ಅಡಿಗೆ ಕೋಣೆಗೆ ನುಗ್ಗಿದ್ದ ಬೃಹತ್ ಉಡ ರಕ್ಷಣೆ: ಅರಣ್ಯ ಇಲಾಖೆ ಕಾರ್ಯಾಚರಣೆಗೆ ಗ್ರಾಮಸ್ಥರ ಮೆಚ್ಚುಗೆ
ಆಪ್ತ ನ್ಯೂಸ್ ಮುಂಡಗೋಡ:
ತಾಲೂಕಿನ ಕಾತೂರು ಅರಣ್ಯ ವಲಯದ ಭದ್ರಾಪುರ ಶಾಖೆ ವ್ಯಾಪ್ತಿಯ ಕಲ್ಕೋಪ್ಪಾ ಗ್ರಾಮದಲ್ಲಿ ಮನೆಯ ಅಡಿಗೆ ಕೋಣೆಗೆ ಬೃಹತ್ ಉಡ (ಮಾನಿಟರ್ ಲಿಜರ್ಡ್) ನುಗ್ಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಕಲ್ಕೋಪ್ಪಾ ಗ್ರಾಮದ ನಿವಾಸಿ ಭೀಮಣ್ಣ ಪುಟ್ಟಣ್ಣ ಗೌಡ ಇಂಗಳಕಿ ಅವರು ಈ ಕುರಿತು ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ತಕ್ಷಣ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಮನೆಯ ಅಡಿಗೆ ಕೋಣೆಯಲ್ಲಿದ್ದ ಉಡಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಹಿಡಿದು ರಕ್ಷಿಸಿದರು.
ಬಳಿಕ ಗ್ರಾಮಸ್ಥರಾದ ಬಸನ್ ಗೌಡ, ಭೀಮಣ್ಣ ಹಾಗೂ ಸ್ಥಳೀಯ ಮುಸ್ಲಿಂ ಬಾಂಧವರ ಸಮ್ಮುಖದಲ್ಲಿ ಉಡಾವನ್ನು ಸುರಕ್ಷಿತವಾಗಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದವರು
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪುಟ್ಟನ ಗೌಡ, ಶಂಕರ್ ಗೌಡ, ನಾಗನ ಗೌಡ, ಭರತ್, ಲೋಕೇಶ್, ಲೋಹಿತ್, ನಾಗರತ್ನಾ, ಸರೋಜಾ, ಮಂಗಲಾ, ಪುಷ್ಪಾ, ಕೃಷಿ, ಶಶಿ, ಕೀರ್ತಿ ಹಾಗೂ ಸುಷ್ಮಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಯಿಂದ ಉಡಾವನ್ನು ಸುರಕ್ಷಿತವಾಗಿ ರಕ್ಷಿಸುವುದರ ಜೊತೆಗೆ ಗ್ರಾಮಸ್ಥರ ಆತಂಕವೂ ದೂರವಾಗಿದ್ದು, ಇಲಾಖೆಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



