ನವೆಂಬರ್ ೮ರಂದು ಟೀಚ್ ಫಾರ್ ಇಂಡಿಯಾದಿಂದ ಉದ್ಯಮಶೀಲತೆ ಶೃಂಗಸಭೆ
ಆಪ್ತ ನ್ಯೂಸ್ ಬೆಂಗಳೂರು:
ಶೈಕ್ಷಣಿಕ ಸಮಾನತೆಗೆ ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆ ಟೀಚ್ ಫಾರ್ ಇಂಡಿಯಾ ಬೆಂಗಳೂರಿನಲ್ಲಿ ನವೆಂಬರ್ ೮ರಂದು `ಉದ್ಯಮಶೀಲತೆ ಶೃಂಗಸಭೆ’ ಆಯೋಜಿಸಿದೆ. ಸಭಾ ಬಿ.ಎಲ್.ಆರ್, ಶಿವಾಜಿ ನಗರ, ಬೆಂಗಳೂರು ಇಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ವಿಶಿಷ್ಟ ಕಾರ್ಯಕ್ರಮವು ೧೦೦ಕ್ಕೂ ಹೆಚ್ಚು ಸಾಮಾಜಿಕ ಪರಿಣಾಮದ ಉದ್ಯಮಿಗಳು, ವೈವಿಧ್ಯಮಯ ವಲಯದ ನಾಯಕರು, ಫಂಡರ್ ಗಳು ಮತ್ತು ಹೂಡಿಕೆದಾರರನ್ನು ಒಂದೇ ಸೂರಿನಡಿ ತರುತ್ತದೆ. ಉದ್ಯಮಶೀಲತೆ ಶೃಂಗಸಭೆಯು ಭಾರತದ ಅತ್ಯಂತ ಪ್ರಮುಖ ಸಾಮಾಜಿಕ ಸವಾಲುಗಳನ್ನು ಪರಿಹರಿಸಲು ಸಹಯೋಗ, ಆವಿಷ್ಕಾರ ಮತ್ತು ಪರಿಣಾಮ ಪ್ರೇರಿತ ಕ್ರಮಕ್ಕೆ ಅಸಾಧಾರಣ ವೇದಿಕೆ ನೀಡುವ ಭರವಸೆ ಹೊಂದಿದೆ.
ಈ ಒಂದು ದಿನದ ಕಾರ್ಯಕ್ರಮವನ್ನು ಅದರ ಎರಡು ಮುಂಚೂಣಿಯ ಉದ್ಯಮಶೀಲತೆಯ ಕಾರ್ಯಕ್ರಮಗಳಾದ ಪ್ರಾರಂಭಿಕ ಹಂತದ ಶಿಕ್ಷಣ ಉದ್ಯಮಿಗಳನ್ನು ಬೆಂಬಲಿಸಲು ಇನ್ನೊವೇಟೆಡ್ ಹಾಗೂ ಸ್ಥಳೀಯ ಬದಲಾವಣೆಯ ನಾಯಕರಿಗೆ ಸಮುದಾಯದಲ್ಲಿ ಬೇರೂರಿದ ಫೆಲೋಶಿಪ್ ಗಳನ್ನು ಪ್ರಾರಂಭಿಸಲು ಸನ್ನದ್ಧವಾಗಿಸುವ ಇನ್ ಕ್ಯುಬೇಷನ್ ಕಾರ್ಯಕ್ರಮ ಟಿ.ಎಫ್.ಐ.ಎಕ್ಸ್. ಸಹಯೋಗದಲ್ಲಿ ಆಯೋಜಿಸಲಾಗಿದೆ. ಈ ಉದ್ಯಮಿಗಳ ಶೃಂಗಸಭೆಯನ್ನು ಎಚ್.ಎನ್.ಐ.ಗಳಿಗೆ ಪ್ರಸ್ತುತಪಡಿಸುವ ಪಿಚಿಂಗ್ ಸೆಷನ್ ಗಳು, ಕೌಶಲ್ಯವೃದ್ಧಿ ಕಾರ‍್ಯಾಗಾರಗಳಿಗೆ ನೆರವಾಗುವ ಸೇವಾಕಾಂಕ್ಷಿಗಳು, ನೆಟ್ರ‍್ಕಿಂಗ್ ಕಾರ್ಯಕ್ರಮಗಳು ಮತ್ತಿತರೆ ಇಡೀ ದಿನ ಕಾರ್ಯಕ್ರಮ ಯೋಜಿಸಲಾಗಿದೆ. ಈ ಕಾರ್ಯಕ್ರಮ ಭಾರತದ ಉದ್ಯಮಶೀಲತೆಯ ಸಮುದಾಯಕ್ಕೆ ಕ್ರೋಢೀಕೃತ ಶಕ್ತಿ ನೀಡಲು, ಅಸಾಧಾರಣ ಜೀವಗಳನ್ನು ತಲುಪುವ ಬದಲಾವಣೆಯನ್ನು ಮುನ್ನಡೆಸಲು ಅತ್ಯುತ್ತಮ ಅವಕಾಶವಾಗಿದೆ.
ಟೀಚ್ ಫಾರ್ ಇಂಡಿಯಾ ಸಂಸ್ಥಾಪಕ ಮತ್ತು ಸಿಇಒ, ಮೆಂಟರ್ ಮತ್ತು ಫಿಲಾಂಥ್ರಪಿಕ್ ಎನೇಬ್ಲರ್ ಶಹೀನ್ ಮಿಸ್ತ್ರಿ, ಫೀಡ್ ಬ್ಯಾಕ್ ಕನ್ಸಲ್ಟಿಂಗ್ ಅಧ್ಯಕ್ಷ ರವಿಚಂದರ್ ವಿ, ನೆಕ್ಸಸ್ ವೆಂಚರ್ ಪಾರ್ಟ್ನರ್ಸ್ ಪಾಲುದಾರ ಆನಂದ್ ದತ್ತ ನವೆಂಬರ್ ೮ರಂದು ಬೆಂಗಳೂರಿನಲ್ಲಿ ನಡೆಲಿರುವ ಕಾರ‍್ಯಕ್ರಮದಲ್ಲಿ ಭಾಗವಹಿಸುವ ಅಸಾಧಾರಣ ನಾಯಕರು ಮತ್ತು ಸಂಸ್ಥೆಗಳಾಗಿವೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



