ಹಬ್ಬದ ಉತ್ಸಾಹ ಹೆಚ್ಚಿಸುತ್ತಿರುವ ಫಿಲಿಪ್ಸ್ ಹೋಮ್ ಅಪ್ಲಯನ್ಸಸ್ `ಸೋನೆ ಪೆ ಸುಹಾಗಾ’ ಅಭಿಯಾನ

Sep 26, 2025 - 11:18
Sep 27, 2025 - 11:16
 0  5
ಹಬ್ಬದ ಉತ್ಸಾಹ ಹೆಚ್ಚಿಸುತ್ತಿರುವ ಫಿಲಿಪ್ಸ್ ಹೋಮ್ ಅಪ್ಲಯನ್ಸಸ್ `ಸೋನೆ ಪೆ ಸುಹಾಗಾ’ ಅಭಿಯಾನ

ಆಪ್ತ ನ್ಯೂಸ್‌ ಬೆಂಗಳೂರು:

ಭಾರತದಲ್ಲಿ ಹಬ್ಬದ ಋತುವು ಸಂತೋಷಕ್ಕೆ ಪರ‍್ಯಾಯವಾಗಿದೆ. ಹೊಸ ಪ್ರಾರಂಭಗಳು ಮತ್ತು ಪವಿತ್ರ ಸಂಪ್ರದಾಯಗಳು ಮತ್ತು ಕೆಲ ಸಂಕೇತಗಳು ಚಿನ್ನಕ್ಕಿಂತ ಹೆಚ್ಚು ಸೆರೆ ಹಿಡಿಯುತ್ತವೆ. ಈ ಹಬ್ಬದ ಸ್ಫರ‍್ತಿಯನ್ನು ತರುವ ನಿಟ್ಟಿನಲ್ಲಿ ಫಿಲಿಪ್ಸ್ ಹೋಮ್ ಅಪ್ಲಯನ್ಸಸ್ ತನ್ನ ಅಖಿಲ ಭಾರತದ ಅಭಿಯಾನ ಸೋನೆ ಪೆ ಸುಹಾಗಾ ಪ್ರಕಟಿಸಿದೆ. ಗ್ರಾಹಕರಿಗೆ ಈ ಋತುವನ್ನು ಚಿನ್ನದ ಬಹುಮಾನದೊಂದಿಗೆ ಹಾಗೂ ಮನೆಗೆ ವಿಶ್ವಾಸಾರ್ಹ ಆವಿಷ್ಕಾರಗಳೊಂದಿಗೆ ಸಂಭ್ರಮಿಸುವ ಅವಕಾಶ ತಂದಿದೆ. 
ಈ ಅಭಿಯಾನದ ಕೇಂದ್ರದಲ್ಲಿ ಫಿಲಿಪ್ಸ್ ಈ ಹಬ್ಬದ ಋತುವಿನಲ್ಲಿ ಪ್ರತಿದಿನದ ಜೀವನ ಸುಲಭಗೊಳಿಸುವ ಎಲ್ಲ ಕಾಲಕ್ಕೂ ಉಳಿಯುವ ಸ್ಮರಣೆಗಳನ್ನು ಸೃಷ್ಟಿಸುವುದರಲ್ಲಿ ನಂಬಿಕೆ ಇರಿಸಿದೆ. ತನ್ನ ಪರ‍್ಟ್ ಫೋಲಿಯೋದಲ್ಲಿ ಫಿಲಿಪ್ಸ್ ಏರ್ ಫ್ರೈಯರ್, ಮಿಕ್ಸರ್ ಗ್ರೈಂಡರ್ ಗಳು, ಕಾಫಿ ಯಂತ್ರಗಳು, ಗರ‍್ಮೆಂಟ್ ಸ್ಟೀಮರ್ ಗಳು, ಏರ್ ಪ್ಯೂರಿಫೈಯರ್ ಗಳು ಮತ್ತಿತರೆ ಒಳಗೊಂಡಿವೆ. ಈ ಬ್ರಾಂಡ್ ಆವಿಷ್ಕಾರ, ಅನುಕೂಲ ಮತ್ತು ಆರೈಕೆಯ ಮೂಲಕ ಗೃಹಗಳನ್ನು ಮನೆಗಳನ್ನಾಗಿ ತರುವುದನ್ನು ಮುಂದುವರಿಸುತ್ತಿದೆ. 
ಒಂದು ತಿಂಗಳು ಪೂರ್ತಿ ನಡೆಯುವ ಈ ಅಭಿಯಾನವು ಗ್ರಾಹಕರಿಗೆ ಪ್ರತಿ ಗಂಟೆ, ಪ್ರತಿ ದಿನ ರೂ.೯,೯೯೯ ಮೌಲ್ಯದ ಚಿನ್ನ ಗೆಲ್ಲುವ ಅವಕಾಶ ಕಲ್ಪಿಸುತ್ತಿದೆ. ಫಿಲಿಪ್ಸ್ ಹೋಮ್ ಅಪ್ಲಯನ್ಸಸ್ ಸಾಮಾಜಿಕ ಮಾಧ್ಯಮ, ರೇಡಿಯೊಗಳಲ್ಲಿ ಗಂಟೆಗೊಮ್ಮೆ ಗೆಲ್ಲುವ ವಿಜೇತರನ್ನು ಹಾಗೂ ದೈನಂದಿನ ವಿಜೇತರನ್ನು ರಾಷ್ಟ್ರೀಯ ದಿನಪತ್ರಿಕೆಗಳ ಮೂಲಕ ಪ್ರಕಟಿಸುತ್ತದೆ. 
ಈ ಅಭಿಯಾನದ ಕುರಿತು ವರ‍್ಸುನಿ ಇಂಡಿಯಾದ ಚೀಫ್ ಮಾರ್ಕೆಟಿಂಗ್ ಆಫೀಸರ್ ಪೂಜಾ ಬೈದ್, “ಭಾರತದಲ್ಲಿ ಹಬ್ಬಗಳು ಆನಂದ, ಒಗ್ಗೂಡುವಿಕೆ ಮತ್ತು‌ ವಿಶೇಷ ಕ್ಷಣಗಳಾಗಿವೆ. ಚಿನ್ನವು ಸದಾ ಈ ಸಂಭ್ರಮಾಚರಣೆಗಳು ಅವಿಭಾಜ್ಯ ಅಂಗವಾಗಿದೆ; ಇದು ಸಂಪತ್ತು ಮತ್ತು ಉತ್ತಮ ಅದೃಷ್ಟದ ಸಂಕೇತವಾಗಿದೆ. ನಮ್ಮ `ಸೋನೆ ಪೆ ಸುಹಾಗಾ’ ಅಭಿಯಾನದಿಂದ ನಾವು ಫಿಲಿಪ್ಸ್ ನ ವಿಶ್ವಾಸಾರ್ಹ ಆವಿಷ್ಕಾರಗಳ ಭರವಸೆಯೊಂದಿಗೆ ಚಿನ್ನ ಗೆಲ್ಲುವ ಉತ್ಸಾಹವನ್ನು ಸಂಯೋಜಿಸುತ್ತಿದ್ದೇವೆ. ಈ ಹಬ್ಬದ ಋತುವಿನ ಪ್ರತಿ ಸಂಭ್ರಮಾಚರಣೆಗೂ ಮತ್ತಷ್ಟು ಹೊಳಪನ್ನು ಸೇರಿಸುವ ನಮ್ಮ ವಿಧಾನವಾಗಿದೆ” ಎಂದರು. 
ನಮ್ಮ ಸೋನೆ ಪೆ ಸುಹಾಗಾ ಅಭಿಯಾನವು ಫಿಲಿಪ್ಸ್ ನ ದೀರ್ಘಾವಧಿ ಭರವಸೆಯಾದ ಭಾರತದ ಮನೆಗಳಿಗೆ ಪ್ರಸ್ತುತ, ಉದ್ದೇಶಯುಕ್ತ ಆವಿಷ್ಕಾರವನ್ನು ತರುವುದಲ್ಲದೆ ಈ ಹಬ್ಬದ ಋತುವನ್ನು ಭಾರತದ ಮನೆಗಳಿಗೆ ಮತ್ತಷ್ಟು ಪುರಸ್ಕಾರಯುತವಾಗಿಸುತ್ತದೆ. ಸೆಪ್ಟೆಂಬರ್ ೨೨ರಿಂದ ಅಕ್ಟೋಬರ್ ೨೨, ೨೦೨೫ರವರೆಗೆ ದೇಶಾದ್ಯಂತ ನಡೆಯುವ ಇದು ಗ್ರಾಹಕರನ್ನು ಯಾವುದೇ ಆಫ್ ಲೈನ್ ಮಳಿಗೆ ಅಥವಾ ಫಿಲಿಪ್ಸ್ ಹೋಮ್ ಅಪ್ಲಯನ್ಸಸ್ ವೆಬ್ ಸೈಟ್ ಮೂಲಕ ಮೇಲ್ಪಟ್ಟು ಖರೀದಿಸಲು ಆಹ್ವಾನಿಸುತ್ತಿದ್ದು ಕ್ಯೂಆರ್ ಕೋಡ್ ಮೂಲಕ ಈ ಅಭಿಯಾನಕ್ಕೆ ನೋಂದಣಿಯಾಗಿರಿ ಮತ್ತು ಪ್ರತಿ ಗಂಟೆಗೂ ₹೯,೯೯೯ ಮೊತ್ತದ ಚಿನ್ನದ ವೋಚರ್ ಗಳನ್ನು ಗೆಲ್ಲುವ ಅವಕಾಶ ಪಡೆಯುವ ಅವಕಾಶವಿದೆ. ಇದರೊಂದಿಗೆ ಪ್ರತಿ ಖರೀದಿಯೂ ಪುರಸ್ಕಾರಯುತವಾಗುವಂತೆ ಮಾಡಲು ಆಯ್ದ ಉತ್ಪನ್ನಗಳ ಮೇಲೆ ನಿಶ್ಚಿತ ಉಡುಗೊರೆಗಳು ಇರುತ್ತವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 3