ಪರಿಸರ ಸೂಕ್ಷ್ಮ ವಲಯದ ಕರಡು ಪಟ್ಟಿ ಪ್ರಕಟ: ಅಂಕೋಲಾ-ಭಟ್ಕಳದ  ಯಾವ ಯಾವ ಗ್ರಾಮಗಳಿವೆ ಗೊತ್ತಾ? ಇಲ್ಲಿದೆ ವಿವರ

Aug 4, 2026 - 17:01
 0  352
ಪರಿಸರ ಸೂಕ್ಷ್ಮ ವಲಯದ ಕರಡು ಪಟ್ಟಿ ಪ್ರಕಟ: ಅಂಕೋಲಾ-ಭಟ್ಕಳದ  ಯಾವ ಯಾವ ಗ್ರಾಮಗಳಿವೆ ಗೊತ್ತಾ? ಇಲ್ಲಿದೆ ವಿವರ

ಆಪ್ತ ನ್ಯೂಸ್‌ ಅಂಕೋಲಾ/ಭಟ್ಕಳ:

ಪಶ್ಚಿಮ ಘಟ್ಟ ಪ್ರದೇಶದ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಸ್ತಾಪಿತ ಪರಿಸರ ಸೂಕ್ಷ್ಮ ವಲಯ (Eco Sensitive Zone - ESZ) ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಹಾಗೂ ಭಟ್ಕಳ ತಾಲೂಕಿನ ಹಲವು ಗ್ರಾಮಗಳು ಸೇರ್ಪಡೆಯಾಗುವ ಸಾಧ್ಯತೆ ಕಂಡುಬಂದಿದ್ದು, ಸ್ಥಳೀಯರಲ್ಲಿ ಮತ್ತೆ ಚರ್ಚೆ, ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಲಭ್ಯ ಮಾಹಿತಿಯ ಪ್ರಕಾರ, ಅಂಕೋಲಾ ತಾಲೂಕಿನ 44 ಗ್ರಾಮಗಳು ಹಾಗೂ ಭಟ್ಕಳ ತಾಲೂಕಿನ 25 ಗ್ರಾಮಗಳು ಸೇರಿ ಒಟ್ಟು 69 ಗ್ರಾಮಗಳು ಪ್ರಸ್ತಾಪಿತ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರಲಿವೆ ಎಂದು ತಿಳಿದುಬಂದಿದೆ. ಈ ಪಟ್ಟಿ ಹೊರಬಿದ್ದ ಬೆನ್ನಲ್ಲೇ ಗ್ರಾಮಸ್ಥರು, ರೈತರು, ಭೂಮಾಲೀಕರು ಹಾಗೂ ವಿವಿಧ ಸಂಘಟನೆಗಳು ಪರಿಸರ ಸಂರಕ್ಷಣೆ ಮತ್ತು ಜನಜೀವನದ ನಡುವಿನ ಸಮತೋಲನದ ಕುರಿತು ಚರ್ಚೆ ಆರಂಭಿಸಿವೆ.

ಅಂಕೋಲಾ ತಾಲೂಕಿನ ಈ ಗ್ರಾಮಗಳು ಪಟ್ಟಿಯಲ್ಲಿ

ಅಚವೆ, ಅಡ್ಲೂರು, ಅಲಗೇರಿ, ಬೆರ್ಡ, ಬೊಗ್ರಿಬೈಲ್‌, ಬೆಂಗ್ರೆ, ಬ್ರಹ್ಮೂರು, ಡೋಂಗ್ರಿ, ಗುಳೆ, ಹಳವಳ್ಳಿ, ಹೆಬ್ಬುಳ, ಹೆಗ್ಗಾರ್, ಮಕಿಗದ್ದೆ, ಹಿಲ್ಲೂರ, ಕಮ್ಮಾಣಿ, ಕಾಮಗೆ, ಕಂಚಿನಮನೆ, ಕಾರೇಬೈಲ್‌, ಕಟ್ಟಿನಹಕ್ಕಲು, ಕೆಂಕಣಿ ಶಿವಪುರ, ಕೊಡ್ಲಗದ್ದೆ, ಕೊಡಸಣಿ, ಕುಂಟಗಣಿ, ಲಕ್ಕೆಗುಳಿ, ಮಲ್ಲಾಣಿ, ಮಾಣಿಗದ್ದೆ, ಮಾರುಗದ್ದೆ, ಮೊರಳ್ಳಿ, ನವಗದ್ದೆ, ಸಕಲಬೆಣ, ಶೇವಕಾರ, ಶಿಕ್ಲಿತುರ್ಲಿ, ಶಿರೂರು, ಸೊಣಗಿನಮನೆ, ಸುಂಕಸಾಳ, ಸುರ್ವೆ, ತಕ್ಕಾಟಗೇರಿ, ತಳಗದ್ದೆ, ವಾನ್ಲಬೇಣ ಹಾಗೂ ವಾಸರಕುದ್ರಿಗೆ ಗ್ರಾಮಗಳು ಪ್ರಸ್ತಾಪಿತ ಪಟ್ಟಿಯಲ್ಲಿವೆ.

ಭಟ್ಕಳ ತಾಲೂಕಿನ ಈ ಗ್ರಾಮಗಳು ವ್ಯಾಪ್ತಿಯಲ್ಲಿ

ಅಗ್ಗಾ, ಅಂತ್ರವಳ್ಳಿ, ಅರವಕ್ಕಿ, ಬಡಬಾಗ, ಬೆಣಂದೂರು, ಬೆಸೆ, ಬಿಳುನ್ಮನೆ, ಹಾಡುವಳ್ಳಿ, ಹಲ್ಲಾರಿ, ಹಸರವಳ್ಳಿ, ಹೆಜ್ಜಿಲ್‌, ಹೆಂಜಲೆ, ಹಲ್ಯಾಣಿ, ಹುಡಿಲ್‌, ಕಾಗುಂಡಿ, ಕೆಕ್ಕೋಡ, ಕೆರೆಹಿತ್ತಿಲು, ಕಿತ್ರೆ, ಕೊಪ್ಪ, ಕುಂಟವಾಣಿ, ಕುರಂದೂರು, ಮಾರಕೇರಿ, ಮುಗಳಿ, ನುಜ್ಜಿ ಹಾಗೂ ವೋಣಿಬಾಗಿಲು ಗ್ರಾಮಗಳು ಪ್ರಸ್ತಾಪಿತ ಪರಿಸರ ಸೂಕ್ಷ್ಮ ವಲಯದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಗ್ರಾಮಸ್ಥರಲ್ಲಿದೆ ಆತಂಕ

ಪರಿಸರ ಸೂಕ್ಷ್ಮ ವಲಯ ಘೋಷಣೆಯಾದರೆ ಭವಿಷ್ಯದಲ್ಲಿ ಕಟ್ಟಡ ನಿರ್ಮಾಣ, ಕೈಗಾರಿಕೆ ಸ್ಥಾಪನೆ, ಕಲ್ಲು ಗಣಿಗಾರಿಕೆ, ಕೆಲವು ಅಭಿವೃದ್ಧಿ ಕಾಮಗಾರಿಗಳು ಹಾಗೂ ಇತರೆ ಚಟುವಟಿಕೆಗಳ ಮೇಲೆ ನಿಯಮಗಳು ಅನ್ವಯವಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಪರಿಸರವಾದಿಗಳು ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಗೆ ಇಂತಹ ಕ್ರಮಗಳು ಅಗತ್ಯವೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರದ ಅಂತಿಮ ನಿರ್ಧಾರದತ್ತ ಎಲ್ಲರ ಚಿತ್ತ

ಸದ್ಯ ಇದು ಪ್ರಸ್ತಾಪಿತ ಪರಿಸರ ಸೂಕ್ಷ್ಮ ವಲಯದ ಪಟ್ಟಿ ಆಗಿದ್ದು, ಅಂತಿಮ ಅಧಿಸೂಚನೆ ಹಾಗೂ ಸರ್ಕಾರದ ಮುಂದಿನ ನಿರ್ಧಾರದ ಮೇಲೆ ಈ ಗ್ರಾಮಗಳ ಭವಿಷ್ಯದ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ಚಟುವಟಿಕೆಗಳ ರೂಪುರೇಷೆ ಅವಲಂಬಿತವಾಗಿರಲಿದೆ. ಈ ಬೆಳವಣಿಗೆಯನ್ನು ಜಿಲ್ಲೆಯ ಜನರು, ರೈತರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳು ತೀವ್ರ ಕುತೂಹಲದಿಂದ ಗಮನಿಸುತ್ತಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0