ಗುಳ್ಳಾಪುರದ ಧನ್ಯಾಗೆ ಹವ್ಯಕ ಪಲ್ಲವ ಪ್ರಶಸ್ತಿ
ಆಪ್ತ ನ್ಯೂಸ್ ಯಲ್ಲಾಪುರ:
ವಿದ್ಯಾರ್ಥಿ ದೆಸೆಯಲ್ಲೇ ಬಹುಮುಖ ಪ್ರತಿಭೆ ತಾಲೂಕಿನ ಗುಳ್ಳಾಪುರದ ಧನ್ಯಾ ಜಿ.ಬಿ ಇವಳಿಗೆ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಹವ್ಯಕ ಪಲ್ಲವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಯಕ್ಷಗಾನ, ಕೀರ್ತನೆ, ಕೊಳಲು ವಾದನ, ಭಾಷಣ, ವಿಜ್ಞಾನ ನಾಟಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಧ್ಯಯನ ಜೊತೆಯಲ್ಲಿ ರಾಜ್ಯಮಟ್ಟದ ಎರಡು ವರ್ಷ ಸಂಸ್ಕೃತ ಭಾಷಣ ದಲ್ಲಿ ಭಾಗವಹಿಸಿ 2024-25 ರಲ್ಲಿ ಜಿಲ್ಲಾಮಟ್ಟದ ನಾಟಕ ಸ್ಪರ್ಧೆ ಯಲ್ಲಿ ಪ್ರಶಸ್ತಿ ಹಾಗೂ ಉತ್ತಮ ನಟಿ ಪ್ರಶಸ್ತಿ ತನ್ಬದಾಗಿಸಿಕೊಂಡವಳಾಗಿದ್ದು ಪ್ರಸ್ತುತ ಈಕೆ ಗೋಕರ್ಣದ ಸಾರ್ವಭೌಮ ಗುರುಕುಲದಲ್ಲಿ ಎಸ್ ಎಸ್ ಎಲ್ ಸಿಯನ್ನು ಓದುತ್ತಿದ್ದಾಳೆ.
ಬೆಂಗಳೂರಿನಲ್ಲಿ ನಡೆಯುವ ಹವ್ಯಕ ೮೩ ನೇ ಸಂಸ್ಥಾನೋತ್ಸವ ಸಮಾರಂಭದಲ್ಲಿ ಹವ್ಯಕ ಪಲ್ಕವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಗುಳ್ಳಾಪುರದ ಜಿ.ಆರ್.ಭಟ್ ಮತ್ತು ಸಂದ್ಯಾ ದಂಪತಿಯ ಪುತ್ರಿಯಾಗಿದ್ದಾಳೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0