ಕೈಗಡಿ ಹೊಳೆಯಲ್ಲಿ ನೀರುಪಾಲಾಗಿದ್ದ ಯುವಕನ ಶವ ಪತ್ತೆ

ಆಪ್ತ ನ್ಯೂಸ್ ಯಲ್ಲಾಪುರ:
ಯಲ್ಲಾಪುರ ಪಟ್ಟಣದ ಸಬಗೇರಿ ನಿವಾಸಿ ಸಾಗರ್ ರಾಮಾ ದೇವಾಡಿಗ ಎಂಬ ೨೩ ಹರೆಯ ತನ್ನ ಸ್ನೇಹಿತರ ಜೊತೆ ಸೇರಿ ಹುಟ್ಟು ಹಬ್ಬ ಮಾಡಲು ಅರಬೈಲ್ ಸಮೀಪ ಇರುವ ಕೈಗಡಿ ಬಳಿಯ ಹೊಳೆಗೆ ಹೋಗಿದ್ದರು. ಅಲ್ಲಿ ಹೊಳೆ ಇಳಿದು ಈಜಲು ಹೋದವನು ಕಾಣೆಯಾಗಿದ್ದ.
ಸ್ಥಳಕ್ಕೆ ಪೊಲೀಸರು ತೆರಳಿ ಸ್ಥಳೀಯರ ನೆರವಿನೊಂದಿಗೆ ಶೋಧ ನಡೆಸಿದ್ದರು. ಬುಧವಾರ ಬೆಳಗ್ಗೆಯಿಂದ ಶೋಧ ಕಾರ್ಯ ಮುಂದುವರಿದಿದ್ದು, ಸಂಜೆವರೆಗೂ ಸಾಗರ್ ಪತ್ತೆಯಾಗಿರಲಿಲ್ಲ. ಕೈಗಡಿವರಾದ ಗಣಪ ಸಿದ್ದಿ, ರಾಮಾ ಸಿದ್ದಿ, ವೆಂಕ ಸಿದ್ದಿ ಹಾಗೂ ನಾರಾಯಣ ಸಿದ್ದಿ ಅವರು ಬುಧವಾರ ರಾತ್ರಿಯಿಡೀ ಹುಡುಕಾಟ ನಡೆಸಿದ್ದು, ಗುರುವಾರ ಬೆಳಗಿನ ಜಾವ ಸಾಗರ್ ಗಿಡಗಂಟಿಗೆ ಸಿಕ್ಕು ಶವವಾಗಿ ತೇಲುತ್ತಿರುವುದು ಕಂಡುಬಂತು.
What's Your Reaction?






