ಮರೆಲ್ಲಿಯಿಂದ ಎಂಜಿನಿಯರಿಂಗ್ ಸಾಮರ್ಥ್ಯಗಳ ವೃದ್ಧಿಗೆ ಹೊಸ ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಪ್ರಾರಂಭ
ಆಪ್ತ ನ್ಯೂಸ್ ಬೆಂಗಳೂರು:
ಮರೆಲ್ಲಿ ದಕ್ಷಿಣ ಭಾರತದ ಬೆಂಗಳೂರಿನಲ್ಲಿ ತನ್ನ ಹೊಸ ತಾಂತ್ರಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಪ್ರಾರಂಭಿಸಿದ್ದು ಇದು ಕಂಪನಿಯ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಮತ್ತಷ್ಟು ವಿಸ್ತರಿಸಲಿದ್ದು ವಾಹನೋದ್ಯಮ ತಂತ್ರಜ್ಞಾನದಲ್ಲಿ ಅದರ ಆವಿಷ್ಕಾರಕ ಕಾರ್ಯತಂತ್ರಕ್ಕೆ ಬೆಂಬಲಿಸಲಿದೆ. ಈ ಹೊಸ ಸೌಲಭ್ಯವು 350 ಉದ್ಯೋಗಿಗಳನ್ನು ಹೊಂದಿದೆ ಮತ್ತು ನವೆಂಬರ್ 5ರಂದು ಮರೆಲ್ಲಿ ಇಂಡಿಯಾ ಮತ್ತು ಜಾಗತಿಕ ನಾಯಕತ್ವ ತಂಡಗಳ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಪ್ರಾರಂಭವಾಯಿತು.
ಈ ಹೊಸ ತಾಣವು ಬೆಂಗಳೂರಿನ ಎಂಬಸಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿದ್ದು ಈಗಾಗಲೇ ಅಲ್ಲಿ ಮರೆಲ್ಲಿಯ ಇತರೆ ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿದ್ದು ಇದು 2022ರಲ್ಲಿ ಪ್ರಾರಂಭವಾಗಿದ್ದು ಕಂಪನಿಗೆ ಎಂಜಿನಿಯರಿಂಗ್ ಮತ್ತು ಸಾಫ್ಟ್ ವೇರ್ ಪ್ರತಿಭಾ ತಂಡ ನೀಡಿದೆ. ಇದು ದೆಹಲಿಯ ಗುರುಗ್ರಾಮದ ಕಂಪನಿಯ ಎಂಜಿನಿಯರಿಂಗ್ ಕೇಂದ್ರಕ್ಕೆ ಸೇರ್ಪಡೆಯಾಗಿದ್ದು ಭಾರತದಲ್ಲಿ ಮರೆಲ್ಲಿಯ ಆರ್ ಅಂಡ್ ಡಿ ಸಾಮರ್ಥ್ಯವು 1,200 ಜನರನ್ನು ತಲುಪಿದೆ.
ಹೊಸ ಕೇಂದ್ರ ಚಟುವಟಿಕೆಗಳು ಮರೆಲ್ಲಿಯ ಎಲೆಕ್ಟ್ರಾನಿಕ್ಸ್, ಆಟೊಮೇಟಿವ್ ಲೈಟಿಂಗ್ ಮತ್ತು ಇಂಟರ್ನಲ್ ಕಂಬಷನ್ ಮತ್ತು ಎಲೆಕ್ಟ್ರಿಕ್ ಪ್ರೊಪಲ್ಷನ್ ಕ್ಷೇತ್ರಗಳಲ್ಲಿ ಬೆಂಬಲಿಸಲಿದೆ. ಒಟ್ಟಗೆ ಈಗಿನ ಎರಡು ಆರ್ ಅಂಡ್ ಡಿ ಸೌಲಭ್ಯಗಳು ಭಾರತದ ಗ್ರಾಹಕರಿಗೆ ಇನ್ಫೊಟೈನ್ಮೆಂಟ್, ಕ್ಲಸ್ಟರ್ಸ್, ಡಿಸ್ಪ್ಲೇಸ್, ಬಾಡಿ ಕಂಟ್ರೋಲ್ ಮಾಡ್ಯೂಲ್ಸ್, ಎಂಜಿನ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್,ಹೆಡ್ ಲ್ಯಾಂಪ್ಸ್ ಮತ್ತು ರಿಯರ್ ಲ್ಯಾಂಪ್ಸ್ ಅನ್ನು ಸಮಗ್ರ ಅಭಿವೃದ್ಧಿ ಪರಿಹಾರಗಳಿಗೆ ಆದ್ಯತೆ ನೀಡುತ್ತವೆ. ಅಲ್ಲದೆ ಇದು ಇತರೆ ಮರೆಲ್ಲಿಯ ಜಾಗತಿಕ ಎಂಜಿನಿಯರಿಂಗ್ ತಂಡಗಳೊಂದಿಗೆ ಹಾಗೂ ಗ್ರಾಹಕರೊಂದಿಗೆ ಕೆಲಸ ಮಾಡುವ ಮೂಲಕ ಸಾಫ್ಟ್ ವೆರ್ ಡಿಫೈನ್ಡ್ ವೆಹಿಕಲ್ಸ್ (ಎಸ್.ಡಿ.ವಿ.), ಝೋನಲ್ ಆರ್ಕಿಟೆಕ್ಚರ್, ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್ಮಿಷನ್ಸ್(ಎಎಂಟಿ), ಎಂಜಿನ್ ಅಂಡ್ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್ಸ್(ಬಿಎಂಎಸ್) ಮತ್ತು ಸುಧಾರಿತ ಲೈಟಿಂಗ್ ಫೀಚರ್ಸ್ ಆವಿಷ್ಕಾರಗಳನ್ನು ಸಹ- ಅಭಿವೃದ್ಧಿ ಮಾಡುತ್ತದೆ.
ಈ ಪ್ರಾರಂಭ ಕುರಿತು ಮರೆಲ್ಲಿ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಾಜು ಮೂಕನ್, “ಈ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಪ್ರಾರಂಭವು ಆವಿಷ್ಕಾರ ಉತ್ತೇಜನ, ನಮ್ಮ ಗ್ರಾಹಕರಿಗೆ ಶ್ರೇಷ್ಠತೆ ಪೂರೈಕೆ ಮತ್ತು ನಮ್ಮ ಉದ್ಯೋಗಿಗಳಿಗೆ ಪ್ರಗತಿ ಉತ್ತೇಜಿಸಲು ನಮ್ಮ ಸತತ ಬದ್ಧತೆಯನ್ನು ತೋರುತ್ತದೆ. ಈ ಮಹತ್ತರ ವಿಸ್ತರಣೆಯು ಭಾರತದಲ್ಲಿ ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ನಮ್ಮ ಕಾರ್ಯತಂತ್ರೀಯ ಧ್ಯೇಯವನ್ನು ಬಿಂಬಿಸುತ್ತಿದ್ದು ನಮ್ಮ ಸಾಮರ್ಥ್ಯ ಹೆಚ್ಚಿಸಲಿದೆ ಮತ್ತು ನಮ್ಮ ಗ್ರಾಹಕರಿಗೆ ಉಪಯುಕ್ತವಾಗುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವೇಗ ತುಂಬುತ್ತದೆ. ಈ ಸ್ಥಳವನ್ನು ಸೃಷ್ಟಿಸಲು ಕೊಡುಗೆ ನೀಡಿದ ಇಡೀ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



