ಮ್ಯೂಜಿಗಲ್ ನಿಂದ ಫಾಸ್ಟ್ ಟ್ರ್ಯಾಕ್- ಹೋಮ್ ಮ್ಯೂಸಿಕ್ ಪ್ರೊಡಕ್ಷನ್ ಕೋರ್ಸ್ ಪ್ರಾರಂಭ

ಆಪ್ತ ನ್ಯೂಸ್ ಬೆಂಗಳೂರು:
ಭಾರತದ 15 ರಾಜ್ಯಗಳಲ್ಲಿ 100+ ಅಕಾಡೆಮಿಗಳನ್ನು ಹೊಂದಿದ ಸಂಗೀತ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ಮ್ಯೂಜಿಗಲ್ ಸಂಗೀತದ ಆಲೋಚನೆಗಳಿಗೆ ವಿಶ್ವಾಸ ಮತ್ತು ಸರಳತೆಯಿಂದ ಜೀವ ತುಂಬುವ ಮ್ಯೂಸಿಕ್ ಪ್ರೊಡಕ್ಷನ್ ಕೋರ್ಸ್ ಪ್ರಕಟಿಸಿದ್ದು ಇದನ್ನು ಅವರ ಮನೆಯ ಸ್ಟುಡಿಯೋ ಸೆಟಪ್ ಗಳಿಂದಲೇ ತಮ್ಮ ಸಂಕೀರ್ಣ ಸ್ಟುಡಿಯೋ ಸಾಧನಗಳಿಲ್ಲದೆ ನಡೆಸಬಹುದಾಗಿದೆ.
ಈ ಕಾರ್ಯಕ್ರಮವನ್ನು ಬೆಂಗಳೂರಿನ ತನ್ನ ಅತ್ಯಂತ ದೊಡ್ಡ ಹಾಗೂ ಮುಂಚೂಣಿಯ ಅಕಾಡೆಮಿ ಮ್ಯೂಜಿಗಲ್ ಎಚ್.ಆರ್.ಬಿ.ಆರ್. ಲೇಔಟ್ ನಲ್ಲಿ ಪ್ರಾರಂಭಿಸಲಾಗಿದ್ದು ಇದು ಪ್ರಾರಂಭ ಹಂತದಲ್ಲಿರುವವರಿಗೆ, ಹವ್ಯಾಸಿಗಳಿಗೆ ಮತ್ತು ಕ್ರಿಯೇಟರ್ ಗಳಿಗೆ ಅವರ ಸಂಗತ ಮತ್ತು ಸೃಜನಶೀಲ ಆಲೋಚನೆಗಳನ್ನು ವೃತ್ತಿಪರ ಗುಣಮಟ್ಟದ ಆಡಿಯೊ ರೆಕಾರ್ಡಿಂಗ್ ಗಳಾಗಿ ಅವರ ಮನೆಯ ಹೋಮ್ ಸ್ಟುಡಿಯೋ ಸೆಟಪ್ ನಲ್ಲಿ ನಡೆಸುವ ಅವಕಾಶ ಕಲ್ಪಿಸುತ್ತದೆ. ಕೋರ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ಹಾಡುಗಳು, ಜಿಂಗಲ್ ಗಳು, ವಾಯ್ಸ್-ಓವರ್ ಗಳು ಮತ್ತು ಡಬ್ಬಿಂಗ್ ಗಳು, ಸೋಲೋಗಳು ಮತ್ತು ಪೋಡ್ ಕಾಸ್ಟ್ ಗಳನ್ನು ರೆಕಾರ್ಡ್ ಮಾಡಬಹುದು.
ಭಾರತದ ಮುಂಚೂಣಿಯ ಜಾಝ್ ಹಾಗೂ ಫ್ಯೂಷನ್ ಗಿಟಾರಿಸ್ಟ್ ಗೆರಾರ್ಡ್ ಮಕಾಡೊ ಉದ್ಘಾಟಿಸಿದರು ಮತ್ತು ಮ್ಯೂಜಿಗಲ್ ಸಂಸ್ಥಾಪಕ ಹಾಗೂ ಉದ್ಯಮಿ ಡಾ.ಲಕ್ಷ್ಮೀನಾರಾಯಣ ಯೆಲೂರಿ ಹಾಗೂ ಖ್ಯಾತ ಸಂಗೀತಗಾರ ಮತ್ತು ದಿ ಸ್ಯಾವೇಜಸ್ ಸಂಸ್ಥಾಪಕ ಸದಸ್ಯ ಬಶೀರ್ ಶೇಖ್ ಮತ್ತು ಸಂಗೀತ ಉದ್ಯಮದ ಪ್ರಮುಖರು ಉಪಸ್ಥಿತರಿದ್ದರು.
ಮ್ಯೂಜಿಗಲ್ ಸಂಸ್ಥಾಪಕ ಡಾ.ಲಕ್ಷ್ಮೀನಾರಾಯಣ ಯೆಲೂರಿ ಈ ಕಾರ್ಯಕ್ರಮದ ಹಿಂದಿನ ಧ್ಯೇಯೋದ್ದೇಶ ಕುರಿತು, “ಪ್ರತಿಯೊಬ್ಬರೂ ಸಂಗೀತವನ್ನು ಪ್ರೀತಿಸುತ್ತಾರೆ ಮತ್ತು ನಮ್ಮೆಲ್ಲರಲ್ಲೂ ಸಂಗೀತ ಜೀವಿಸುತ್ತದೆ, ಆದರೂ ಸಂಗೀತ ಶಿಕ್ಷಣ ದೂರ ಉಳಿದಿದೆ. ಸಂಗೀತಗಾರ ಮತ್ತು ಉದ್ಯಮಿಯಾಗಿ ನಾನು ಅದನ್ನು ಬದಲಾಯಿಸಬೇಕು ಎಂದು ಭಾವಿಸಿ, ಅದಕ್ಕಾಗಿ ಆಕಾಂಕ್ಷಿಗಳಿಗೆ ಅತ್ಯುತ್ತಮ ಶಿಕ್ಷಕರು, ರಚನಾತ್ಮಕ ಪಠ್ಯಕ್ರಮ ಮತ್ತು ಆನಂದದಾಯಕ ಕಲಿಕೆಯ ಪರಿಸರವನ್ನು ಹೊಂದಿದ ಮ್ಯೂಜಿಗಲ್ ಪ್ರಾರಂಭಿಸಿದೆ. ಪ್ರತಿ ಶಿಕ್ಷಣಾರ್ಥಿಗೂ ಸಂಗೀತದಲ್ಲಿ ಬೆಳೆಯುವ ಅವಕಾಶ ಲಭ್ಯವಾಗಬೇಕು ಎನ್ನುವುದು ನನ್ನ ಉದ್ದೇಶ ಸರಳವಾಗಿದೆ ಎಂದರು.
“ಹೋಮ್ ಸ್ಟುಡಿಯೋ ಸೆಟಪ್ ಬಳಸಿ ಸಂಗೀತ ನಿರ್ಮಾಣ ಪ್ರಾರಂಭಿಸುವ ಮೂಲಕ ನಾವು ಕ್ರಿಯೇಟರ್ ಗಳಿಗೆ ತಮ್ಮ ಮನೆಗಲ್ಲಿ ವೃತ್ತಿಪರ ಗುಣಮಟ್ಟದ ಸೌಂಡ್ ಸೃಷ್ಟಿಸಲು ಅಗತ್ಯವಾದ ಸಾಧನಗಳನ್ನು ನೀಡುತ್ತಿದ್ದೇವೆ. ಇದು ಪ್ರತಿ ಶಿಕ್ಷಣಾರ್ಥಿಗೂ ಅವರ ಸಂಗೀತ ಮತ್ತು ಧ್ವನಿಯನ್ನು ವಿಶ್ವಕ್ಕೆ ವಿಶ್ವಾಸದಿಂದ ಹಂಚಿಕೊಳ್ಳಲು ಸನ್ನದ್ಧವಾಗಿಸುವುದಾಗಿದೆ” ಎಂದರು.
ಈ ಪ್ರಾರಂಭ ಕುರಿತು ಮ್ಯೂಜಿಗಲ್ ಎಚ್.ಆರ್.ಬಿ.ಆರ್. ಅಕಾಡೆಮಿ ಮ್ಯಾನೇಜಿಂಗ್ ಪಾರ್ಟ್ನರ್ ಕ್ಯಾಪ್ಟನ್ ಮುಕುಲ್ ಶರ್ಮಾ(ನಿ.), “ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಸೃಜನಶೀಲತೆಯ ದೊಡ್ಡ ಅಲೆ ರೀಲ್ಸ್ ನಿಂದ ಪೋಡ್ ಕಾಸ್ಟ್ ಗಳವರೆಗೆ, ವಾಯ್ಸ್ ಓವರ್ ಗಳು ಮತ್ತು ಸ್ವತಂತ್ರ ಸಂಗೀತದವರೆಗೆ ವಿಸ್ತರಿಸಿದೆ. ಐಡಿಯಾಗಳ ಕೊರತೆ ಇಲ್ಲದಿದ್ದರೂ ಆಡಿಯೋ ಗುಣಮಟ್ಟದ ಕೊರತೆ ಇರುತ್ತದೆ. ಉನ್ನತ ಕಂಟೆಂಟ್ ಗೆ ಸ್ಪಷ್ಟತೆ ಮತ್ತು ಪರಿಣಾಮ ಬೇಕಾಗುತ್ತದೆ. ಅದೇ ಆಲೋಚನೆಯು ಈ ಕೋರ್ಸ್ ಪ್ರಾರಂಭಕ್ಕೆ ಕಾರಣ: ಕ್ರಿಯೇಟರ್ ಗಳು ಪೋಡ್ ಕಾಸ್ಟ್ ಗಳು, ಸಂಗೀತ, ಡಬ್ಬಿಂಗ್ ಅಥವಾ ಸಹಯೋಗಗಳಿರಲಿ ಸ್ಟುಡಿಯೋ ಗುಣಮಟ್ಟದ ಶಬ್ದವನ್ನು ಅವರ ಬೆಡ್ ರೂಂ ಸ್ಟುಡಿಯೋಗಳಿಂದ ನಿರ್ಮಿಸುವ ಮೂಲಕ ತಮ್ಮ ಸಂಗೀತವನ್ನು ಯೂಟ್ಯೂಬ್, ಸ್ಪೋಟಿಫೈ ಮತ್ತು ಡೀಜರ್ ಗೆ ವಿಶ್ವಾಸದಿಂದ ಕೈಗೆಟುಕುವ ಬೆಲೆಯಲ್ಲಿ ಕೊಂಡೊಯ್ಯಬಹುದು” ಎಂದರು.
ಈ ಕಾರ್ಯಕ್ರಮ ಕುರಿತು ಫಾಸ್ಟ್ ಟ್ರ್ಯಾಕ್- ಹೋಮ್ ಮ್ಯೂಸಿಕ್ ಪ್ರೊಡಕ್ಷನ್ ಕೋರ್ಸ್ ಪ್ರಾಯೋಗಿಕ, ಪ್ರಾರಂಭಿಕ ಹಂತದಲ್ಲಿರುವವರ ಸ್ನೇಹಿ ಕೋರ್ಸ್ ಆಗಿದ್ದು ಇದರಲ್ಲಿ ಶಿಕ್ಷಕರು,
ಮೂಲಭೂತ ಹೋಮ್ ರೆಕಾರ್ಡಿಂಗ್ ಸ್ಥಳ ಸೆಟಪ್ ಪ್ರಾರಂಭಿಸಲು (ಸಾಧನ, ಸಾಫ್ಟ್ ವೇರ್, ಅಕೌಸ್ಟಿಕ್ಸ್)
ಅಗತ್ಯ ತಂತ್ರಗಳೊಂದಿಗೆ ಹಾಡುಗಾರಿಕೆ ಮತ್ತು ಸಂಗೀತ ಸಾಧನಗಳ ರೆಕಾರ್ಡ್ ಮಾಡಲು
ಐಡಿಯಾಗಳನ್ನು ತ್ವರಿತವಾಗಿ ಗ್ರಹಿಸಲು ಮತ್ತು ಅವುಗಳನ್ನು ಪಾಲಿಶ್ಡ್ ಟ್ರ್ಯಾಕ್ ಗಳಾಗಿ ಬದಲಾಯಿಸಲು
ವೃತ್ತಿಪರ ಗುಣಮಟ್ಟದ ಶಬ್ದಕ್ಕೆ ಸರಳ ಎಡಿಟಿಂಗ್ ಮತ್ತು ಮಿಕ್ಸಿಂಗ್
ಜಿಂಗ್ ಗಳು, ಸೋಲೋಗಳು, ಸಹಯೋಗಗಳು ಡೆಮೊಗಳು, ಪೋಡ್ ಪಾಸ್ಟ್ ಗಳು ಮತ್ತಿತರೆ ರೆಕಾರ್ಡಿಂಗ್ ಗಳ ಸೃಷ್ಟಿ
ಕೋರ್ಸ್ ವಿವರಗಳು:
● ಶುಲ್ಕ: ₹48,000 (ಅರ್ಲಿ ಬರ್ಡ್: ಸೆಪ್ಟೆಂಬರ್ 30ಕ್ಕೆ ಮುನ್ನ ₹40,000)
● ಅವಧಿ: 48 ತರಗತಿಗಳು (3 ತಿಂಗಳು ಮೇಲ್ಪಟ್ಟು ವಾರಕ್ಕೆ 4 ತರಗತಿಗಳು)
● ಸಮಯ: ಅನುಕೂಲಕರ ಗಂಟೆಗಳು: ಬೆಳಿಗ್ಗೆ 11ರಿಂದ 1, ಸಂಜೆ 5ರಿಂದ 9
● ಯಾರು ಸೇರಬಹುದು: ಪ್ರಾರಂಭಿಕ ಹಂತದವರು, ಹವ್ಯಾಸಿಗಳು, ಗಾಯಕರು, ಇನ್ಸ್ಟ್ರುಮೆಂಟಲಿಸ್ಟ್ ಗಳು, ಗೃಹಿಣಿಯರು, ವೃತ್ತಿನಿರತರು, ವಿದ್ಯಾರ್ಥಿಗಳು ಹಾಗೂ ಸಂಗೀತದ ಆಸಕ್ತಿ ಉಳ್ಳವರು.
ನೋಂದಣಿ ಮತ್ತು ಸಂಪರ್ಕ
ಮ್ಯೂಜಿಗಲ್ ಎಚ್.ಆರ್.ಬಿ.ಆರ್. ಲೇಔಟ್
ನಂ. 7ಎಎಂ-701, ಪೂರ್ಣ ಆರ್ಕೇಡ್, 1ನೇ ಬ್ಲಾಕ್, ಎಚ್.ಆರ್.ಬಿ.ಆರ್. ಲೇಔಟ್, ಬಾಣಸವಾಡಿ ಮುಖ್ಯರಸ್ತೆ, ಬೆಂಗಳೂರು, ಕರ್ನಾಟಕ 560043
📞 ಫೋನ್: 94296 90018
🌐 ಗೂಗಲ್ ಬಿಸಿನೆಸ್ ಲಿಂಕ್: Muzigal HRBR
What's Your Reaction?






