ಭೃಂಗರಾಜ (Eclipta alba / Wedelia calendulacea)ದಿಂದ ಇಷ್ಟೆಲ್ಲ ಉಪಯೋಗ ಇದೆಯಾ?
Dr. Sakshi Ravikiran Patwardhan
ಡಾ. ಸಾಕ್ಷಿ ರವಿಕಿರಣ್ ಪಟವರ್ಧನ್
******************************
ಭೃಂಗರಾಜವು ಆಯುರ್ವೇದದಲ್ಲಿ ಪ್ರಸಿದ್ಧವಾದ ಔಷಧಿಯಾಗಿದ್ದು, ಮುಖ್ಯವಾಗಿ ಕೂದಲಿನ ಆರೋಗ್ಯ ಹಾಗೂ ಚರ್ಮರೋಗಗಳಿಗೆ ಉಪಯುಕ್ತವಾಗಿದೆ. "ಕೇಶ್ಯ", "ರಸಾಯನ", "ದೀರ್ಘಾಯುಷ್ಯಕರ" ಎಂಬ ಗುಣಗಳಿಂದ ಇದು ಪ್ರಸಿದ್ಧವಾಗಿದೆ. ಇದನ್ನು ಸಾಮಾನ್ಯವಾಗಿ ಕೇಶ ರಾಜ, ಭೃಂಗ, ಅಥವಾ ಭೃಂಗರಾಜ ಎಂದು ಕರೆಯುತ್ತಾರೆ.
ಶಾಸ್ತ್ರೀಯ ಉಲ್ಲೇಖ
"ತಿಲತೈಲಂ ಭೃಂಗರಾಜಸ್ಯ ಸಿದ್ಧಂ ನಯನಮೇಧಯೇ।
ಅಸನಕಾಷ್ಠನಿರ್ಧೂತಂ ದತ್ತಂ ಶಿರಸಿ ಪಾಣಿಭಿಃ॥"
(ಚ.ಸಂ. ಚಿಕಿ. 26/40)
ಅರ್ಥ: ತಿಲತೈಲದಲ್ಲಿ ಭೃಂಗರಾಜ ಸ್ವರಸ ಹಾಗೂ ಅಸನಕಾಷ್ಠ ಮಿಶ್ರಣ ಮಾಡಿ ಸಿದ್ಧಿಸಿದ ತೈಲವನ್ನು ಶಿರಸ್ಸಿಗೆ ಲೇಪಿಸಿದರೆ ದೃಷ್ಟಿವರ್ಧಕ ಹಾಗೂ ಕೇಶ್ಯ ಪ್ರಯೋಜನ ದೊರೆಯುತ್ತದೆ.
ವೈಜ್ಞಾನಿಕ ವರ್ಗೀಕರಣ
ವೈಜ್ಞಾನಿಕ ಹೆಸರು: Eclipta alba Hassk / Wedelia calendulacea Less.
ಕುಟುಂಬ:Asteraceae
ದೋಷಘ್ನತೆ
ಭೃಂಗರಾಜವು ವಾತ-ಪಿತ್ತ ಶಾಮಕ ಆಗಿದ್ದು, ಕಫ ವೃದ್ಧಿಕರಗುಣವೂ ಹೊಂದಿದೆ.
ಔಷಧೀಯ ಗುಣಗಳು
ರಕ್ತಶೋಧಕ(Blood purifier)
ಕೇಶ್ಯ (Promotes hair growth)
ರಸಾಯನ (Rejuvenative)
ಯಕೃತ್ ರಕ್ಷಕ (Hepatoprotective)
ದಾಹಹರ(Relieves burning sensation)
ಕಣ್ಣಿನ ಆರೋಗ್ಯ ಉತ್ತಮ (Beneficial for eyes)
Wound healing,
ದೀರ್ಘಾಯುಷ್ಯಕರ
ಚಿಕಿತ್ಸಾತ್ಮಕ ಉಪಯೋಗಗಳು
1. ಕೂದಲು ಉದುರುವುದು ಮತ್ತು ಬಿಳಿ ಕೂದಲು
(Hair fall, premature greying)
- ಭೃಂಗರಾಜ ತೈಲವನ್ನು ನಿಯಮಿತವಾಗಿ ಉಪಯೋಗಿಸಬಹುದು
2. ತಲೆ ನೋವು ನಿವಾರಣೆ
(Headache relief)
- ನಸ್ಯ ಕ್ರಿಯೆಯಲ್ಲಿ ಉಪಯೋಗ
3. ಕಾಮಲೆ ಮತ್ತು ಯಕೃತ್ ರೋಗಗಳು
(Jaundice, Liver disorders)
- ಭೃಂಗರಾಜ ಸ್ವರಸ ಅಥವಾ ಚೂರ್ಣವನ್ನು ಉಪಯೋಗಿಸಬಹುದು
4. ದೃಷ್ಟಿ ವೃದ್ಧಿಗಾಗಿ
(To improve vision)
- ಭೃಂಗರಾಜ ಸ್ವರಸದಿಂದ ತೈಲ ಸಿದ್ಧಿ ಮಾಡಿ ಉಪಯೋಗಿಸಬಹುದು.
ಆಧುನಿಕ ಸಂಶೋಧನಾ ಮಾಹಿತಿ
ಭೃಂಗರಾಜದ ಎಥನಾಲಿಕ್ ಎಕ್ಸ್ಟ್ರಾಕ್ಟ್‌ನಿಂದ ಈ ಕೆಳಗಿನ ಕ್ರಿಯೆಗಳು ದೃಢಪಡಿಸಲಾಗಿದೆ:
Anti-diabetic (ಮಧುಮೇಹ ನಿರೋಧಕ)
Anti-hyperlipidemic (ಕೊಲೆಸ್ಟರಾಲ್ ನಿಯಂತ್ರಣ)
Hepatoprotective (ಯಕೃತ್ ರಕ್ಷಕ)
ಪ್ರಮುಖ ರಾಸಾಯನಿಕ ಸಂಯುಕ್ತಗಳು
ಇತರ ಅಧ್ಯಯನಗಳು ಇದರಲ್ಲಿ ಇರುವ ಈ ಕೆಳಗಿನ ರಾಸಾಯನಿಕಗಳು ಚರ್ಮ ಹಾಗೂ ಯಕೃತ್ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿವೆ:
- ವೆಡಿಲ್ಯಾಕ್ಟೋನ್ (Wedelolactone)
- ಎಕ್ಲಿಪ್ಟೈನ್ (Ecliptine)
- β-ಅಮಿರಿನ್ (β-Amyrin)
- ಸಿಗ್ಮಾಸ್ಟೆರೋಲ್ (Stigmasterol)
ಜಾಗೃತೆ
ವನಸ್ಪತಿಗಳನ್ನು ಇತಿಮಿತಿಯಲ್ಲಿ ಅವಶ್ಯಕತೆ ಇದ್ದಾಗ ಮಾತ್ರ ಉಪಯೋಗಿಸಿದರೆ ಸೂಕ್ತ.
*ದಯವಿಟ್ಟು ಯಾವುದೇ ಚಿಕಿತ್ಸೆಗಾಗಿ, ಭೃಂಗರಾಜ ಹೊಟ್ಟೆಗೆ ತೆಗೆದುಕೊಳ್ಳುವ ಮುಂಚೆ ನೋಂದಾಯಿತ ವೈದ್ಯರ ಸಲಹೆ ಪಡೆಯಿರಿ.
What's Your Reaction?
Like
1
Dislike
0
Love
1
Funny
0
Angry
0
Sad
0
Wow
1



