ತಂತ್ರಜ್ಞಾನದ ಲೋಕದಲ್ಲಿ ಹೊಸ ಅಧ್ಯಾಯ: ಬೆಂಗಳೂರಿನಲ್ಲಿ 'AI ಭಗವದ್ಗೀತೆ' ಪುಸ್ತಕ ಹಾಗೂ 'ಟೆಕ್ ವೈದ್ಯ' ಪೋರ್ಟಲ್ ಲೋಕಾರ್ಪಣೆ
ಆಪ್ತ ನ್ಯೂಸ್ ಬೆಂಗಳೂರು:
ತಂತ್ರಜ್ಞಾನ ಮತ್ತು ಅಧ್ಯಾತ್ಮದ ಅಪೂರ್ವ ಸಂಗಮಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಲಿದೆ. ಫೆಬ್ರವರಿ 1ರಂದು ಗವಿಪುರಂನ ಉದಯಭಾನು ಕಲಾಸಂಘದಲ್ಲಿ 'AI ಭಗವದ್ಗೀತೆ' ಎಂಬ ವಿನೂತನ ಪುಸ್ತಕದ ಬಿಡುಗಡೆ ಹಾಗೂ 'ಟೆಕ್ ವೈದ್ಯ' ವೆಬ್ ಪೋರ್ಟಲ್‌ನ 2.0 ಆವೃತ್ತಿಯ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವಿಶೇಷತೆ ಏನು?
"ಪ್ರತಿ ಬೈಟ್‌ನಲ್ಲೂ ತಂತ್ರಜ್ಞಾನ" ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ 'ಟೆಕ್ ವೈದ್ಯ' ಸಂಸ್ಥೆಯು, ಡಿಜಿಟಲ್ ಯುಗದ ಅವಶ್ಯಕತೆಗೆ ತಕ್ಕಂತೆ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹಲವು ಸಂಗತಿಗಳನ್ನು ತೆರೆದಿಡಲಿದೆ. ಇದು ತಂತ್ರಜ್ಞಾನ ಜಗತ್ತಿನಲ್ಲಿ ಕಾಲಿಡುವ ಎಲ್ಲರ ಪಾಲಿಗೆ ಭಗವದ್ಗೀತೆಯಂತೆ ಹೊಸದಿಕ್ಕನ್ನು ತೋರಿಸಲಿದೆ.
ಗಣ್ಯರ ಉಪಸ್ಥಿತಿ:
ಈ ಅದ್ಧೂರಿ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಝೀ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ಸುಧೀಂದ್ರ ಭಾರದ್ವಾಜ್, ಖ್ಯಾತ ಚಿಂತಕ ರೋಹಿತ್ ಚಕ್ರತೀರ್ಥ, ಸೈಬರ್ ಕ್ರೈಮ್ ಎಸಿಪಿ ವಿಜಯ್ ಕುಮಾರ್ ಹಡಗಲಿ, ಜನಪ್ರಿಯ ಧ್ವನಿ ಕಲಾವಿದ ಪ್ರದೀಪ ಬಡೆಕ್ಕಿಲ ಹಾಗೂ 'ಪ್ರವಾಸಿ ಪ್ರಪಂಚ'ದ ನವೀನ್ ಸಾಗರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಿಂಧು ವೈದ್ಯ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ನಾಗರಾಜ ವೈದ್ಯ ಮತ್ತು ಜೈತ್ರಿಕಾ ವೈದ್ಯ ಅವರ ನೇತೃತ್ವದ 'ಟೆಕ್ ವೈದ್ಯ' ತಂಡವು ತಂತ್ರಜ್ಞಾನ ಆಸಕ್ತರಿಗೆ ಹಾಗೂ ಪುಸ್ತಕ ಪ್ರೇಮಿಗಳಿಗೆ ಈ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ ನೀಡಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0











