ಅರಣ್ಯ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ: ಬ್ಯೂಟಿ ಪಾರ್ಲರ್ ಮಾಲಕಿ ಸೇರಿ ಇಬ್ಬರ ವಿರುದ್ಧ ದೂರು
ಆಪ್ತ ನ್ಯೂಸ್ ಶಿರಸಿ:
ಅರಣ್ಯ ಇಲಾಖೆಯಲ್ಲಿ ಹುದ್ದೆ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಪಡೆದು ಪಂಗನಾಮ ಹಾಕಿರುವ ಬಗ್ಗೆ ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರಸಿಯ ಬಸ್ತಿಗಲ್ಲಿಯಲ್ಲಿರುವ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಶ್ರೇಯಾ ಸಂತೋಷ ವರ್ಣೇಕರ ಹಾಗೂ ಧಾರವಾಡದ ಫಾತಿಮಾ ಅಲಿಯಾಸ್ ಜಾಸ್ಮಿನ್ ಶೇಕ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಮೂಲತಃ ಬೆಂಗಳೂರಿನ ಬನಶಂಕರಿ ನಿವಾಸಿ ಹಾಲಿ ಶಿರಸಿ ತಾಲೂಕು ಕುಳವೆ ಗ್ರಾಮದಲ್ಲಿ ವಾಸವಿರುವ ಶ್ರೀಮತಿ ಶಾಂತಲಾ ಕೋಂ ಅನಿರುದ್ಧ ಹೆಗಡೆ ಎನ್ನುವವರು ವಂಚನೆ ಕುರಿತು ದೂರು ನೀಡಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ತಮಗೆ ಹಾಗೂ ತನ್ನ ತಂಗಿ ಶೀತಲ್ ಹಾಗೂ ತಂಗಿ ಸ್ನೇಹಿತೆ ಕೀರ್ತಿ ಮತ್ತು ಯಶೋಧ ಎಂಬುವರಿಗೆ ಲಕ್ಷಾಂತರ ರೂಪಾಯಿಗಳನ್ನು ಇಲಾಖೆಯ ಪೀಲ್ಡ್ ಆಫೀಸರ್ ಎಂದು ಪರಿಚಯ ಮಾಡಿಸಿ ಧಾರವಾಡದ ಫಾತಿಮಾ ಅಲಿಯಾಸ್ ಜಾಸ್ಮಿನ್ ಖಾತೆಗೆ ಜಮಾ ಮಾಡಿಸಿಕೊಂಡು,ಈಗ ನೌಕರಿ ನೀಡದೆ ಹಣವನ್ನೂ ವಾಪಸ್ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



