~ಡಾ ರವಿಕಿರಣ ಪಟವರ್ಧನ
***********************
ಸಹಸ್ರಲಿಂಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿರುವ ಶಾಲ್ಮಲಾ ನದಿಯಲ್ಲಿಯ ಒಂದು ಅಪೂರ್ವ ಧಾರ್ಮಿಕ ಮತ್ತು ನೈಸರ್ಗಿಕ ತಾಣವಾಗಿದೆ. ಶಿರಸಿಯಿಂದ ಸುಮಾರು 13ಕಿ.ಮೀ ದೂರದಲ್ಲಿರುವ ಈ ಪವಿತ್ರ ಸ್ಥಳವು ಶಿರಸಿ ಯಲ್ಲಾಪುರ ರಾಜ್ಯ ಹೆದ್ದಾರಿಯಿಂದ ತೆರಳಬೇಕು, ಭೈರಂಭೆ ಊರು ದಾಟಿದ ನಂತರ ಹುಳಗೋಳ ಗ್ರಾಮ ಪ್ರಾರಂಭ ಆಗುವ ಹೊತ್ತಿಗೆ ಎಡಗಡೆಗೆ ತಿರುಗಬೇಕು. ಅರಣ್ಯ ಇಲಾಖೆಯಿಂದ ತಯಾರಿಸಲ್ಪಟ್ಟಂತಹ ಮರದ ಮಾದರಿಯ ಫಲಕ ಎಲ್ಲರನ್ನೂ ಆಕರ್ಷಿಸುತ್ತದೆ, ಸ್ವಾಗತಿಸುತ್ತದೆ.
ಮುಖ್ಯ ರಸ್ತೆಯಿಂದ ಎಡಗಡೆಯ ರಸ್ತೆಗೆ ಹೋಗಲು ಪ್ರಾರಂಭವಾದ ನಂತರ ಬಲಗಡೆಗೆ ಒಂದು ಪುಟ್ಟ ಸುಂದರ ಗಣಪತಿ ದೇವಸ್ಥಾನವಿದೆ. ಹುಳುಗೋಳ ಗಣಪತಿ ದೇವಸ್ಥಾನ ವೆಂದೇ ಪ್ರಸಿದ್ಧ.ಇಲ್ಲಿಂದ ಮುಂದೆ ವಾಹನ ಸಂಚರಿಸುವಂತಹ ಚಿಕ್ಕ ರಸ್ತೆ ಸಹಸ್ರಲಿಂಗಕ್ಕೆ ತಮ್ಮನ್ನ ತಲುಪಿಸುತ್ತದೆ.ಇದು
ಶಾಲ್ಮಲಾ ನದಿಯಲ್ಲಿ ನೆಲೆಸಿದೆ.
ವಿಶೇಷತೆ ಏನು?
ಶಾಲ್ಮಲಾ ನದಿಯಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಶಿವಲಿಂಗಗಳು ಮತ್ತು ನಂದಿಮೂರ್ತಿಗಳು ಕಾಣಿಸುತ್ತವೆ.
ಇತಿಹಾಸ ಮತ್ತು ಆಧ್ಯಾತ್ಮಿಕ ಹಿನ್ನೆಲೆ
ಐತಿಹಾಸಿಕ ಮೂಲ
ಕಾಲಾವಧಿ: ಅಂದಾಜು 17ನೇ ಶತಮಾನ
ನಿರ್ಮಾಪಕ: ಶಿರಸಿಯ ಸದಾಶಿವರಾಯ ರಾಜ
ಉದ್ದೇಶ:** ಸಂತಾನ ಲಾಭದ ಪ್ರಾರ್ಥನೆ ಮತ್ತು ಭಕ್ತಿಯ ಪ್ರತಿಬಿಂಬ ಅಂತ ತಿಳಿದವರು ಹೇಳುತ್ತಾರೆ.
ನಾಮಕರಣ
ಸಹಸ್ರ ಅಂದರೆ ಸಾವಿರ
ಇಲ್ಲಿನ ಶಿವಲಿಂಗಗಳ ಸಂಖ್ಯೆ ಸಾವಿರಕ್ಕೂ ಅಧಿಕವಾಗಿರುವುದರಿಂದ 'ಸಹಸ್ರಲಿಂಗ' ಎಂಬ ಹೆಸರು ಬಂದಿದೆ.
ನೈಸರ್ಗಿಕ ವೈಶಿಷ್ಟ್ಯಗಳು.
ಶಿವಲಿಂಗಗಳ ರಚನೆ
- ಕೆಲವು ಶಿವಲಿಂಗದ ಮುಂದೆ ನಂದಿಮೂರ್ತಿ ಕೆತ್ತಲಾಗಿದೆ.ನದಿಯ ಕಲ್ಲುಗಳಲ್ಲಿ ಕೆತ್ತನೆ ರೂಪಗೊಂಡಿವೆ.ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಕಾಣಿಸುತ್ತವೆ.
ಮಳೆಗಾಲದಲ್ಲಿ ಪರಮೇಶ್ವರನೇ ನೈಸರ್ಗಿಕವಾಗಿ ತನ್ನ ಅಭಿಷೇಕ ಮಾಡಿಕೊಳ್ಳುತ್ತಿದ್ದಾನೆ ಎನ್ನುವ ದೃಶ್ಯಗಳು ಸರ್ವೇಸಾಮಾನ್ಯ.
ಋತುಮಾನದ ಪ್ರಭಾವ
ಮಳೆಗಾಲ (ಜೂನ್-ಸೆಪ್ಟೆಂಬರ್):** ಬಹುತೇಕ ಲಿಂಗಗಳು ಜಲಾವೃತ.
ಅಕ್ಟೋಬರ್-ಮಾರ್ಚ್ ಶಾಲ್ಮಲಾ ನದಿಗೆ ನೀರು ಕಡಿಮೆ ಇರುವುದರಿಂದ ಸಂಪೂರ್ಣ ಲಿಂಗಗಳು ನಂದಿಯ ಮೂರ್ತಿಗಳು ಕಾಣಲು ಸುಲಭ.
ಧಾರ್ಮಿಕ ಮಹತ್ವ
ಪವಿತ್ರ ಸ್ಥಾನ
-ಶೈವ ಭಕ್ತರಿಗೆ ಪ್ರಮುಖ ಯಾತ್ರಾ ಸ್ಥಳ, ದಕ್ಷಿಣ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದು
ವಿಶೇಷ ದಿನಗಳು
ಮಹಾಶಿವರಾತ್ರಿ ಮುಖ್ಯ ಹಬ್ಬ
ಪ್ರವಾಸಿಗರ ಮಾಹಿತಿ
ಪ್ರವೇಶ ವಿವರಗಳು
ಪ್ರವೇಶ ಶುಲ್ಕ: ಉಚಿತ
ವಾಹನಕ್ಕೆ ರೂಪಾಯಿ 30
ಸಮಯ:ಬೆಳಿಗ್ಗೆ 6:00 - ಸಂಜೆ 6:00
ಅವಧಿ: ವರ್ಷಪೂರ್ತಿ ಮುಕ್ತ
ಸೂಕ್ತ ಕಾಲ
ಅಕ್ಟೋಬರ್ - ಫೆಬ್ರವರಿ
*ಕಾರಣ:* ನೀರಿನ ಮಟ್ಟ ಕಡಿಮೆ, ಸಂಪೂರ್ಣ ದೃಶ್ಯಮಾನತೆ.
ಸುರಕ್ಷತಾ ಸೂಚನೆಗಳು
ಮಳೆಗಾಲ:** ಪ್ರವೇಶ ಅಪಾಯಕರ (ಜಾರುವಿಕೆ/ಪ್ರವಾಹ)
ಎಚ್ಚರಿಕೆ ಕಲ್ಲು ಮೇಲೆ ನಡೆಯುವಾಗ ಜಾಗರೂಕತೆ.
ಮಾರ್ಗಗಳು
ರಸ್ತೆ ಮಾರ್ಗ
-ಶಿರಸಿಯಿಂದ: ಸ್ಥಳೀಯ ಬಸ್/ಟ್ಯಾಕ್ಸಿ/ವೈಯಕ್ತಿಕ ವಾಹನ
ದೂರ:** 13ಕಿ.ಮೀ
-ಸಮಯ:** 30-45 ನಿಮಿಷಗಳು.
ರೈಲು ಮಾರ್ಗ
ಹತ್ತಿರದ ರೈಲು ನಿಲ್ದಾಣಗಳು:
ಕುಮಟಾ (ಸುಮಾರು 60 ಕಿ.ಮೀ)
ತಾಳಗುಪ್ಪ (ಸುಮಾರು 60 ಕಿ.ಮೀ)
ವಾಯು ಮಾರ್ಗ
ಹತ್ತಿರದ ವಿಮಾನ ನಿಲ್ದಾಣ:
ಹುಬ್ಬಳ್ಳಿ** (100 ಕಿ.ಮೀ)
ಉಳಿಕೆ ಸೌಕರ್ಯಗಳು
ಸಹಸ್ರಲಿಂಗದ ಹತ್ತಿರ ಕೆಲವು ಹೋಂಸ್ಟೇಗಳು ಇವೆ.
ಶಿರಸಿಯಲ್ಲಿ
- ಬಜೆಟ್ ಹೊಟೇಲ್‌ಗಳು
- ಸರ್ಕಾರಿ ಅತಿಥಿ ಗೃಹಗಳು
- ಖಾಸಗಿ ಲಾಡ್ಜ್‌ಗಳು.
ಸಹಸ್ರಲಿಂಗದ ಬಳಿ
ಪುಟ್ಟ ಕ್ಯಾಂಟೀನ್ ಇದೆ, ಇತರ ಯಾವುದೇ ಆಹಾರ ಪಾನೀಯ ವ್ಯವಸ್ಥೆಗಳು ಇಲ್ಲ. ಇಲ್ಲಿಗೆ ಹತ್ತಿರವಿರುವ ಭೈರುಂಬೆ, ತಾರಗೋಡಗಳಲ್ಲಿ ಸೂಪರ್ ಮಾರ್ಕೆಟ್, ಹೋಟೆಲ್ ಹಾಗೂ ಅಂಗಡಿಗಳು ಇವೆ.
ವಿಶೇಷ ಆಕರ್ಷಣೆಗಳು
ನೋಡಬೇಕಾದ ವೈಶಿಷ್ಟ್ಯಗಳು
ನದಿ ಮಧ್ಯದ ಲಿಂಗ. ಇಲ್ಲಿಯ ಪಕ್ಕದಲ್ಲಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಅದ್ಭುತ ದೃಶ್ಯಗಳು. ಸಂಪೂರ್ಣ ಪ್ರದೇಶದ ವೀಕ್ಷಣೆ.
ಛಾಯಾಗ್ರಹಣ
- ನೀರಿನ ಪ್ರತಿಬಿಂಬದಲ್ಲಿ ಲಿಂಗಗಳ ಸೊಗಸು.
ಈಶ್ವರ ಲಿಂಗದ ನೈಸರ್ಗಿಕ ಅಭಿಷೇಕದ ಚಿತ್ರಗಳು.
- ಅರಣ್ಯ ಮತ್ತು ನದಿಯ ಸಂಯೋಜನೆ.
ಸ್ಥಳೀಯ ಪಾಕಪದ್ಧತಿ.
ವಿಶೇಷ ಪದಾರ್ಥಗಳು
ಮಲೆನಾಡಿನ ವಿಶೇಷತೆ ಕಡಿಮೆ ಪಾಲಿಶ್ ಇರುವ ಕೆಂಪಕ್ಕಿ ಅನ್ನದ ಜೊತೆಗೆ ವಿವಿಧ ಪದಾರ್ಥಗಳು ಅಂದರೆ ಅಪ್ಪೇಹುಳಿ ,ಹತ್ತನ
ಅಪ್ಪೇಹುಳಿ,ಚಕ್ಕೆಪೊಳಜಾ, ಕೆಸುವಿನ ಕರಕಲಿ, ಕಟ್ಟ್ನೇ ಸಾರು, ಭೂತಗೊಜ್ಜು.ಸಣ್ಣ ಮೆಣಸು ಉಪಯೋಗಿಸಿ ಮಾಡುವ ಪದಾರ್ಥಗಳು.
ಶೇವಭಾಜಿ,ಕೊಟ್ಟೆಇಡ್ಲಿ,
ದೋಸೆಯ ಪ್ರಕಾರವಾದ ತೆಳ್ಳವು ಜೊತೆ ನೈಸರ್ಗಿಕ ಆಲೆಮನೆ ಬೆಲ್ಲ ತುಪ್ಪ,ಕಬ್ಬಿನ ರಸದ ತೋಡೆದೇವು,
ಹಲಸಿನಕಾಯಿ ಸಮಯದಲ್ಲಿ ಜಗದ್ವಿಖ್ಯಾತ ಹಲಸಿನಕಾಯಿ ಪದಾರ್ಥಗಳು.ಹಲಸಿನಕಾಯಿ ಚಿಪ್ಸ್..ಹಲಸಿನ ಹಣ್ಣಿನ ಕಡಬು
(ಹಲಸಿನಕಾಯಿ ರೈಸ್ ಒಂದು ಇಲ್ಲ, ಅಷ್ಟು ಹಲಸಿನ ಪದಾರ್ಥಗಳು)
ದಾರಿಯಲ್ಲಿ ಭೇಟಿ ನೀಡಬಹುದಾದ ಸಂಸ್ಥೆಗಳು.
ಅಡಿಕೆ ಬೆಳೆಯುವ ರೈತರಿಂದಲೇ ರೈತರಿಗಾಗಿಯೇ ಇರುವಂತಹ ಆದರ್ಶ ,ಮಾದರಿ ಸಹಕಾರಿ ಸಂಸ್ಥೆಗಳು ಭೈರುಂಬೆ,ತಾರಗೋಡನಲ್ಲಿ ಇವೆ.
ಪರಿಸರ ಸಂರಕ್ಷಣೆ. ಪ್ರವಾಸಿಗರ ಜವಾಬ್ದಾರಿ
-ಪ್ಲಾಸ್ಟಿಕ್ ಮುಕ್ತ ಪ್ರವಾಸ
-ಕಸ ನಿರ್ವಹಣೆ
ತಮ್ಮಿಂದ ತಯಾರಿ ಆದ ಕಸ ತಾವೇ ಹಿಂದಕ್ಕೆ ತೆಗೆದುಕೊಂಡು ಹೋಗಿ
-ಪ್ರಕೃತಿ ಸ್ನೇಹಿ** ನಡವಳಿಕೆ
-ಜೈವಿಕ ವೈವಿಧ್ಯತೆ ಸಂರಕ್ಷಣೆ
ಸಮುದಾಯಿಕ ಭಾಗವಹಿಸುವಿಕೆ
- ಸ್ಥಳೀಯ ಜನರೊಂದಿಗೆ ಸಹಕಾರ
- ಸ್ಥಳೀಯ ಉತ್ಪಾದನೆಗಳನ್ನು ಖರೀದಿಸಿ
- ಸಾಂಸ್ಕೃತಿಕ ಗೌರವ.
ಪ್ರವಾಸಿಗರಿಗೆ ಮುಖ್ಯ ಸಲಹೆಗಳು
ಸಿದ್ಧತೆ
*ಸೂಕ್ತ ಉಡುಪು:* ಆರಾಮದಾಯಕ, ಒಣಗುವ ಬಟ್ಟೆಗಳು
. **ನೀರು: ಕುಡಿಯುವ ನೀರು ತಮ್ಮ ಜೊತೆ ಇರಲಿ,ನೀರಿನ ಬಾಟಲಿ ಇಲ್ಲಿ ಎಸೆಯಬೇಡಿ
ಆಹಾರ:** ಹಗುರ ಲಘು ಆಹಾರ
ಪ್ರಥಮ ಚಿಕಿತ್ಸೆ ಕಿಟ್
ಇಲ್ಲಿ ಸ್ನಾನದ ನಂತರ ಬಟ್ಟೆ ಬದಲಾಯಿಸಲು ವ್ಯವಸ್ಥೆ ಇಲ್ಲ.
ಸುರಕ್ಷತೆ
- ಗ್ರೂಪ್‌ನಲ್ಲಿ ಪ್ರವಾಸ ಮಾಡಿ
- ಮಳೆಗಾಲದಲ್ಲಿ ಹೆಚ್ಚಿನ ಎಚ್ಚರಿಕೆ
- ಸ್ಥಳೀಯ ಮಾರ್ಗದರ್ಶಕರ ಸಹಾಯ
ಸಾಂಸ್ಕೃತಿಕ ಶಿಷ್ಟಾಚಾರ
- ಧಾರ್ಮಿಕ ಸ್ಥಳಗಳಲ್ಲಿ ಮರ್ಯಾದೆ
- ಸ್ಥಳೀಯ ಪದ್ಧತಿಗಳಿಗೆ ಗೌರವ
- ಶಾಂತಿಯುತ ವಾತಾವರಣ ಕಾಪಾಡಿ
ಸರಕಾರದ ಸಂಸ್ಥೆಗಳಲ್ಲಿ ಮನವಿ
ನೀರಿನ ರಭಸ, ನೀರಿನಲ್ಲಿ ಮಳೆಗಾಲದಲ್ಲಿ ಬರುವ ಮರದ ದಿಂಬಿಗಳ ಕಾರಣ ಹಲವು ಲಿಂಗಗಳು ಬುಡಮೇಲಾಗಿವೆ. ಹಲವು ಕಾಣದಂತೆ ಆಗಿವೆ. ಪ್ರಸ್ತುತ ಕೆಲವೇ ಕೆಲವು ಕಾಣಸಿಗುತ್ತವೆ. ಸಹಸ್ರಲಿಂಗಗಳು ಕಾಣುವಂತೆ ಮಾಡಲು ಕಾರ್ಯ ಯೋಜನೆಯನ್ನ ಸಿದ್ಧಪಡಿಸಬೇಕು.
ಸಹಸ್ರಲಿಂಗಗಳ ಮೊದಲೇ ಮರದ ದಿಂಬಿಗಳು ಮುಂದೆ ಬಂದು ಅಪ್ಪಳಿಸಿದಂತೆ ಒಂದು ಉಪಾಯವನ್ನು ಮಾಡುವ ಅವಶ್ಯಕತೆ ಎದ್ದು ಕಾಣುತ್ತಿದೆ. ಹೀಗೆ ಹಲವು ವರ್ಷಗಳು ಕಳೆದರೆ ಬಂದಂತಹ ಭಕ್ತರು ಶಾಲ್ಮಲಾ ನದಿಯ ದರ್ಶನ ಒಂದೇ ಮಾಡಿ ಹೋಗುವಂತಾಗಬಹುದು.
ಸಹಸ್ರಲಿಂಗ ಕೇವಲ ಒಂದು ಧಾರ್ಮಿಕ ಸ್ಥಳವಲ್ಲ - ಇದು ಪ್ರಕೃತಿಯ ಅದ್ಭುತ ಕಲಾಕೃತಿ, ಇತಿಹಾಸದ ಸಾಕ್ಷಿ, ಮತ್ತು ಆಧ್ಯಾತ್ಮಿಕ ಅನುಭವದ ಕೇಂದ್ರ. ಶಲ್ಮಲಾ ನದಿಯ ತಟದಲ್ಲಿ ನೂರಾರು ವರ್ಷಗಳಿಂದ ನಿಂತಿರುವ ಈ ಶಿವಲಿಂಗಗಳು ಪ್ರಕೃತಿ ಮತ್ತು ಮಾನವ ಭಕ್ತಿಯ ಸುಂದರ ಸಂಯೋಜನೆಯನ್ನು ಪ್ರತಿನಿಧಿಸುತ್ತವೆ.
ಭಕ್ತರಿಗೆ ಇದು ಆಧ್ಯಾತ್ಮಿಕ ಶಾಂತಿಯ ಸ್ಥಳ, ಪ್ರಕೃತಿ ಪ್ರೇಮಿಗಳಿಗೆ ಅದ್ಭುತ ಅನುಭವ, ಮತ್ತು ಛಾಯಾಗ್ರಾಹಕರಿಗೆ ಅಪೂರ್ವ ದೃಶ್ಯಗಳ ಖಜಾನೆ.
ಸಹಸ್ರಲಿಂಗ - ಅಲ್ಲಿ ಪ್ರಕೃತಿಯೇ ದೇವಾಲಯ, ಕಲ್ಲೇ ದೇವರು!
"ಶತಮಾನಗಳಿಂದ ಶಾಲ್ಮಲಾ ನದಿಯ ಕಲ್ಲುಗಳಲ್ಲಿ ಕೆತ್ತಲಾದ ಶಿವನ ಸಹಸ್ರ ರೂಪಗಳು ನಮಗೆ ಏನು ಹೇಳುತ್ತಿವೆ? ಭಕ್ತಿ ಎಂದರೆ ಭವ್ಯತೆ ಅಲ್ಲ, ಶಾಂತಿ.
ಸಹಸ್ರಲಿಂಗ – ನದಿ, ಕಲ್ಲು, ಜಲಧ್ವನಿ ಮತ್ತು ನಿಶ್ಯಬ್ದತೆಯ ಪಾಠ – ದೇವರನ್ನು ಪ್ರಕೃತಿಯಲ್ಲಿ ಕಾಣು"
ಈ ಸಹಸ್ರಲಿಂಗ ಮುಂದಿನ ತಲೆಮಾರು ನೋಡಬೇಕೇ ? ಬನ್ನಿ ಬೇಡ್ತಿ ವರದಾ ನದಿ ಜೋಡಣೆ ವಿರೋಧಕ್ಕೆ ತಮ್ಮ ಕೈಲಾದ ಅಳಿಲು ಸೇವೆಗೆ ಅಣಿಯಾಗಿ. ಕೇಂದ್ರ, ರಾಜ್ಯ ಸರ್ಕಾರಗಳಲ್ಲಿ ವಿರೋಧ ವ್ಯಕ್ತಪಡಿಸಿ ಯೋಜನೆ ನಿಲ್ಲಿಸುವಂತೆ ಆಗ್ರಹಿಸಿ.
ಇಲ್ಲಾ, ಯೋಜನೆ ಜಾರಿಗೆ ಬರುವ ಮೊದಲು ಕೂನೆಬಾರಿ ಸಹಸ್ರಲಿಂಗದಲ್ಲಿಯ ಪರಮೇಶ್ವರನ ದರ್ಶನ ಪಡೆಯಿರಿ.ಮತ್ತು ಒಂದು ವಿಡಿಯೋ ಮಾಡಿಕೂಳ್ಳಲು ಮರೆಯಬೇಡಿ - ಮುಂದಿನಪೀಳಿಗೆಗೆ- ಜೊತೆಗೆ ನಾವು ಈ ಯೋಜನೆ ವಿರೋಧಿಸಲ್ಲಿ ಎನ್ನುವುದು ಮಾತು ಹೇಳಲು ಮರೆಯಬೇಡಿ ಯಾಕೆಂದರೆ ಇಲ್ಲಿ ಯೋಜನೆ ಜಾರಿಗೆ ಬಂದರೆ ಅಂದಾಜು 1500 ಅಡಿಯ ಆಣೆಕಟ್ಟು ಅಷ್ಟೇ .
ಸಹಸ್ರಲಿಂಗದ ವೀಡಿಯೋ ನೋಡಬೇಕಾದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://youtu.be/eyOmlgTvhRw