ಪರಿಸರ ಸೂಕ್ಷ್ಮ ವಲಯ ಕರಡು ಪಟ್ಟಿ ಪ್ರಕಟ: ಕಾರವಾರ–ಕುಮಟಾದ ಹಲವು ಗ್ರಾಮಗಳು ಸೇರ್ಪಡೆ | ನಿಮ್ಮ ಊರು ಈ ಪಟ್ಟಿಯಲ್ಲಿದೆಯಾ? ಇಲ್ಲಿ ನೋಡಿ

Aug 8, 2026 - 15:16
 0  386
ಪರಿಸರ ಸೂಕ್ಷ್ಮ ವಲಯ ಕರಡು ಪಟ್ಟಿ ಪ್ರಕಟ: ಕಾರವಾರ–ಕುಮಟಾದ ಹಲವು ಗ್ರಾಮಗಳು ಸೇರ್ಪಡೆ | ನಿಮ್ಮ ಊರು ಈ ಪಟ್ಟಿಯಲ್ಲಿದೆಯಾ? ಇಲ್ಲಿ ನೋಡಿ

ಆಪ್ತ ನ್ಯೂಸ್ ಕಾರವಾರ/ಕುಮಟಾ:

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಕಟಿಸಲಾಗಿರುವ ಪರಿಸರ ಸೂಕ್ಷ್ಮ ವಲಯ (ESA) ಕರಡು ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಹಲವು ಗ್ರಾಮಗಳು ಸೇರ್ಪಡೆಯಾಗಿವೆ. ಇದೀಗ ಕಾರವಾರ ಹಾಗೂ ಕುಮಟಾ ತಾಲೂಕಿನ ಗ್ರಾಮಗಳ ಪಟ್ಟಿಯೂ ಸಾರ್ವಜನಿಕ ಗಮನ ಸೆಳೆದಿದೆ.

ಕರಡು ಪಟ್ಟಿಯಲ್ಲಿ ತಮ್ಮ ಗ್ರಾಮ ಸೇರ್ಪಡೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸ್ಥಳೀಯರು ಹಾಗೂ ಗ್ರಾಮಸ್ಥರು ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ. ಕಾರವಾರ ತಾಲೂಕಿನ ಗ್ರಾಮಗಳು ಮತ್ತು ಕುಮಟಾ ತಾಲೂಕಿನ ಗ್ರಾಮಗಳು ಕರಡು ಪಟ್ಟಿಯಲ್ಲಿವೆ.

ಕಾರವಾರ ತಾಲೂಕಿನ ಗ್ರಾಮಗಳು

ಅಮದಳ್ಳಿ, ಅರವ್, ಬೈತಖೋಲ, ಬಾಳೆಮನೆ, ಬೇಳೂರು, ಬರ್ಗಲ್, ಭೈರೆ, ಚೆಂಡಿಯಾ, ದೇವಳಮಕ್ಕಿ, ದೇವಕಾರ್, ಗೋಪಶಿಟ್ಟಾ, ಗೋಟೆಗಾಳಿ, ಗೋಯರ್‌, ಹರ್ಟುಗಾ, ಹಣಕೋಣ, ಹೊಟೆಗಾಳಿ, ಕಡಿಯಾ, ಕದ್ರಾ, ಕಡವಾಡ, ಕೈಗಾ, ಕಮರಗಾಂವ್, ಕೆರವಡಿ, ಕುಚೇಗಾರ, ಲಾಂಡೆ, ಮೈಂಗಿಣಿ, ಮಲ್ಲಾಪುರ, ಮುಡಗೇರಿ, ನಗೇಕೋವೆ, ನಿವ್ಳಿ, ಸಾವಂತವಾಡ, ಶಿರ್ವೆ, ಶಿರವಾಡ, ಸಿದ್ಧರ, ತೋಡೂರು ಹಾಗೂ ವಿರ್ಜೆ.

ಕುಮಟಾ ತಾಲೂಕಿನ ಗ್ರಾಮಗಳು

ಅಬ್ಬೊಳ್ಳಿ, ಆಳಕೋಡ, ಅನಗುಂದಿ, ಅಂತರವಳ್ಳಿ, ಬಂಗಣೆ, ಬಸೋಳಿ, ಬೆಳ್ಳಂಗಿ, ಭಂಡಿವಾಳ, ದಿವಳ್ಳಿ, ಹಾರವಳ್ಳಿ, ಹೆಬೈಲ್‌, ಹೆಗಡೆ, ಹಿಂದಬೈಲ್, ಹೊಲನಗದ್ದೆ, ಹೊಸಾಡ, ಕಡಕೋಡ, ಕಲ್ಲಬ್ಬೆ, ಕಲ್ವೆ, ಕಂದವಳ್ಳಿ, ಕಂಕಳೆ, ಕವಲಡಿ, ಕೊಡಂಬಳೆ, ಕೊಳ್ಳಮೈಗುಣಿ, ಲುಕ್ಕೇರಿ, ಮಳವಳ್ಳಿ, ಮೇದಿನಿ, ಮೊರಸೆ, ಮೂಡನಹಳ್ಳಿ, ಮೂಡಿಗಿ, ಮುಗ್ವೆಖಾನವಾಡಿ, ನೀಲಕೋಡ್‌, ಸಾಂಡಳ್ಳಿ, ಸಂತೆಗುಳಿ, ಸಂತೂರು, ಸೊಪ್ಪಿನಹೊಸಳ್ಳಿ, ಉಳ್ಳೂರುಮಠ, ಯಾಣ, ಎಡತಾರೆ, ಯಲವಳ್ಳಿ ಹಾಗೂ ಎತ್ತಿನಬೈಲ್.

ಪರಿಸರ ಸೂಕ್ಷ್ಮ ವಲಯ ಎಂದರೇನು?

ಪರಿಸರ ಸೂಕ್ಷ್ಮ ವಲಯವೆಂದರೆ ಸಂರಕ್ಷಿತ ಅರಣ್ಯ, ವನ್ಯಜೀವಿ ಪ್ರದೇಶ ಹಾಗೂ ಪರಿಸರದ ದೃಷ್ಟಿಯಿಂದ ಮಹತ್ವ ಹೊಂದಿರುವ ಪ್ರದೇಶಗಳ ಸುತ್ತಮುತ್ತ ಪರಿಸರದ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಗುರುತಿಸಲಾಗುವ ಪ್ರದೇಶ.

ಕರಡು ಪಟ್ಟಿಯಲ್ಲಿ ಗ್ರಾಮಗಳು ಸೇರ್ಪಡೆಯಾಗಿರುವುದರಿಂದ, ಅಭಿವೃದ್ಧಿ ಕಾಮಗಾರಿಗಳು, ಕೈಗಾರಿಕೆಗಳು, ಗಣಿಗಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗಳ ಮೇಲೆ ಮುಂದೆ ಯಾವ ರೀತಿಯ ನಿಯಮಗಳು ಅನ್ವಯವಾಗಲಿವೆ ಎಂಬುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಕರಡು ಅಧಿಸೂಚನೆ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕವೇ ಗ್ರಾಮಗಳ ಸೇರ್ಪಡೆ ಹಾಗೂ ಅನ್ವಯವಾಗುವ ನಿಯಮಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.

ನಿಮ್ಮ ಗ್ರಾಮ ಈ ಪರಿಸರ ಸೂಕ್ಷ್ಮ ವಲಯ ಪಟ್ಟಿಯಲ್ಲಿದೆಯೇ? ಮೇಲಿನ ಪಟ್ಟಿಯಲ್ಲಿ ನಿಮ್ಮ ಊರಿನ ಹೆಸರನ್ನು ಪರಿಶೀಲಿಸಿ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0