ಬೈಕ್ ಸವಾರನ ಮೇಲೆ ಕಾರು ಹತ್ತಿಸಿ, ದರೋಡೆಗೆ ಯತ್ನ

ಆಪ್ತ ನ್ಯೂಸ್ ಶಿರಸಿ:
ಹಾಡು ಹಗಲಿನಲ್ಲಿಯೇ ಶಿರಸಿಯಲ್ಲಿ ದರೋಡೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ನಗರದ ಕಾಲೇಜ ರಸ್ತೆಯಲ್ಲಿ ಬೈಕ್ ಅಡ್ಡ ಹಾಕಿ,ಕಾರು ಹತ್ತಿಸಿ ಹಲ್ಲೆ ಮಾಡಿ ದರೋಡೆಗೆ ಯತ್ನಿಸಲಾಗಿದೆ.
ಇಂದು ಮಧ್ಯಾಹ್ನ ಶಿರಸಿಯ ಎಂಈಎಸ್ ಕಾಲೇಜು ಬಳಿ ನಡೆದ ಘಟನೆಯಲ್ಲಿ ಮಾರುತಿ ಹನುಮಂತ ಮರಾಠೆ ಸಾ: ಕೆಇಬಿ ರಸ್ತೆ, ಶಿರಸಿ ಇವರು ತಮ್ಮ ಬುಲೆಟ್ ಬೈಕ್ ನಲ್ಲಿ ಕಾಲೇಜು ರಸ್ತೆಯಲ್ಲಿ ಹೋಗುತ್ತಿದ್ದರು.
ಈ ವೇಳೆ ನಾಲ್ಕು ಜನರಿದ್ದ ಕಾರೊoದು ಇವರ ಬೈಕ್ ಮೇಲೆ ನುಗ್ಗಿತೆoದು ಹೇಳಲಾಗುತ್ತಿದೆ. ಸವಾರ ಕೆಳಗೆ ಬಿದ್ದ ಕೂಡಲೇ ನಾಲ್ಕು ಜನ ಹಲ್ಲೆ ಮಾಡಿದ್ದು, ಜನ ಸೇರುತ್ತಿರುವಂತೆಯೇ ಮಾರುತಿ ಮರಾಟೆಯ ಬೈಕ್ ಕೀಲಿ ಕಸಿದು, ತಾವು ತಂದ ಕಾರನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದರೆ.
ಈ ಮಧ್ಯೆ ಬೈಕ್ ನ ಬಾಕ್ಸ್ ನಲ್ಲಿದ್ದ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಅಪಹರಿಸಲಾಗಿದೆ ಎಂದು ಮಾರುತಿ ಮಾರಾಟ ಹೇಳಿದ್ದಾನೆ. ಈ ಸಂದರ್ಭದಲ್ಲಿ ದರೋಡೆಕೋರರು ತಂದಿದ್ದ ಕಾರು, ರಸ್ತೆ ಪಕ್ಕದ ಕಾಲುವೆಯಲ್ಲಿ ಜಾರಿ ಉರುಳಿದೆ. ಹೀಗಾಗಿ ಕಾರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿ ಎಸ್ ಐ ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು ತನಿಖೆ ಕೈಗೊಂಡಿದ್ದಾರೆ. ಘಟನೆಯ ಕುರಿತು ಭೀಮ ಘರ್ಜನೆ ಸಂಘಟನೆ ಅಧ್ಯಕ್ಷ ಪುನೀತ್ ಮರಾಟೆ ಮಾಹಿತಿ ನೀಡಿದ್ದು ತನಿಖೆಗೆ ಆಗ್ರಹಿಸಿದ್ದಾರೆ.
What's Your Reaction?






