ಎಪಿಡಿ ಮತ್ತು ಎಸ್.ಆರ್.ಎಫ್.ಗೆ  ಮೊಬಿಲಿಟಿ ಸೋಷಿಯಲ್ ಇಂಪ್ಯಾಕ್ಟ್ ಪುರಸ್ಕಾರ

• ಬೆಂಗಳೂರಿನ ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ (ಎಪಿಡಿ)ಯನ್ನು ಅವರ “ರಿಹ್ಯಾಬ್ ಆನ್ ವ್ಹೀಲ್ಸ್” ಉಪಕ್ರಮಕ್ಕೆ “ಎಂಪವರ್ಮೆಂಟ್ ಆಫ್ ವಲ್ನೆರಬಲ್ ಕಮ್ಯುನಿಟೀಸ್” ವಿಭಾಗದಲ್ಲಿ ನೀಡಲಾಗಿದೆ • ಬೆಂಗಳೂರಿನ ಸೇಫ್ಟಿ ರೀಸರ್ಚ್ ಫೌಂಡೇಷನ್ ರೋಡ್ ಸೇಫ್ಟಿ ಇನ್ನೊವೇಷನ್ ಅಂಡ್ ಎಕ್ಸೆಲೆನ್ಸ್ ವಿಭಾಗದಲ್ಲಿ `ಬ್ರೇಸ್’ ಯೋಜನೆಗೆ ತೀರ್ಪುಗಾರರ ವಿಶೇಷ ಶಿಫಾರಸು ಪಡೆದಿದೆ.

Oct 19, 2025 - 10:09
 0  14
ಎಪಿಡಿ ಮತ್ತು ಎಸ್.ಆರ್.ಎಫ್.ಗೆ  ಮೊಬಿಲಿಟಿ ಸೋಷಿಯಲ್ ಇಂಪ್ಯಾಕ್ಟ್  ಪುರಸ್ಕಾರ
ಆಪ್ತ ನ್ಯೂಸ್ ಬೆಂಗಳೂರು:
ಬೆಂಗಳೂರು ಮೂಲದ ಎನ್.ಜಿ.ಒ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಬ್ರಿಡ್ಜ್ ಸ್ಟೋನ್ ಮೊಬಿಲಿಟಿ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ (ಎಂ.ಎಸ್.ಐ.ಎ)ಯ 5ನೇ ಆವೃತ್ತಿಯ ವಿಜೇತರಲ್ಲಿ ಒಂದಾಗಿದೆ. ಎಪಿಡಿ ಈ ಪುರಸ್ಕಾರವನ್ನು `ಎಂಪವರ್ಮೆಂಟ್ ಆಫ್ ವಲ್ನರಬಲ್ ಕಮ್ಯುನಿಟೀಸ್’ ವಿಭಾಗದ ಅಡಿಯಲ್ಲಿ ಪಡೆದಿದ್ದು `ರಿಹ್ಯಾಬ್ ಆನ್ ವ್ಹೀಲ್ಸ್ (ಆರ್.ಒ.ಡಬ್ಲ್ಯೂ) ಎಂಬ ಪರಿಣಾಮಕಾರಿ ಉಪಕ್ರಮಕ್ಕೆ ಪಡೆದಿದ್ದು ಈ ಉಪಕ್ರಮವು ವಿಶೇಷ ಚೇತನರು ಮತ್ತು ದುರ್ಬಲ ಸಮುದಾಯದವರಿಗೆ ಸಮಗ್ರ ಪುನರ್ ವಸತಿ ಸೇವೆಗಳನ್ನು ಮನೆ ಬಾಗಿಲಿಗೆ ತರುತ್ತಿದೆ. ಇದು ತನ್ನ ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮಗಳು ಮತ್ತು ವಕ್ತಾರಿಕೆಯಿಂದ 1 ಮಿಲಿಯನ್ ಮೀರಿ ಜನರಿಗೆ ಪರಿಣಾಮ ಬೀರಿದೆ.
ಬೆಂಗಳೂರು ಮತ್ತು ಮಹಾರಾಷ್ಟ್ರಗಳಲ್ಲಿ ಕಾರ್ಯಾಚರಣೆ ಮಾಡುವ ಸೇಫ್ಟಿ ರೀಸರ್ಚ್ ಫೌಂಡೇಷನ್(ಎಸ್.ಆರ್.ಎಫ್.) ತನ್ನ ಬ್ರೇಸ್ ಯೋಜನೆಗೆ ತೀರ್ಪುಗಾರರ ಶಿಫಾರಸು ಪಡೆದಿದ್ದು ಅದು ಶಾಲಾ ಸುರಕ್ಷತೆಯನ್ನು ಮೂಲಸೌಕರ್ಯದ ಅಪ್ ಗ್ರೇಡ್ ಗಳು, ಅರಿವಿನ ಕಾರ್ಯಕ್ರಮಗಳು ಮತ್ತು ಸಮುದಾಯ ಸಕ್ರಿಯತೆಯ ಮೂಲಕ ಪರಿವರ್ತಿಸುತ್ತದೆ. 
2021ರಲ್ಲಿ ಬ್ರಿಡ್ಜ್ ಸ್ಟೋನ್ ಪ್ರಾರಂಭಿಸಿದ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ ಸಾಮಾಜಿಕ ಸವಾಲುಗಳನ್ನು ಎದುರಿಸಲು ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಮಾಡುವ ಸುಸ್ಥಿರ ಮೊಬಿಲಿಟಿಗೆ ಆವಿಷ್ಕಾರಕ ಪರಿಹಾರಗಳನ್ನು ಗುರುತಿಸುವ, ಮಾನ್ಯತೆ ನೀಡುವ ಮತ್ತು ಉತ್ತೇಜಿಸುವ ಗುರಿ ಹೊಂದಿದೆ. ಈ ಉಪಕ್ರಮವು ಎಲ್ಲರಿಗೂ ಸುರಕ್ಷಿತ ಮತ್ತು ಸುಸ್ಥಿರ ಮೊಬಿಲಿಟಿ ಮೂಲಕ ಸಾಮಾಜಿಕ ಪ್ರಗತಿ ಸಾಧಿಸುವ ಬ್ರಿಡ್ಜ್ ಸ್ಟೋನ್ ಧ್ಯೇಯವನ್ನು ಬಿಂಬಿಸುತ್ತದೆ. 

ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಡ್ಜ್ ಸ್ಟೋನ್ ಏಷ್ಯಾ ಪೆಸಿಫಿಕ್ ಗ್ರೂಪ್ ಪ್ರೆಸಿಡೆಂಟ್ ಮತ್ತು ಬ್ರಿಡ್ಜ್ ಸ್ಟೋನ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಿರೊಶಿ ಯೊಶೀಝಾನೆ, “ಬ್ರಿಡ್ಜ್ ಸ್ಟೋನ್ ನಲ್ಲಿ ನಾವು ಮೊಬಿಲಿಟಿ ಬರೀ ಚಲನೆಯಲ್ಲ, ಇದು ಜನರನ್ನು ಸಬಲೀಕರಿಸುವ ಮತ್ತು ಪ್ರಗತಿಯನ್ನು ಸಾಧಿಸುವುದು ಎಂದು ನಂಬುತ್ತೇವೆ. ಮೊಬಿಲಿಟಿ ಸೋಷಿಯಲ್ ಇಂಪ್ಯಾಕ್ಟ್ ಪ್ರಶಸ್ತಿಗಳು ಆವಿಷ್ಕಾರಕ ಮೊಬಿಲಿಟಿ ಪ್ರೇರಿತ ಪರಿಹಾರಗಳ ಮೂಲಕ ಪರಿವರ್ತನೆ ತರುವ ಚೇಂಜ್ಮೇಕರ್ ಗಳನ್ನು ಸಂಭ್ರಮಿಸುವುದಾಗಿದೆ. ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿಯ ಕೆಲಸವು ಅತ್ಯಂತ ಅಗತ್ಯವಿರುವವರಿಗೆ ಪುನರ್ ವಸತಿ ನೀಡುವ ಮೂಲಕ ಈ ಸ್ಫೂರ್ತಿಯನ್ನು ಬಿಂಬಿಸುತ್ತದೆ” ಎಂದರು. 
ಎಪಿಡಿಯ `ರಿಹ್ಯಾಬ್ ಆನ್ ವ್ಹೀಲ್ಸ್’ ಉಪಕ್ರಮವು ಕೊನೆಯ ಹಂತದಲ್ಲಿ ಕೈಗೆಟುಕುವ, ಲಭ್ಯ ಪುನರ್ ವಸತಿಯನ್ನು ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶದ ಸಾಮಾಜಿಕವಾಗಿ ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳಿಗೆ ನೀಡುತ್ತದೆ. ಮೊಬಿಲಿಟಿ ಥೆರಪಿ ಯೂನಿಟ್ ಗಳು, ಜೀರಿಯಾಟ್ರಿಕ್ ಮತ್ತು ಆರ್ಫನೇಜ್ ಔಟ್ ರೀಚ್ ಕಾರ್ಯಕ್ರಮಗಳ ಮೂಲಕ ಮತ್ತು ಮನೆಬಾಗಿಲಿಗೆ ವೆಲ್ ನೆಸ್ ಶಿಬಿರಗಳ ಮೂಲಕ ಈ ಯೋಜನೆಯು ಅಂತಹ ಆರೈಕೆ ಸೀಮಿತ ಲಭ್ಯತೆ ಇರುವ ಜನರಿಗೆ ಅಗತ್ಯವಾದ ಪುನರ್ ವಸತಿ ಮತ್ತು ಥೆರಪಿ ಸೇವೆಗಳನ್ನು ನೀಡುತ್ತದೆ. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0