು ಪ್ರಯೋಜನಗಳು

  • ಸಾವಯವ ಗೊಬ್ಬರಗಳ ಸಮರ್ಪಕ ಬಳಕೆ

  • ಮಣ್ಣಿನ ಸಾರ ಹೆಚ್ಚಿಸುವ ಹಾಗೂ ಸುಧಾರಿಸುವ ವಿಧಾನಗಳು

  • ಜೀವಾಮೃತ, ಬೀಜಾಮೃತ ಮತ್ತು ಘನಜೀವಾಮೃತ ತಯಾರಿಸುವ ವಿಧಾನಗಳು

  • ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸುವ ಕೃಷಿ ತಂತ್ರಗಳು

  • ನೈಸರ್ಗಿಕ ವಿಧಾನದಲ್ಲಿ ರೋಗ ಮತ್ತು ಕೀಟ ನಿರ್ವಹಣೆ

  • ರೈತರಿಗಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ

ಕಾರ್ಯಕ್ರಮದಲ್ಲಿ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಾಗೂ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಿಜೆಪಿ ರೈತ ಮೋರ್ಚಾ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0