ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಆಪ್ತ ನ್ಯೂಸ್ ಜೋಯಿಡಾ:
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬಿ.ಜಿ.ವಿ.ಎಸ್. ಪದವಿ ಪೂರ್ವ ಕಾಲೇಜ ಜೋಯಿಡಾದ ವಿದ್ಯಾರ್ಥಿನಿ ಕಾವ್ಯ ತುಕಾರಾಂ ದಾನವೆನ್ನವರ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಇವರು ಬಿಜಾಪುರದ ಸಿಂದಗಿಯಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ (53ಕೆಜಿ ವಿಭಾಗದಲ್ಲಿ )ಸ್ಪರ್ಧೆಯಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಿ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಆಗಿದ್ದಾರೆ.
ಬರುವ ಡಿಸೆಂಬರ್ ಮೊದಲನೇ ವಾರದಲ್ಲಿ ಹರಿಯಾಣದ ಸೋನಿಪಥ್ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ಇವರು ಆಯ್ಕೆಯಾಗಿದ್ದಾರೆ.
ಕಾವ್ಯಾ ದಾನವೆನ್ನವರ ಹಳಿಯಾಳದ ಕ್ರೀಡಾ ಇಲಾಖೆ ಹಾಸ್ಟೆಲ್ ನಲ್ಲಿದ್ದು ಕುಸ್ತಿ ತರಬೇತಿದಾರ ತುಕಾರಾಮ ಪಾಟೀಲ ರವರಿಂದ ತರಬೇತಿ ಪಡೆದಿದ್ದರು ಇವರ ಸಾಧನೆಗೆ ಬಿ. ಜಿ. ವಿ. ಎಸ್. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ವನಿತಾ ರಾಣೆ, ಉಪಾಧ್ಯಕ್ಷ ಉಲ್ಲಾಸ ನಾಯ್ಕ, ಕಾರ್ಯದರ್ಶಿಗಳಾದ ಮಂಜುನಾಥ ಪವಾರ, ಕಿಶೋರ ರಾಣೆ, ಹಾಗೂ ಸ್ಥಳಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ ದೇಸಾಯಿ, ಕಾರ್ಯದರ್ಶಿ ರವಿ ರೆಡ್ಕರ್, ಸಂತೋಷ ಮಂತೇರೊ , ಪ್ರಾಂಶುಪಾಲ ಮಂಜುನಾಥ ಶೆಟ್ಟಿ, ದೈ. ಶಿ. ಉಪನ್ಯಾಸಕ ಪಾಂಡುರಂಗ ಪಟಗಾರ ಉಪನ್ಯಾಸಕ ವೃಂದ ಮತ್ತು ಗ್ರಾಮಸ್ಥರು ಸಾಧನೆಗೆ ಅಭಿನಂದಿಸಿದ್ದು, ರಾಷ್ಟಮಟ್ಟದ ಸ್ಪರ್ಧೆಯಲ್ಲಿ ಗೆಲುವಿಗಾಗಿ ಹಾರೈಸಿರುತ್ತಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



