ಶಿರಸಿ ರೋಟರಿ ಪರಿವಾರದಿಂದ ದೀಪಾವಳಿಯ ಪಾಹಟ್
ಆಪ್ತ ನ್ಯೂಸ್ ಶಿರಸಿ:
ಪಾಹಟ್ ಎಂದರೆ ಮರಾಠಿ ಭಾಷೆಯಲ್ಲಿ ಬೆಳಗು. ಬೆಳಿಗ್ಗೆ ಏರ್ಪಡಿಸುವ ಸಂಗೀತ ಕಾರ್ಯಕ್ರಮಗಳಿಗೂ ಪಾಹಟ್ ಎಂದು ಕರೆಯುವ ಸಂಪ್ರದಾಯವಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ಮತ್ತು ನಯನಾ ಫೌಂಡೇಶನ್ ಸಹಭಾಗಿತ್ವದಲ್ಲಿ ರೋಟರಿ ಪರಿವಾರದ ಸದಸ್ಯರಿಗಾಗಿ, ದೀಪಾವಳಿ ಸವಿ ಸಂಭ್ರಮ – ಚುಮು ಚುಮು ಬೆಳಗಿನ ಸಂಗೀತಯಾನ ಕಾರ್ಯಕ್ರಮವನ್ನು ಶಿರಸಿಯ ಎಂ.ಎಂ.ಜೋಶಿ ಗಣೇಶ ನೇತ್ರಾಲಯದ, ನಯನಾ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ರೊ.ಗಜಾನನ ಎಸ್. ಹೆಗಡೆಯವರ ಪತ್ನಿ ವಿದುಷಿ. ಸುಧಾ ಮುತ್ತಮುರುಡುರವರು ಪ್ರಮುಖ ಗಾಯಕಿಯಾಗಿ ಆಹಿರ್ ಭೈರವ್ ರಾಗದ ಅಲಬೇಲಾ ಸಜನ್ ಆವೋ ರೇ ನಿಂದ ಪ್ರಾರಂಭಿಸಿ, ಒಂದು ಗಂಟೆಗಳ ಕಾಲ ಸುಶ್ರಾವ್ಯ ಗಾಯನದೊಂದಿಗೆ ಅವಿಸ್ಮರಣೀಯ ಕಾರ್ಯಕ್ರಮ ನಡೆಸಿಕೊಟ್ಟರು.,
ಪಕ್ಕ ವಾದ್ಯದಲ್ಲಿ, ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿಯವರು ಹಾರ್ಮೋನಿಯಂ, ಗಣೇಶ ಗುಂಡ್ಕಲ್ ರವರು ತಬಲಾದಲ್ಲಿ, ಕಿರಣ್ ಕಾನಗೋಡು ರವರು ರಿದಂ ಪ್ಯಾಡ್ ನಲ್ಲಿ ಸಹಕರಿಸಿದರೆ, ಕೀರ್ತಿ ಶಹಾನೆಯವರು ತಾನ್‌ಪುರಾದಲ್ಲಿ ಸಾಥ್ ನೀಡಿದರು.
ಎರಡು ಸುಶ್ರಾವ್ಯ ಗೀತೆಗಳೊಂದಿಗೆ ಆನ್. ರೇಖಾ ಸತೀಶ್ ಭಟ್ ಕಾರ್ಯಕ್ರಮ ಪ್ರಾರಂಭಿಸಿದರು.. ಹಿರಿಯ ರೊ.ಗಣೇಶ್ ಕೂರ್ಸೆಯವರು ಕಾರ್ಯಕ್ರಮ ಸಂಯೋಜಿಸಿದ್ದರು. ರೊ. ಅನಂತ ಪದ್ಮನಾಭರವರು ಕಾರ್ಯಕ್ರಮ ನಿರ್ವಹಿಸಿದರು. ನಯನಾ ಫೌಂಡೇಶನ್‌ನ ರೊ.ಡಾ.ಶಿವರಾಂ
ರೋಟರಿ ಅಧ್ಯಕ್ಷ ರೊ.ಶ್ರೀನಿವಾಸ ನಾಯ್ಕ, ಕಾರ್ಯದರ್ಶಿ ರೊ.ಹರೀಶ್ ಹೆಗಡೆ, ಖಜಾಂಚಿ.ರೊ.ವಿನಾಯಕ್ ಶೇಟ್, ಕಾರ್ಯಕಾರಿ ಕಾರ್ಯದರ್ಶಿ ರೊ.ಸತೀಶ್ ಭಟ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿದ್ಯಾ ನಾಯ್ಕ, ಕಾರ್ಯದರ್ಶಿ ಆನ್.ಸಂಧ್ಯಾ ನಾಯ್ಕ, ಐ.ಎಸ್.ಓ. ಶೈಲಾ ಹೆಗಡೆ, ಎಡಿಟರ್ ದೀಪ್ತಿ ಉದಾಸಿ ವೇದಿಕೆಯಲ್ಲಿದ್ದು ಸಹಕರಿಸಿದರು. ರೊ.ಹರೀಶ್ ಹೆಗಡೆ ವಂದಿಸಿದರು.
ರೊ.ಮಾಧುರಿ ಶಿವರಾಂ ರವರು ಉಪಾಹಾರದ ಪ್ರಾಯೋಜಕತ್ವ ವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



