ಕುಮಟಾದಲ್ಲಿ ದಿ. ನ.೨೧ಕ್ಕೆ ಗ್ರೀನ್ ಕಾರ್ಡ ಪ್ರಮುಖರ ಸಭೆ
ಆಪ್ತ ನ್ಯೂಸ್ ಕುಮಟಾ:
ಅರಣ್ಯವಾಸಿಗಳ ಮುಂಬರುವ ಮುಂದಿನ ಹೋರಾಟದ ರೂಪ ರೇಷೆ ನಿರ್ಧರಿಸುವ ಕುರಿತು ಎಲ್ಲಾ ತಾಲೂಕಿನ ಗ್ರೀನ್ ಕಾರ್ಡ್ ಪ್ರಮುಖರ ಸಭೆಯನ್ನ ನ.೨೧ ಶುಕ್ರವಾರದಂದು, ಮದ್ಯಾಹ್ನ ೨.೩೦ ಕ್ಕೆ ಸ್ಥಳೀಯ ಮಹಾಸತಿ ಕಲ್ಯಾಣ ಮಂಟಪದಲ್ಲಿ ಸಂಘಟಿಸಲಾಗಿದೆ ಎಂದು ತಾಲೂಕಾದ್ಯಕ್ಷ ಮಂಜುನಾಥ ಮರಾಠಿ, ನಾಗೂರ್ ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾದ್ಯಕ್ಷರಾದ ರವಿಂದ್ರ ನಾಯ್ಕ ಉಪಸ್ಥಿತರಿದ್ದು ,ಭೂಮಿ ಹಕ್ಕಿಗಾಗಿ ಹಾಗೂ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಸಂಬಧಿಸಿ ಮುಂದಿನ ಹೋರಾಟದ ರೂಪ ರೇಷೆಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಎಲ್ಲಾ ಹೋರಾಟಗಾರರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿರಲು ಅಧ್ಯಕ್ಷ ಮಂಜುನಾಥ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



