ಸಾಹಿತ್ಯ ಪರಿಷತ್ತಿನಿಂದ 'ಕನ್ನಡ ಕಾರ್ತಿಕ : ಅನುದಿನ -ಅನುಸ್ಪಂದನ'

(ರಾಜ್ಯೋತ್ಸವದ ಭಾಗವಾಗಿ ನವೆಂಬರ್ ತಿಂಗಳಿಡಿ ಸಾಹಿತ್ಯ ಪಯಣ )

Oct 29, 2025 - 11:25
Oct 29, 2025 - 11:26
 0  23
ಸಾಹಿತ್ಯ ಪರಿಷತ್ತಿನಿಂದ 'ಕನ್ನಡ ಕಾರ್ತಿಕ : ಅನುದಿನ -ಅನುಸ್ಪಂದನ'

ಆಪ್ತ ನ್ಯೂಸ್ ದಾಂಡೇಲಿ:

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕಗಳ ಸಯೋಗದೊಂದಿಗೆ ರಾಜ್ಯೋತ್ಸವದ ಭಾಗವಾಗಿ ನವೆಂಬರ್ ತಿಂಗಳಿಡೀ 'ಕನ್ನಡ ಕಾರ್ತಿಕ : ಅನುದಿನ- ಅನುಸ್ಪಂದನ' ಎಂಬ ಶೀರ್ಷಿಕೆಡಿಯಲ್ಲಿ  ನಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು, ಜಿಲ್ಲಾ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನಗಳ ಜೊತೆಗೆ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಕಳೆದ ಮೂರು ವರ್ಷಗಳಿಂದ 'ಕನ್ನಡ ಕಾರ್ತಿಕ' ಕಾರ್ಯಕ್ರಮ ಯಶಸ್ಸನ್ನು ಕಾಣುವ ಜೊತೆಗೆ,  ಜನರ ಮನೆ ಮಾತಾಗಿದೆ. ಈ ವರ್ಷ ಕೂಡ 'ಕನ್ನಡ ಕಾರ್ತಿಕ: ಅನುದಿನ- ಅನು ಸ್ಪಂದನ' ಕಾರ್ಯಕ್ರಮವನ್ನು ಮುಂದುವರಿಸಲಾಗಿದ್ದು ರಾಜ್ಯೋತ್ಸವದ ನವೆಂಬರ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ನಿತ್ಯ ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತವೆ. ಆಯಾ ತಾಲೂಕುಗಳಲ್ಲಿ ನಡೆಯುವ ನಿಗದಿತ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದುಮನವಿ ಮಾಡಿದ್ದಾರೆ. 

ನವೆಂಬರ್ 1 ರಂದು ಮುಂಜಾನೆ 8 ಗಂಟೆಗೆ ದಾಂಡೇಲಿಯ ಸಾಹಿತ್ಯ ಭವನದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ,  8.30 ಕ್ಕೆ 'ಕನ್ನಡ ಕಾರ್ತಿಕ' ದ ಉದ್ಘಾಟನಾ ಸಮಾರಂಭ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು ನವಂಬರ ೩೦ ರವರೆಗೆ ಜಿಲ್ಲೆಯ ಆಯಾ ತಾಲೂಕುಗಳಲ್ಲಿ ಪ್ರತಿನಿತ್ಯ ಕಾರ್ಯಕ್ರಮ ನಡೆಸಲಾಗುವುದು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಆಯಾ ತಾಲೂಕಿನ ಸಾಹಿತ್ಯಾಸಕ್ತರು,  ಕಸಾಪ ಆಜೀವ ಸದಸ್ಯರು ಭಾಗವಹಿಸಿ ಕನ್ನಡ ಕಾರ್ತಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಜಾರ್ಜ್ ಫರ್ನಾಂಡೀಸ್   ಗೌರವ  ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0