ಬೇಕು ಅನ್ನೋದನ್ನು ಕೊಡ್ತಾ ಇಲ್ಲ ನೀವು! ಆದರೆ ಬೇಡ ಅನ್ನೋದನ್ನ ಯಾಕೆ ಕೊಡೋಕೆ ಹೊರಟಿದ್ದೀರಿ?
ಉತ್ತರಕನ್ನಡ ಜಿಲ್ಲೆಯಂತ ಶಾಪಗ್ರಸ್ತ ಜಿಲ್ಲೆ ನಮ್ಮ ರಾಜ್ಯದಲ್ಲಿ ಮತ್ತೊಂದು ಜಿಲ್ಲೆ ಇರಲು ಸಾಧ್ಯವಿಲ್ಲ ಎಂದು, 10000 ಕೋಟಿ ಅಲ್ಲಿ ಪಂಪ್ ಸ್ಟೋರೇಜ್ ನಿರ್ಮಿಸಲು ಇವರ ಬಳಿ ಹಣ ಇದೆ, 10ಕೋಟಿ ಅಲ್ಲಿ ಒಂದು ಆಸ್ಪತ್ರೆ ನಿರ್ಮಿಸಲು ಇವರ ಬಳಿ ಆಗುವುದಿಲ್ಲ. ಓಟು ಹಾಕಲು ಜನರು ಬೇಕು, ನಂತರ ಜನರ ಸತ್ತರು ಯಾರು ಕೇಳುವವರಿಲ್ಲ ಇದೆಲ್ಲ ವಿಪರ್ಯಾಸವೇ ಸರಿ.

~ ಮೋಹನ್ ನಾಯ್ಕ
(ಕೊನೆಯಸಾಲು)
*******
ಉತ್ತರ ಕನ್ನಡ ಜಿಲ್ಲೆ ಅತಿಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಅಂದರೆ ಸುಮಾರು 70% ಅರಣ್ಯ ಉತ್ತರಕನ್ನಡದಲ್ಲಿ ಇದೆ, ಇನ್ನೂ ಉತ್ತರಕನ್ನಡದಲ್ಲಿ ಎನ್ ಏನು ಇದೆ ಅಂತ ನೋಡ್ತಾ ಹೋಗೋದ್ ಆದ್ರೆ, ಐ ಎನ್ ಎಸ್ ಕದಂಬ ನೌಕಾ ನೆಲೆ, ಕೈಗಾ ಅಣುವಿದ್ಯುತ್ ಸ್ಥಾವರ, ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ ಇವೆಲ್ಲವೂ ಇರುವುದು ಉತ್ತರಕನ್ನಡದಲ್ಲೆ, ಹಾಗೆ ಈಗ ಬಂದಿರುವ ಹೊಸ ಯೋಜನೆ " ಶರಾವತಿ ಪಂಪ್ ಸ್ಟೋರೇಜ್ ಯೋಜನೆ" ಇದನ್ನು ಸಹ ಸರಕಾರ ಆರಂಭಿಸಬೇಕು ಅಂತ ಇರುವುದು ಉತ್ತರಕನ್ನಡದಲ್ಲೆ .
ಅದರ ಬಗ್ಗೆ ನೋಡುವುದಾದರೆ:
ಸೈಹ್ಯಾದ್ರಿ ಪರ್ವತದ ಶ್ರೇಣಿಯ ಉತ್ತರಕನ್ನಡ ಮತ್ತು ಶಿವಮೊಗ್ಗ ವ್ಯಾಪ್ತಿಯಲ್ಲಿ 950 ಚ.ಕಿಮೀ ಶರಾವತಿ ಸಿಂಗಳಿಕ ಅಭಯಾರಣ್ಯದಲ್ಲಿ ಸುಮಾರು 10000 ಕೋಟಿ ಮೊತ್ತದಲ್ಲಿ ಆರಂಭಿಸಬೇಕು ಎಂದು ತಯಾರಿಸಿರುವ ಯೋಜನೆ. ಇದರಲ್ಲಿ ಸರಕಾರದ ವಾದ ಏನು ಅಂತ ನೋಡುವುದಾದರೆ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯಿಂದ 2000 ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುವುದು ಅದಲ್ಲದೆ ನೀವು ಅಂದಾಜಿಸಿರುವ ಹಾಗೆ 16000 ಮರಗಳನ್ನು ಕಡಿಯುವುದಿಲ್ಲ ಬದಲಾಗಿ 7000 ಮರಗಳನ್ನು ಕಡಿದು ನಿರ್ಮಾಣ ಮಾಡುತ್ತೇವೆ. ಅದಲ್ಲದೆ ಮತ್ತೆ ಪುನಃ ಅಲ್ಲಿ ಕಾಡುಗಳನ್ನು ಬೆಳೆಸುತ್ತೇವೆ ಎಂದು.
ಅಸಲಿಗೆ ಉತ್ತರಕನ್ನಡಕ್ಕೆ ಬೇಕಾಗಿರುವುದು:
ಸರ್ಕಾರದವರಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಯಾವ ಯಾವ ಕೈಗಾರಿಕೆ ಮಾಡಬೇಕು, ಯಾವ ಯಾವ ಯೋಜನೆಯನ್ನು ತರಬೇಕು ಎಂದು ಅಷ್ಟೆಲ್ಲಾ ಆಲೋಚನೆ ಮಾಡುವಂತವರಿಗೆ ಇಲ್ಲಿಯ ಜನರಿಗೆ ಏನು ಅಗತ್ಯ ಇದೆ ಅನ್ನುವುದು ಸರಕಾರದ , ನಾಯಕರ ಕಣ್ಣಿಗೆ ಕಾಣುವುದಿಲ್ಲವೇ, ಸರಕಾರಕ್ಕೆ ಜಿಲ್ಲೆಯಲ್ಲಿ ಹರಿಯುವ ನೀರಿನ ಮೇಲೆ ಅತಿಯಾದ ಒಲವಿದೆ ಜಿಲ್ಲೆಯಲ್ಲಿ ಇರುವ ಜೀವಗಳಿಗೆ ಬೆಲೆ ಇಲ್ಲ, ಉತ್ತರಕನ್ನಡ ಜಿಲ್ಲೆಯ ಸಮಸ್ಯೆ ಕೇಳುವವರು ಯಾರೂ ಇಲ್ಲ,
ಉತ್ತರಕನ್ನಡದ ಜನತೆ " ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜಿಲ್ಲಾದ್ಯಂತ ಹೋರಾಟ ಮಾಡಿ ಆಯ್ತು, ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಯ್ತು, ಬೀದಿಗಿಳಿದು ಹೋರಾಟ ಮಾಡಿ ಆಯ್ತು, ಆದರೂ ಯಾವುದೇ ಪ್ರಯೋಜನ ಇಲ್ಲ, ಉತ್ತರಕನ್ನಡದಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು ಎಷ್ಟು ಕಷ್ಟ ಆಗಿದೆ ಅಂದರೆ ಜನರಿಗೆ, ಯಾರಾದರೂ ಸಾವು ಬದುಕಿನ ನಡುವೆ ಹೋರಾಡುತ್ತಾ ಇದ್ದರೆ, ಅವರನ್ನು ಜಿಲ್ಲೆಯಿಂದ 100/150 ಕಿ.ಮೀ ದೂರದಲ್ಲಿರುವ ಮಂಗಳೂರಿಗೆ ಅಥವಾ ಇನ್ನಿತರ ಆಸ್ಪತ್ರೆಗೆ ಕರೆದೊಯ್ಯಬೇಕು ಹಾಗೆ ಹೋಗುವಾಗ ಮಾರ್ಗ ಮಧ್ಯದಲ್ಲೇ ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡ ಸಾವಿರಾರು ಉದಾಹರಣೆಗಳು ಇವೆ, ಆದರೂ ಸರಕಾರಕ್ಕೆ ಇದ್ಯಾವುದೂ ಅವರ ಕಣ್ಣಿಗೆ ಬೀಳುವುದಿಲ್ಲ, ಅವರಿಗೆ ಕೇವಲ ಅಭಿವೃದ್ದಿಯ ಹೆಸರಿನಲ್ಲಿ ಜನರ ಜೀವದ ಜೊತೆ ಆಟ ಆಡುವುದನ್ನು ಬಿಟ್ಟರೆ ಬೇರೆ ಬಡ ಜನರ ಕೂಗು ಕಿವಿಗೆ ಬೀಳುವುದಿಲ್ಲ.
ಕೆಲವೊಮ್ಮೆ ಅನಿಸುವುದು ಉತ್ತರಕನ್ನಡ ಜಿಲ್ಲೆಯಂತ ಶಾಪಗ್ರಸ್ತ ಜಿಲ್ಲೆ ನಮ್ಮ ರಾಜ್ಯದಲ್ಲಿ ಮತ್ತೊಂದು ಜಿಲ್ಲೆ ಇರಲು ಸಾಧ್ಯವಿಲ್ಲ ಎಂದು, 10000 ಕೋಟಿ ಅಲ್ಲಿ ಪಂಪ್ ಸ್ಟೋರೇಜ್ ನಿರ್ಮಿಸಲು ಇವರ ಬಳಿ ಹಣ ಇದೆ, 10ಕೋಟಿ ಅಲ್ಲಿ ಒಂದು ಆಸ್ಪತ್ರೆ ನಿರ್ಮಿಸಲು ಇವರ ಬಳಿ ಆಗುವುದಿಲ್ಲ. ಓಟು ಹಾಕಲು ಜನರು ಬೇಕು, ನಂತರ ಜನರ ಸತ್ತರು ಯಾರು ಕೇಳುವವರಿಲ್ಲ ಇದೆಲ್ಲ ವಿಪರ್ಯಾಸವೇ ಸರಿ. ಎಲ್ಲಿಯವರೆಗೆ ಉತ್ತರಕನ್ನಡದಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗುದಿಲ್ಲವೋ ಅಲ್ಲಿಯವರೆಗೆ ಈ ಜನರ ಬಡಿದಾಟಕ್ಕೆ ಬೆಲೆ ಇಲ್ಲ.
What's Your Reaction?






