ಆಪ್ತ ನ್ಯೂಸ್ ಬೆಂಗಳೂರು:
ವೋಲ್ವೋ ಕಾರ್ ಇಂಡಿಯಾ ಇಂದು ಅತ್ಯಂತ ನಿರೀಕ್ಷೆಯ, ಸುಸ್ಥಿರ ಮತ್ತು ಸ್ಟೈಲಿಷ್ ಎಲೆಕ್ಟ್ರಿಕ್ ಕಾರು ವೋಲ್ವೋ ಇಎಕ್ಸ್30 ಬೆಲೆ ಪ್ರಕಟಿಸಿದೆ. ಪ್ರಾರಂಭಿಕ ಎಕ್ಸ್-ಶೋರೂ ಬೆಲೆ ₹41,00,000 ಹೊಂದಿರುವ ಇಎಕ್ಸ್30 ಐಷಾರಾಮಿ ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಹಿಂದೆಂದಿಗಿಂತಲೂ ಹೆಚ್ಚು ಲಭ್ಯವಾಗುವಂತೆ ಮಾಡಿದೆ.
ಈ ಹಬ್ಬದ ಋತುವಿನಲ್ಲಿ ವೋಲ್ವೋ ಕಾರ್ ಇಂಡಿಯಾ ತನ್ನ ಡೀಲರ್ ಗಳ ಮೂಲಕ ಅಕ್ಟೋಬರ್ 19, 2025ಕ್ಕಿಂತ ಮುಂಚೆ ಪ್ರಿ-ರಿಸರ್ವ್ ಮಾಡುವವರಿಗೆ ಇಎಕ್ಸ್30ಯನ್ನು ₹39,99,000 ಕ್ಕೆ ನೀಡುತ್ತಿದೆ. ಈ ವಿಶೇಷ ಪ್ರಿ-ರಿಸರ್ವ್ ಬೆಲೆಯು ಸೀಮಿತ ಅವಧಿಗೆ ಲಭ್ಯವಿರುತ್ತದೆ ಮತ್ತು ಗ್ರಾಹಕರು ವಿವರಗಳಿಗೆ ಅವರ ಹತ್ತಿರದ ಡೀಲರ್ ಶಿಪ್ ಗೆ ಭೇಟಿ ನೀಡಬಹುದು. ಕಾರು ಐದು ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಡೆಲಿವರಿಗಳು ನವೆಂಬರ್ 2025ರ ಮೊದಲ ವಾರದಲ್ಲಿ ಪ್ರಾರಂಭವಾಗುತ್ತವೆ.
ಇದು ಕಂಪನಿಯ ಬೆಂಗಳೂರು ಬಳಿಯ ಹೊಸಕೋಟೆಯ ಕಂಪನಿಯ ಘಟಕದಲ್ಲಿ ಜೋಡಿಸಲಾಗುವ ಮೂರನೇ ಇವಿ ಮಾಡೆಲ್ ಆಗಿದೆ. ಪ್ರತಿ ಇಎಕ್ಸ್30ಯು 11-ಕೆಡಬ್ಲ್ಯೂ ಚಾರ್ಜರ್ ಅನ್ನು ಸ್ಟಾಂಡರ್ಡ್ ಕೊಡುಗೆಯನ್ನಾಗಿ ಹೊಂದಿದೆ. ಇಎಕ್ಸ್30 ಸುಸ್ಥಿರ ಮೊಬಿಲಿಟಿ, ಆವಿಷ್ಕಾರಕ ತಂತ್ರಜ್ಞಾನ, ಭವಿಷ್ಯಾತ್ಮಕ ವಿನ್ಯಾಸ ಮತ್ತು ಸರಿಸಾಟಿ ಇರದ ಸುರಕ್ಷತೆಗೆ ವೋಲ್ವೋದ ಬದ್ಧತೆಯನ್ನು ಬಿಂಬಿಸುತ್ತಿದೆ.
“ಭಾರತೀಯ ಮಾರುಕಟ್ಟೆಗೆ ಆಕರ್ಷಕ ಬೆಲೆಯಲ್ಲಿ ಪ್ರಿ-ರಿಸರ್ವ್ ಮಾಡುವವರಿಗೆ ವಿಶೇಷ ಪ್ರಯೋಜನಗಳೊಂದಿಗೆ ವೋಲ್ವೋ ಇಎಕ್ಸ್30 ಬಿಡುಗಡೆ ಮಾಡಲು ಬಹಳ ಸಂತೋಷ ಹೊಂದಿದ್ದೇವೆ” ಎಂದು ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಜ್ಯೋತಿ ಮಲ್ಹೋತ್ರಾ ಹೇಳಿದರು. “ಈ ಮಾದರಿಯು ಶಕ್ತಿ, ವಿನ್ಯಾಸ ಮತ್ತು ಸುಸ್ಥಿರ ಐಷಾರಾಮ ಬಯಸುವ ಎಲೆಕ್ಟ್ರಿಕ್ ವಾಹನಗಳು ಅನ್ವೇಷಕರು ಮತ್ತು ಸಾಧಕರಿಗೆ ಇಷ್ಟವಾಗುವಂತಿದೆ. ತನ್ನ ಪ್ರಭಾವಿ ಕಾರ್ಯಕ್ಷಮತೆ, ವಿಸ್ತರಿಸಿದ ಶ್ರೇಣಿ, ಅತ್ಯಾಧುನಿಕ ನೋಟ ಮತ್ತು ತಡೆರಹಿತ ಮಾಲೀಕತ್ವದ ಪ್ಯಾಕೇಜ್ ಅನುಕೂಲದಿಂದ ಇಎಕ್ಸ್30 ನಮ್ಮ ಗ್ರಾಹಕರಿಗೆ ಇವಿ ಅನುಭವವನ್ನು ಮರು ವ್ಯಾಖ್ಯಾನಿಸಲು ಸಜ್ಜಾಗಿದೆ” ಎಂದರು.
ವೋಲ್ವೋ ಕಾರಿನ ಶ್ರೇಣಿಯಲ್ಲಿ ಅತ್ಯಂತ ಸುಸ್ಥಿರ ಕಾರು ಆಗಿರುವ ಇಎಕ್ಸ್30 ಇಲ್ಲಿಯವರೆಗಿನ ಪೂರ್ಣ ವಿದ್ಯುಚ್ಛಾಲಿತ ವೋಲ್ವೋದಲ್ಲಿ ಅತ್ಯಂತ ಕಡಿಮೆ ಇಂಗಾಲದ ಹೆಜ್ಜೆ ಗುರುತು ಹೊಂದಿದೆ. ಇದರ ಆಕರ್ಷಕ ಒಳಾಂಗಣಗಳನ್ನು ಡೆನಿಮ್, ಪೆಟ್ ಬಾಟಲಿಗಳು, ಅಲ್ಯುಮಿನಿಯಂ ಮತ್ತು ಪಿವಿಸಿ ಪೈಪ್ ಗಳಂತಹ ಮರುಬಳಸಲಾದ ವಸ್ತುಗಳಿಂದ ತಯಾರಿಸಲಾಗಿದೆ. ಸ್ಕಾಂಡಿನೇವಿಯನ್ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಇಎಕ್ಸ್30 ಯೂರೋ ಎನ್.ಸಿ.ಎ.ಪಿ. ಸುರಕ್ಷತೆಯಲ್ಲಿ ಫೈವ್-ಸ್ಟಾರ್ ರೇಟಿಂಗ್ ಪಡೆದಿದೆ. ಇಎಕ್ಸ್30 ಅಪಘಾತ ತಡೆಯಲು ಆಟೊ-ಬ್ರೇಕ್, “ಡೋರಿಂಗ್” ಅಪಘಾತ ತಡೆಯಲು ಡೋರ್-ಓಪನಿಂಗ್ ಅಲರ್ಟ್ ಮತ್ತು ಸುಧಾರಿತ ಸೇಫ್ ಸ್ಪೇಸ್ ತಂತ್ರಜ್ಞಾನ ಹೊಂದಿದ್ದು ಅದು 5 ಕ್ಯಾಮರಾಗಳು, 5 ರಾಡಾರ್ ಗಳು ಮತ್ತು 12 ಅಲ್ಟ್ರಾಸಾನಿಕ್ ಸೆನ್ಸರ್ ಗಳನ್ನು ಹೊಂದಿದೆ.
ಐದು ಆಂಬಿಯೆಂಟ್ ಲೈಟಿಂಗ್ ಥೀಮ್ ಗಳು ಮತ್ತು ಶಬ್ದಗಳು ಸ್ಕಾಂಡಿನೇವಿಯನ್ ಋತುಗಳು ಮತ್ತು ನೋಟಗಳಿಂದ ಸ್ಫೂರ್ತಿ ಪಡೆದಿದ್ದು ಸಂಪೂರ್ಣ ತಲ್ಲೀನಗೊಳಿಸುವ ಅನುಭವ ನೀಡುತ್ತದೆ. ಹೊಸ ಹರ್ಮನ್ ಕಾರ್ಡನ್ ಸೌಂಡ್ ಬಾರ್ ಪರಿಕಲ್ಪನೆ, 1040ಡಬ್ಲ್ಯೂ ಆಂಪ್ಲಿಫೈಯರ್ ಮತ್ತು ಒಂಬತ್ತು ಉನ್ನತ ಕಾರ್ಯಕ್ಷಮತೆಯ ಸ್ಪೀಕರ್ ಗಳನ್ನು ಹೊಂದಿರುವ ಈ ಅತ್ಯಾಧುನಿಕ ಸಿಸ್ಟಂ ಪ್ರತಿಯೊಬ್ಬರಿಗೂ ತಲ್ಲೀನಗೊಳಿಸುವ ಸರೌಂಡ್ ಸೌಂಡ್ ಅನುಭವ ನೀಡುತ್ತದೆ. 12.3-ಇಂಚು ಹೈ-ರೆಸ್ ಸೆಂಟರ್ ಡಿಸ್ಪ್ಲೇ ಗೂಗಲ್ ಬಿಲ್ಟ್ ಇನ್ ನೊಂದಿಗೆ ಅಂತರ್ಬೋಧೆಯ ಮತ್ತು ಅಳವಡಿಸಿಕೊಳ್ಳಬಲ್ಲುದಾಗಿದೆ, 5ಜಿ ಕನೆಕ್ಟಿವಿಟಿ, ಒಟಿಎ ಅಪ್ಡೇಟ್ ಗಳು ಮತ್ತಿತರೆ ಹೊಂದಿದೆ. ಈ ಎಲ್ಲರನ್ನೂ ಸೆಳೆಯುವ ವಿನ್ಯಾಸ ಹಲವಾರು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದೆ. ಇವುಗಳಲ್ಲಿ ಪ್ರತಿಷ್ಠಿತ ರೆಡ್ ಡಾಟ್ ಪ್ರಶಸ್ತಿಯನ್ನು 2024ರ ಬೆಸ್ಟ್ ಆಫ್ ದಿ ಬೆಸ್ಟ್ ಪ್ರಾಡಕ್ಟ್ ಡಿಸೈನ್ ಗೆ ಪಡೆದಿದೆ ಮತ್ತು 2024ರಲ್ಲಿ ವರ್ಲ್ಡ್ ಅರ್ಬನ್ ಕಾರ್ ಆಫ್ ದಿ ಇಯರ್ ಪಡೆದಿದೆ.
ಇಎಕ್ಸ್30ಯು 8 ವರ್ಷ ಬ್ಯಾಟರಿ ವಾರೆಂಟಿಯೊಂದಿಗೆ ಬರುತ್ತದೆ ಮತ್ತು ಸ್ಟಾಂಡರ್ಡ್ ಫಿಟ್ಮೆಂಟ್ ಆಗಿ ವಾಲ್ ಬಾಕ್ಸ್ ಚಾರ್ಜರ್ ಒಳಗೊಂಡಿದೆ. ಈ ಕಾರು ಅದರೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಅದನ್ನು ಮರು ಕಲ್ಪಿಸುತ್ತದೆ. ಎನ್.ಎಫ್.ಸಿ. (ನಿಯರ್ ಫ್ರೀಕ್ವೆನ್ಸಿ ಕಾರ್ಡ್) ಮೂಲಕ ಸೆನ್ಸರ್ ಟ್ಯಾಪ್ ಮಾಡಿ ಕಾರು ಅನ್ಲಾಕ್ ಮಾಡಬಹುದು. ಹೆಚ್ಚುವರಿಯಾಗಿ ವೋಲ್ವೋ ಕಾರ್ ಆಪ್ ನಲ್ಲಿರುವ ಡಿಜಿಟಲ್ ಕೀ ಪ್ಲಸ್ ಕೀಯಾಗಿ ಕೆಲಸ ಮಾಡುತ್ತದೆ. ಇದು ಬರೀ ಅನುಕೂಲವಲ್ಲ, ಸ್ಮಾರ್ಟರ್, ಸುರಕ್ಷಿತ ಮತ್ತು ಆಶ್ಚರ್ಯಕರವಾಗಿ ತಡೆರಹಿತವಾಗಿದೆ.
ಇಎಕ್ಸ್30ಯು 8 ವರ್ಷ ಬ್ಯಾಟರಿ ವಾರೆಂಟಿಯೊಂದಿಗೆ ಬರುತ್ತದೆ ಮತ್ತು ಸ್ಟಾಂಡರ್ಡ್ ಫಿಟ್ಮೆಂಟ್ ಆಗಿ ವಾಲ್ ಬಾಕ್ಸ್ ಚಾರ್ಜರ್ ಒಳಗೊಂಡಿದೆ. ಈ ಕಾರು ಅದರೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಅದನ್ನು ಮರು ಕಲ್ಪಿಸುತ್ತದೆ. ಎನ್.ಎಫ್.ಸಿ. (ನಿಯರ್ ಫ್ರೀಕ್ವೆನ್ಸಿ ಕಾರ್ಡ್) ಮೂಲಕ ಸೆನ್ಸರ್ ಟ್ಯಾಪ್ ಮಾಡಿ ಕಾರು ಅನ್ಲಾಕ್ ಮಾಡಬಹುದು. ಹೆಚ್ಚುವರಿಯಾಗಿ ವೋಲ್ವೋ ಕಾರ್ ಆಪ್ ನಲ್ಲಿರುವ ಡಿಜಿಟಲ್ ಕೀ ಪ್ಲಸ್ ಕೀಯಾಗಿ ಕೆಲಸ ಮಾಡುತ್ತದೆ.