ಹವ್ಯಕರ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ

Oct 15, 2025 - 19:12
 0  182
ಹವ್ಯಕರ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ

ಆಪ್ತ ನ್ಯೂಸ್ ಶಿರಸಿ:
ಪೂಗ ಟ್ರಸ್ಟ್ ಪ್ರಸ್ತುತ ಪಡಿಸುವ ಎಚ್ ಬಿ ಎಲ್ ಶಿರಸಿ., 3 ನೇ ಆವೃತ್ತಿಯ ಹವ್ಯಕರ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಪಂದ್ಯಾವಳಿಯು ಅಕ್ಟೊಬರ್ 18 ಹಾಗೂ 19 ರಂದು ಶಿರಸಿಯ ಯಲ್ಲಾಪುರ ರಸ್ತೆಯಲ್ಲಿರುವ ಅರಣ್ಯ ಭವನದಲ್ಲಿ ನಡೆಯಲಿದೆ.
ಅಕ್ಟೊಬರ್ 18 ರಂದು ಮುಂಜಾನೆ 10.30 ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಕ್ಟೊಬರ್ 19 ರಂದು ಸಂಜೆ 7 ಗಂಟೆಯಿಂದ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. 5 ತಂಡಗಳು 9 ಬಗೆಯ ಪಂದ್ಯಾವಳಿಗಳನ್ನು ಆಡಲಿದ್ದು ಪ್ರಶಸ್ತಿಗಾಗಿ ಸೆಣೆಸಾಡಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 2