ಆಪ್ತ ನ್ಯೂಸ್ ಬೆಂಗಳೂರು:
ಸರ್ಕಾರಿ ಶಾಲೆಗಳ ಐದು ಮಂದಿ ವಿದ್ಯಾರ್ಥಿಗಳು ಭಾರತವನ್ನು ರೊಬೊಟಿಕ್ಸ್ ಒಲಂಪಿಕ್ಸ್ ಎಂದು ಖ್ಯಾತಿ ಪಡೆದಿರುವ ಫರ್ಸ್ಟ್ ಗ್ಲೋಬಲ್ ಚಾಲೆಂಜ್ 2025ರಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಈ ಕಾರ್ಯಕ್ರಮವು ಅಕ್ಟೋಬರ್ 29ರಿಂದ ನವೆಂಬರ್ 1, 2025ರಂದು ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಇದರಲ್ಲಿ ವಿದ್ಯಾರ್ಥಿಗಳು ಅವರ ಹಲವಾರು ತಿಂಗಳಿಂದ ಕೆಲಸ ಮಾಡುತ್ತಿರುವ ಸಮಸ್ಯೆಯ ಹೇಳಿಕೆ ಮತ್ತು ಅದರ ಪರಿಹಾರವನ್ನು ವಿವರಿಸಿದರು ಮತ್ತು ಅವರ ರೊಬೊದ ಪ್ರಾತ್ಯಕ್ಷಿಕೆ ನೀಡಿದರು.
ಈ ವರ್ಷದ ವಸ್ತು, “ಇಕೊ ಈಕ್ವಿಲಿಬ್ರಿಯಂ” ಅಡಿಯಲ್ಲಿ ತಯಾರಾದ ಈ ರೊಬೊ ಆವಾಸಸ್ಥಾನಗಳ ರಕ್ಷಣೆ ಮತ್ತು ಜೀವ ವೈವಿಧ್ಯತೆಯ ಸಂರಕ್ಷೆಯನ್ನು ಉತ್ತೇಜಿಸುವ ಪ್ರಾಯೋಗಿಕ ಪಾರಿಸರಿಕ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶ ಹೊಂದಿದೆ.
ಇಂಡಿಯಾ ಕೋಷೆಂಟ್ ನ ಜನರಲ್ ಪಾರ್ಟ್ನರ್ ಮತ್ತು ಸ್ಟೆಮ್ ಎಜುಕೇಷನ್ ಟ್ರಸ್ಟ್ ಸಹ-ಸಂಸ್ಥಾಪಕ ಗಗನ್ ಗೋಯಲ್ ಅವರ ನಿರ್ದೇಶನದಲ್ಲಿ ರೂಪಿಸಲಾದ ಈ ಯೋಜನೆ ಕುರಿತು ಅವರು, “ಈ ಮಕ್ಕಳು ಹಲವು ತಿಂಗಳಿಂದ ತಡೆರಹಿತವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸೀಮಿತ ಸಂಪನ್ಮೂಲಗಳ ಮತ್ತು ಮಿತಿಯಿರದ ಆಕಾಂಕ್ಷೆಗಳನ್ನು ಹೊಂದಿದ ಕುಟುಂಬಗಳಿಂದ ಬಂದವರು. ಅವರ ಸಾಧನೆ ಮಹತ್ತರವಾದುದು. ಈ ಉಪಕ್ರಮವು ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಕನಸು ಕಾಣಲು, ಹೊಸದನ್ನು ನಿರ್ಮಿಸಲು ಹಾಗೂ ನೇತೃತ್ವ ವಹಿಸಲು ನೆರವಾಗುತ್ತದೆ ಎಂಬ ಭರವಸೆ ಹೊಂದಿದ್ದೇವೆ. ಇದು ಪ್ರತಿಯೊಬ್ಬರೂ ವೃತ್ತಿಪರ ಚೇಂಜ್ ಮೇಕರ್ ಆಗುವ ಕ್ರೀಡೆಯಾಗಿದೆ” ಎಂದರು.
ಆಯ್ಕೆಯಾಗಿರುವ ವಿದ್ಯಾರ್ಥಿಗಳು:
• ನಿಂಗರಾಜ್ (16)- ಮೆಕ್ಯಾನಿಕಲ್ ಲೀಡ್, ಯಂತ್ರಗಳಿಂದ ಸ್ಫೂರ್ತಿ
• ಪರಶುರಾಮ್ (17)- ಐಒಟಿ ಉತ್ಸಾಹಿ ಮತ್ತು ತಾಳ್ಮೆಯಿಂದ ಸಮಸ್ಯೆ ಪರಿಹರಿಸುವವರು
• ಅರ್ಜುನ್ (17)- ಅನ್ವೇಷಕನಾದ ಕ್ರೀಡಾಪಟು, ಶಿಸ್ತು ಮತ್ತು ತಂಡದ ಕೆಲಸಕ್ಕೆ ಖ್ಯಾತಿ
• ಗೌರೇಶ್ (15)- ಪ್ರತಿ ಬಿಡಿಭಾಗವೂ ಸರಿಯಾಗಿ ಚಲಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವ ಲೀಡ್ ಪ್ರೋಗ್ರಾಮರ್
• ಚಂದನ್ (14) – ಕಿರಿಯ, ಸ್ವಯಂ-ಬೋಧನೆ ಪಡೆದ ಎಲೆಕ್ಟ್ರಾನಿಕ್ಸ್ ಪ್ರತಿಭೆ
ಒಟ್ಟಿಗೆ ಅವರು ಭಾರತದ ಸಾಮರ್ಥ್ಯ ತೋರುವ ಸ್ಥಳೀಯ ರೊಬೊ ನಿರ್ಮಿಸಿದ್ದಾರೆ. ಅಟಲ್ ಟಿಂಕರಿಂಗ್ ಲ್ಯಾಬ್ಸ್ ಮತ್ತು ಅಮೆಜಾನ್ ಫ್ಯೂಚರ್ ಎಂಜಿನಿಯರ್ (ಎಎಫ್ಇ) ಮಾರ್ಕೆಟ್ ಪ್ಲೇಸ್ ಲ್ಯಾಬ್ಸ್ ಹಾಗೂ ಸ್ಟೆಮ್ ಎಜುಕೇಷನ್ ಟ್ರಸ್ಟ್ ನೆರವಾಗಿವೆ.