ಏಕ ಬಳಕೆಯ ಪ್ಲಾಸ್ಟಿಕ್ ವಿಲೇವಾರಿಗೆ ಸ್ಪಂದಿಸದ ದಾಂಡೇಲಿ ನಗರಸಭೆ: ನಗರದೆಲ್ಲೆಡೆ ಪ್ಲಾಸ್ಟಿಕ್ ಕೊಳಕು
ಆಪ್ತ ನ್ಯೂಸ್ ದಾಂಡೇಲಿ:
ರಾಜ್ಯದ ಮುಖ್ಯ ಮಂತ್ರಿ ಗಳು ಸರಕಾರ ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರಿಗೆ ತಿಳಿಸಿದಂತೆ, ಮುಖ್ಯ ಕಾರ್ಯದರ್ಶಿ ಗಳುತಮ್ಮ ಕಚೇರಿಯಿಂದ ಕಳೆದ ಜೂನ 21 ರಂದು ಒಂದು ಆದೇಶ ಹೊರಡಿಸಿದ್ದಾರೆ, ಈ ಆದೇಶದ ಪ್ರಕಾರ ಪರಿಸರ ಸಂರಕ್ಷಣೆಯ ಹಿತ ದೃಷ್ಟಿಯಿಂದ, ಪರಿಸರ ಸಂರಕ್ಷಣೆ ಕಾಯ್ದೆ 5ರ ಆಡಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಂದಾಗಿ ರಸ್ತೆ ಚರಂಡಿ ಗಳೆಲ್ಲವೂ ಗಬ್ಬು ನಾರುವಂತಾಗಿದ್ದು ಕೂಡಲೇ ಇಂತ ಪ್ಲಾಸ್ಟಿಕ್ ಗಳನ್ನು ನಿರ್ಬಂದಿಸಬೇಕು ಮತ್ತು ಬಳಸಿ ಒಗೆದ ಇಂತಹ ಪ್ಲಾಸ್ಟಿಕ್ ಗಳ ವಿಲೇವಾರಿ ತಕ್ಷಣ ಮಾಡಬೇಕು ಎಂದು ಮುಖ್ಯ ಮಂತ್ರಿಗಳ ಹೇಳಿಕೆಯನ್ನು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಆದರೆ ದಾಂಡೇಲಿ ನಗರ ಸಭೆ ಮಾತ್ರ ಈ ಆದೇಶ ತನಗೆ ಸಂಬಂಧಿಸಿಲ್ಲ ಎಂಬಂತೆ ವರ್ತಿಸುತ್ತಿದೆ. ನಗರದೆಲ್ಲೆಡೆ ರಸ್ತೆ ಅಕ್ಕ ಪಕ್ಕ ಪ್ಲಾಸ್ಟಿಕ್ ಕೊಳಕು ಗಬ್ಬು ನಾರುತ್ತಿದೆ.
ಹಳಿಯಾಳ ಕಡೆಯಿಂದ ಬನ್ನಿ, ಕಾರವಾರ ಜೋಯಿಡಾ ಕಡೆಯಿಂದ ಬನ್ನಿ ಅಥವಾ ಯಲ್ಲಾಪುರ ಕಡೆಯಿಂದ ಇಲ್ಲ ಗಣೇಶಗುಡಿ ಇಂದಲಾದರೂ ಬನ್ನಿ ನಿಮಗೆ ಮೊದಲು ಸ್ವಾಗತ ಹೇಳೋದು ರಸ್ತೆ ಪಕ್ಕದಲ್ಲಿ ಕೊಳೆತು ಬಿದ್ದು ನಾರುತ್ತಿರುವ ರಾಶಿ ರಾಶಿ ಪ್ಲಾಸ್ಟಿಕ್ ಗಳು. ಅಷ್ಟೇ ಏಕೆ ದಾಂಡೇಲಿ ನಗರದ ಮದ್ಯ ಭಾಗದ ರಸ್ತೆ, ಸಿನೆಮಾ ಟಾಕೀಸ್ ಪಕ್ಕದಿಂದ ಅಂಚೆ ಕಚೇರಿಗೆ ಹೋಗುವ ಮದ್ಯದ ರಸ್ತೆಯಲ್ಲಿ ಒಮ್ಮೆ ಹೋಗಿ ನೋಡಿ ಮತ್ತೆಂದೂ ಈ ರಸ್ತೆಯ ಪಕ್ಕ ನೀವು ಮುಖ ಮಾಡೋದಿಲ್ಲ, ಅಷ್ಟು ಗಲೀಜಿನಿಂದ ಈ ರಸ್ತೆ ತುಂಬಿದೆ. ಇವುಗಳಿಂದಾಗಿ ದಾಂಡೇಲಿಗೆ ಬರುವ ಜೋಯಿಡಾ ಹಳಿಯಾಳ ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ಕಿರಿ ಕಿರಿಯಾಗುತ್ತಿದೆ ಆರೋಗ್ಯದಲ್ಲೂ ಏರು ಪೆರುಗಳಾಗುತ್ತಿವೆ.
ನಗರದ ಚರಂಡಿಗಳೂ ಗಬ್ಬು ನಾರುತ್ತಿವೆ ವೇಳೆಗೆ ಸರಿಯಾಗಿ ಇಲ್ಲದ ಬಸ್ ಗಳನ್ನು ಕಾಯುವ ಶಾಲೆ ಕಾಲೇಜಿನ ಮಕ್ಕಳಿಗೆ ಇದು ಸಂಕಷ್ಟ ತಂದಿದೆ, ಹಾಗಾಗಿ ದಾಂಡೇಲಿ ಪ್ಲಾಸ್ಟಿಕ್ ಮುಕ್ತ ಮಾಡಲು ನಗರಸಭೆ ಯಾಕೆ ಮುಂದೆ ಬರುತ್ತಿಲ್ಲ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



