ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಪ್ರೋತ್ಸಾಹಧನ

Nov 20, 2025 - 21:14
 0  40
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಪ್ರೋತ್ಸಾಹಧನ

ಆಪ್ತ ನ್ಯೂಸ್ ಯಲ್ಲಾಪುರ:

ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗಳಿಸಿ ರಾಷ್ಟಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಪಟ್ಟಣದ ಮರ್ಚಂಟ್ಸ್ ಕೋ ಆಪ್ ಕ್ರೆಡಿಟ್ ಸೋಸೈಟಿ ಪ್ರೋತ್ಸಾಹ ಧನ ನೀಡಿ ಗೌರವಿಸಿದೆ.

ತಾಲೂಕಿನ ನಂದೊಳ್ಳಿ ಸರಕಾರಿ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಎಂ. ನಿಯತಿ ಯಾದಗಿರಿಯ ಶಹಾಪುರದಲ್ಲಿ ನಡೆದ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗಳಿಸಿ ತ್ರಿಪುರಾದಲ್ಲಿ ನ. 27 ರಂದು ನಡೆಯಲಿರುವ ರಾಷ್ಟಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾಳೆ. ರಾಜ್ಯ ಮಟ್ಟದ ಸ್ಪರ್ಧೇಯಲ್ಲಿ ಪ್ರಶಸ್ತಿ ಗಳಿಸಿ ಥಾಲೂಕಿಗೆ, ಜಿಲ್ಲೆಗೆ ಕೀರ್ತಿ ತಂದ ಈಕೆಯನ್ನು ಮರ್ಚಂಟ್ಸ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿ ಪ್ರೋತ್ಸಾಹಿಸಿ ರಾಷ್ಟçಮಟ್ಟದಲ್ಲಿ ಪ್ರಶಸ್ತಿಗಳಿಸಲಿ ಎಂದು ಹಾರೈಸಿದೆ.

ಸಂಘದ ಕಚೇರಿಯಲ್ಲಿ ರೂ. 5 ಸಾವಿರ ರೂ. ಚೆಕ್ ಅನ್ನು ಸಂಘದ ಉಪಾಧ್ಯಕ್ಷ ವೇದವ್ಯಾಸ ಹೆಗಡೆ ನಿಯತಿಗೆ ವಿತರಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಸಂತೋಷ ಗುಡಿಗಾರ, ಇಂದ್ರಜೀತ ಮಹಾಲೆ, ಮುಖ್ಯ ಕಾರ್ಯನಿರ್ವಾಹಕ ರಾಮಚಂದ್ರ ಭಟ್ಟ, ನಿವೃತ್ತ ಕಾರ್ಯನಿರ್ವಾಹಕ ನಾಗರಾಜ ಮದ್ಗುಣಿ, ನಿಯತಿಯ ತಂದೆ ಮಹಾಬಲೇಶ್ವರ ಭಟ್ಟ ಶಿಂಬಳಗಾರ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0