ಭೀಮಕಾಯರ ಮಹಾ ಕಾಳಗ ! ವೈರಲ್ ವಿಡಿಯೋ ನಿಮ್ಮ ಮುಂದೆ

Nov 5, 2025 - 11:06
 0  262
ಭೀಮಕಾಯರ ಮಹಾ ಕಾಳಗ ! ವೈರಲ್ ವಿಡಿಯೋ ನಿಮ್ಮ ಮುಂದೆ

ಆಪ್ತ ನ್ಯೂಸ್ ಶಿರಸಿ:
ಇದು ಯಾವ ಡಬ್ಲೂಡಬ್ಲೂಎಫ್ ಕಾಳಗಕ್ಕಿಂತಲೂ ಕಡಿಮೆ ಇಲ್ಲ. ಅಂಡರ್ ಟೇಕರ್, ಹಾಗೂ ಬಿಗ್ ಷೋ ಕಾಳಗವನ್ನೂ ಇದು ಮೀರಿಸುವ ಹಾಗಿದ್ದವು. ಇದು ಎಲ್ಲೋ ನಡೆದಿಲ್ಲ. ನಮ್ಮ ಶಿರಸಿ ನಗರದಲ್ಲೇ ನಡೆದಿತ್ತು! ಏನಿದು ಅಂತೀರಾ? ಇಲ್ಲಿ ನೋಡಿ
ಭೀಮಗಾತ್ರದ ಎರಡು ಗೂಳಿಗಳು ರಸ್ತೆ ಮಧ್ಯ ಭಯಂಕರವಾಗಿ ಕಾದಾಟ ನಡೆಸುತ್ತಿದ್ದವು. ಶಿರಸಿಯ ಮರಾಠಿಕೊಪ್ಪ ಕ್ರಾಸ್ ಜೋಡು ಕಟ್ಟೆ ಬಳಿಯಲ್ಲಿ ಎರಡು ಭಾರಿ ಗಾತ್ರದ ಗೂಳಿಗಳು ಹಣೆಗೆ ಹಣೆ ಹಚ್ಚಿ ಕುಸ್ತಿ ಆಡುತ್ತಿದ್ದವು. ಸುತ್ತಮುತ್ತಲು ಹಲವಾರು ಜನರು ಕುತೂಹಲದಿಂದ ಈ ಕಾಳಗವನ್ನು ನೋಡುತ್ತಿದ್ದರು. ಯಾರು ಗೆಲ್ಲಬಹುದು? ಯಾರು ಸೋಲಬಹುದು ಎಂದು ಲೆಕ್ಕಾಚಾರ ಮಾಡುತ್ತಿದ್ದರು. ಇನ್ನು ಕೆಲವರು ಗೂಳಿಗಳ ಮೇಲೆ ತಣ್ಣೀರು ಎರಚಿ ಕಾಳಗ ಬಿಡಿಸುವ ಪ್ರಯತ್ನವನ್ನೂ ಮಾಡುತ್ತಿದ್ದರು.

ಈ ಕಾಳಗವನ್ನು ನೋಡಿದ ವ್ಲಾಗರ್ ಧೀರಜ್ ಕುಮಾರ್ ಶಿರಸಿ ಅವರು ಸುಂದರವಾಗಿ ವಿಡಿಯೋ ಮಾಡಿಕೊಂಡರು. ಆ ವಿಡಿಯೋ ಇದೀಗ ನಿಮ್ಮ ಮುಂದೆ ಇದೆ ನೋಡಿ! ಅಬ್ಬಬ್ಬಾ ಎನ್ನಿಸುವ ಈ ವಿಡಿಯೋವನ್ನು ನೀವು ನೋಡದೆ ಇದ್ದರೆ ಹೇಗೆ?

ಲಿಂಕ್ ಇಲ್ಲಿದೆ:
https://youtu.be/UHlwQBxqGIU?si=8NPXhcKZiL7IPizw
https://youtube.com/shorts/H0KlYf4Qscw?si=BNgWef4t7f2v_4xl

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0