ಕ್ಯಾದಗಿ ವಲಯ ಕಛೇರಿಗೆ ದಿ.೩೧ ರಂದು ಅರಣ್ಯವಾಸಿಗಳ ಭೇಟಿ - ಚರ್ಚೆ ನಿರ್ಧಾರ

Dec 26, 2025 - 22:02
 0  16
ಕ್ಯಾದಗಿ ವಲಯ ಕಛೇರಿಗೆ ದಿ.೩೧ ರಂದು ಅರಣ್ಯವಾಸಿಗಳ ಭೇಟಿ - ಚರ್ಚೆ ನಿರ್ಧಾರ

ಆಪ್ತ ನ್ಯೂಸ್‌ ಸಿದ್ದಾಪುರ:

ಅರಣ್ಯವಾಸಿಗಳ ಸಾಗುವಳಿಗೆ ಸಂಬಂಧಿಸಿ, ಅರಣ್ಯ ಅಧಿಕಾರಿಯೊಂದಿಗೆ ಚರ್ಚಿಸುವ ಉದ್ದೇಶದಿಂದ ಸಿದ್ದಾಪುರ ತಾಲೂಕಿನ ಕ್ಯಾದಗಿ ವಲಯ ಅರಣ್ಯ ಕಛೇರಿಗೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ತಿಳಿಸಿದ್ದಾರೆ.
   ಸಿದ್ದಾಪುರ ತಾಲೂಕಿನ ಕ್ಯಾದಗಿ ವಲಯ ಅರಣ್ಯ ಕಛೇರಿ ವ್ಯಾಪ್ತಿಯಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಉಂಟಾಗುತ್ತೀರುವ ಸಮಸ್ಯೆ ಕಾನೂನಾತ್ಮಕ ಅರಣ್ಯವಾಸಿಯ ಹಕ್ಕು ಹಾಗೂ ಅರಣ್ಯವಾಸಿಯ ಕರ್ತವ್ಯದ ಕುರಿತು ಚರ್ಚಿಸುವ ಉದ್ದೇಶದಿಂದ ಅರಣ್ಯ ಅಧಿಕಾರಿಯೊಂದಿಗೆ ಸೌಹಾರ್ಧಯುತವಾಗಿ ಸಮಾಲೋಚನಾ ಸಭೆಯನ್ನ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       ಚರ್ಚೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ  ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಉಪಸ್ಥಿತರಿರುವ ಸಭೆಯಲ್ಲಿ ಅರಣ್ಯ ಇಲಾಖೆಯು ಚರ್ಚಿಸಲು  ಅವಕಾಶ ಮಾಡಿ ಕೊಡಬೇಕೆಂದು ಈಗಾಗಲೇ ಕ್ಯಾದಗಿ ವಲಯ ಅರಣ್ಯ ಕಛೇರಿಗೆ ಪತ್ರ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
   ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬಧಿಸಿದ ಕಾನೂನಾತ್ಮಕ ಸಮಾಲೋಚನೆ ಸಭೆಯಲ್ಲಿ ಆಸಕ್ತ ಅರಣ್ಯವಾಸಿಗಳು ಭಾಗವಹಿಸಬೇಕೆಂದು ಸಂಚಾಲಕ ಮಾಬ್ಲೇಶ್ವರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0