ಲೋಳೆಸರದಿಂದ ಎಷ್ಟೆಲ್ಲ ಉಪಯೋಗ ಇದೆ ಗೊತ್ತಾ?

Oct 29, 2025 - 09:14
 0  72
ಲೋಳೆಸರದಿಂದ ಎಷ್ಟೆಲ್ಲ ಉಪಯೋಗ ಇದೆ ಗೊತ್ತಾ?

~ಡಾ.ಸಾಕ್ಷಿ  ರವಿಕಿರಣ ಪಟವರ್ಧನ್  
Dr. Sakshi Ravikiran Patwardhan

-----------------

 Aloe vera 
 ಲೋಳೆಸರ, ಕತ್ತಾಳೆ
“ಕುಮಾರಿ ಶೀತಲ, ಪಿತ್ತ ಕಫಶಮನ, ಗಾಯಹಿತ, ರಸಾಯನಂ ದೈಹಿಕಲಾಭಕಾರಿಣೀ।”

ದೇಹಕ್ಕೆ ಶಕ್ತಿ  ನೀಡುತ್ತದೆ
ಉಷ್ಣತೆ (ಪಿತ್ತ) ಮತ್ತು ಕಫವನ್ನು ಕಡಿಮೆ ಮಾಡುತ್ತದೆ
ಕಣ್ಣಿಗೆ ಒಳ್ಳೆಯದು, ದೃಢತೆ ನೀಡುತ್ತದೆ ಮುಟ್ಟಿನ ತೊಂದರೆಗಳಿಗೆ  ಉಪಯೋಗ .

1. ಕಾಮಾಲೆ :
ಕುಮಾರಿ ರಸವನ್ನು ಉಪ್ಪು, ಅರಿಶಿನ ಅಥವಾ ಬೆಲ್ಲದೊಂದಿಗೆ ಕುಡಿಯುವುದರಿಂದ ಯಕೃತ್ತು (liver) ಮತ್ತು ಪ್ಲೀಹ (spleen) ಆರೋಗ್ಯ ಉತ್ತಮವಾಗುತ್ತದೆ.

2. ಗಾಯ ಮತ್ತು ಊತ :
ಗಾಯ / ಹುಣ್ಣು: ಕುಮಾರಿ ರಸವನ್ನು ಜೀರಿಗೆಯೊಂದಿಗೆ ಬೆರೆಸಿ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ.
ಸುಟ್ಟ ಗಾಯ: 
ರಸ ಹಚ್ಚಿದರೆ ತಂಪು ಸಿಕ್ಕುತ್ತದೆ, ನೋವು ಮತ್ತು ಕೆಂಪು ಕಡಿಮೆಯಾಗುತ್ತದೆ.
3. ಮಲಬದ್ಧತೆ 
ಹೊಟ್ಟೆ ಶುದ್ಧಿಗೆ ಸಹಾಯ ಮಾಡುತ್ತದೆ.
4. ವಯಸ್ಸನ್ನು ತಡೆಯುವುದು : 
ನಿತ್ಯ ಸೇವನೆ ದೇಹಕ್ಕೆ ಶಕ್ತಿ ನೀಡುತ್ತದೆ, ಇತರ ಕಾಯಿಲೆಗಳನ್ನು ತಡೆಯುತ್ತದೆ.

ಜಾಗೃತೆ: ವನಸ್ಪತಿಗಳನ್ನು  ಇತಿಮಿತಿಯಲ್ಲಿ ಅವಶ್ಯಕತೆ ಇದ್ದಾಗ ಮಾತ್ರ 
ಉಪಯೋಗಿಸಿದರೆ ಸೂಕ್ತ..
ದಯವಿಟ್ಟು ಯಾವುದೇ ಚಿಕಿತ್ಸೆಗಾಗಿ , ಲೋಳೆಸರ ಹೊಟ್ಟೆಗೆ ತೆಗೆದುಕೊಳ್ಳುವ ಮುಂಚೆ ನೋಂದಾಯಿತ ವೈದ್ಯರ ಸಲಹೆ ಪಡೆಯಿರಿ.

What's Your Reaction?

Like Like 3
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1