ನ. 9 ರಂದು ಉತ್ತರ ಕನ್ನಡದ ಯುವ ಕವಿಗಳ ಪುಸ್ತಕ ಬಿಡುಗಡೆ

Nov 7, 2025 - 18:01
 0  39
ನ. 9 ರಂದು ಉತ್ತರ ಕನ್ನಡದ ಯುವ ಕವಿಗಳ ಪುಸ್ತಕ ಬಿಡುಗಡೆ

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡದ ಇಬ್ಬರು ಯುವ ಕವಿಗಳು ಹಾಗೂ ಆಪ್ತ ನ್ಯೂಸ್ ಬರಹಗಾರರಾದ ವಿನಯ್ ನಾಯ್ಕ್ ಮತ್ತು ಗಣೇಶ್ ನಾಯ್ಕ್ ಅವರುಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮವು ೯ ನವೆಂಬರ್ ೨೦೨೫, ಭಾನುವಾರ ಬೆಳಿಗ್ಗೆ ೯:೦೦ ಗಂಟೆಯಿಂದ ಬೆಂಗಳೂರಿನ ಜೆ.ಎಸ್.ಎಸ್ ಜಯನಗರ ಹಾಲ್ ನಲ್ಲಿ ನಡೆಯಲಿದೆ.

ವಿನಯ್ ನಾಯ್ಕ್ ಅವರ ಅಷ್ಟಮುಖಿ ಎನ್ನುವ ಎಂಟು ಕಥೆಗಳ ಕಥಾ ಸಂಕಲನ ಬಿಡುಗಡೆ ಆಗುತ್ತಿದೆ. ಅದೇ ರೀತಿ ಗಣೇಶ್ ನಾಯ್ಕ್ ಅವರ ಭಾವಬುತ್ತಿ ಎನ್ನುವ ಕಥಾ ಸಂಕಲನ ಕೂಡ ಲೋಕಾರ್ಪಣೆ ಆಗುತ್ತಿದೆ. ಈ ಇಬ್ಬರೂ ಕವಿಗಳ ಪುಸ್ತಕಗಳನ್ನು ಅಕ್ಷರನಾದ ಪಬ್ಲಿಕೇಶನ್ ಪ್ರಕಟಿಸುತ್ತಿದೆ. ಈ ಇಬ್ಬರೂ ಕವಿಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0