ಬಿಲ್ಪತ್ರೆ (ಬಿಲ್ವ)ಯಿಂದ ಇಷ್ಟೆಲ್ಲ ಉಪಯೋಗ ಇದೆಯಾ?

Nov 3, 2025 - 11:47
 0  68
ಬಿಲ್ಪತ್ರೆ (ಬಿಲ್ವ)ಯಿಂದ ಇಷ್ಟೆಲ್ಲ ಉಪಯೋಗ ಇದೆಯಾ?

ಮಾಹಿತಿ:
ಡಾ. ಸಾಕ್ಷಿ ರವಿಕಿರಣ ಪಟವರ್ಧನ್

~~~~~~~~~~~~~~~~~~~~~~~~~

ಬಿಲ್ವ (Aegle marmelos) ಎಂಬುದು ಭಾರತದಾದ್ಯಂತ ಪ್ರಸಿದ್ಧವಾದ ಪವಿತ್ರ ಮತ್ತು ಔಷಧೀಯ ವೃಕ್ಷವಾಗಿದೆ. ಇದು ಶಿವನಿಗೆ ಅತ್ಯಂತ ಪ್ರಿಯವಾದ ವೃಕ್ಷವಾಗಿದ್ದು, ದೇವಾಲಯಗಳ ಆವರಣದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ವೃಕ್ಷದ ಹಣ್ಣು, ಎಲೆ ಮತ್ತು ಬೇರು - ಎಲ್ಲವೂ ಔಷಧೀಯ ಮಹತ್ವವನ್ನು ಹೊಂದಿವೆ.


ಬಿಲ್ವ : ಆಯುರ್ವೇದದಲ್ಲಿ ಉಲ್ಲೇಖಿತವಾದ ಶಕ್ತಿಶಾಲಿ ಅತಿಸಾರ ನಾಶಕ ಔಷಧಿ

 बिल्वं पुरीषभेदं वाति गमयतीति सङ्ग्राहित्वात् ।
(ಬಿಲ್ವವು ತನ್ನ ಸಂಗ್ರಾಹಿ ಗುಣದಿಂದ ಅತಿಸಾರವನ್ನು ನಿಲ್ಲಿಸುತ್ತದೆ)
ಆಯುರ್ವೇದೀಯ ಗುಣಧರ್ಮಗಳು
ದೋಷ ಪರಿಣಾಮ: ವಾತ-ಕಫ ಶಾಮಕ
ಪ್ರಮುಖ ಔಷಧೀಯ ಕರ್ಮಗಳು
ದೀಪನ - ಹಸಿವನ್ನು ಹೆಚ್ಚಿಸುತ್ತದೆ
ಪಾಚನ - ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ
ಸಂಗ್ರಾಹಿ - ಅತಿಸಾರವನ್ನು ನಿಲ್ಲಿಸುತ್ತದೆ
ರಕ್ತಸ್ತಂಭಕ - ರಕ್ತ ಹೆಪ್ಪುಗಟ್ಟಿಸುತ್ತದೆ

ಪ್ರಮುಖ ಔಷಧೀಯ ಉಪಯೋಗಗಳು

1. ಅತಿಸಾರ (Diarrhoea)
ಪಕ್ವವಾಗದ ಬಿಲ್ವ ಹಣ್ಣಿನ ರಸವನ್ನು ಬಳಸುತ್ತಾರೆ
ರಕ್ತಮಿಶ್ರಿತ ಬೇಧಿಯಲ್ಲಿ ಅತ್ಯಂತ ಪರಿಣಾಮಕಾರಿ
IBS (Irritable Bowel Syndrome) ನಿವಾರಣೆಗೆ ಉಪಯುಕ್ತ

2. ವಾಂತಿ ನಿವಾರಣೆ (Vomiting)
ಬಿಲ್ವ + ಶುಂಠಿ ಕಷಾಯವು ವಾಂತಿಯನ್ನು ತಡೆಯುತ್ತದೆ
ಜೀರ್ಣಶಕ್ತಿಯನ್ನು ಬಲಪಡಿಸುತ್ತದೆ

3. ಅರುಚಿ ನಿವಾರಣೆ (ಬಾಯಿ ರುಚಿ)
ವಿಧಾನ: ಬಿಲ್ವದ ಹಣ್ಣು + ಏಲಕ್ಕಿ + ಸಕ್ಕರೆ + ಅರಳು (Parched paddy)
ಪರಿಣಾಮ: ಹಸಿವು ಹೆಚ್ಚುತ್ತದೆ

4. ಮೂಲವ್ಯಾಧಿ (Piles)
ಚಿಕಿತ್ಸೆ: ಬಿಲ್ವದ ಕಷಾಯದಿಂದ ಸಿಟ್ಜ್ ಬಾತ್ (Sitz bath)
ಫಲಿತಾಂಶ: ಉಪಶಮನ ಮತ್ತು ನೋವು ಕಡಿಮೆ

5. ಇತರ ಉಪಯೋಗಗಳು
ಜ್ವರ ನಿವಾರಣೆ
ಬೊಜ್ಜು ನಿಯಂತ್ರಣ
ದಶಮೂಲಾದಿ ಕಷಾಯಗಳಲ್ಲಿ ಪ್ರಮುಖ ಘಟಕ.


ಮುಖ್ಯ ಎಚ್ಚರಿಕೆಗಳು
ಸೀಮಿತ ಬಳಕೆ: ವನಸ್ಪತಿಗಳನ್ನು ಇತಿಮಿತಿಯಲ್ಲಿ, ಅವಶ್ಯಕತೆ ಇದ್ದಾಗ ಮಾತ್ರ ಉಪಯೋಗಿಸಿ
ವೈದ್ಯಕೀಯ ಸಲಹೆ: ಯಾವುದೇ ಚಿಕಿತ್ಸೆಗಾಗಿ  ವನಸ್ಪತಿ ಪ್ರಯೋಗದ ಮುಂಚೆ ನೋಂದಾಯಿತ ಆಯುರ್ವೇದ ವೈದ್ಯರ ಸಲಹೆ ಅನಿವಾರ್ಯ
ಸ್ವಯಂ ಚಿಕಿತ್ಸೆ ಬೇಡ: ಸ್ವಯಂ ಚಿಕಿತ್ಸೆಯಿಂದ ದೂರವಿರಿ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1